

ಮೂಡಬಿದಿರೆ: ಮಾಂಟ್ರಾಡಿ ಗ್ರಾಮದ ಕರ್ನಲ್ ಗುಡ್ಡೆಯ ನಿವಾಸಿ ಸುಂದರ ಸುವರ್ಣ ರವರು ಏಪ್ರಿಲ್ 24 ಬುಧವಾರದಂದು ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದು ನಾಪತ್ತೆಯಾಗಿದ್ದಾರೆ.
ಇವರಿಗೆ ಸುಮಾರು 75 ವರ್ಷ ವಯಸ್ಸಾಗಿದ್ದು ಬಲಗೈ ಬಲಹೀನವಾಗಿದೆ. ಈ ಬಗ್ಗೆ ಮೂಡಬಿದಿರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇವರು ಎಲ್ಲಿಯಾದರೂ ಕಂಡು ಬಂದರೆ 9663889739, 8867145764 ಈ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.