Recent Posts

ಶಿರೂರು ಗುಡ್ಡ ಕುಸಿತ: ಗಂಗಾವಳಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ.. ಎಂಟಕ್ಕೆರಿದ ಮೃತರ ಸಂಖ್ಯೆ

ಅಂಕೋಲಾ : ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮಂಗಳವಾರ ಮುಂಜಾನೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಇನ್ನೊಂದು ಮಹಿಳೆಯ‌ ಮೃತದೇಹ ಪತ್ತೆಯಾಗಿದ್ದು ಇದರಿಂದ ಒಟ್ಟು ಸಾವಿನ ಸಂಖ್ಯೆ ಇದಿಗ ಎಂಟಕ್ಕೆರಿದೆ. ಗಂಗಾವಳಿ ನದಿ ತೀರದ ಉಲುವರೆ ಗ್ರಾಮದ ಒರ್ವ ಮಹಿಳೆ ಸಣ್ಣು ನಾಪತ್ತೆ ಆಗಿರುವ ಮಾಹಿತಿ ಇದೀಗ ಪತ್ತೆಯಾಗಿರುವ ಮೃತದೇಹ ಆಕೆಯದ್ದೇ ಎಂಬುದನ್ನು ಕುಟುಂಬದವರು ಪತ್ತೆ ಮಾಡಬೇಕಿದೆ ಗಂಗಾವಳಿ ನದಿಯಲ್ಲಿ ಪತ್ತೆಯಾಗಿರುವ ಮೃತದೇಹದ ಕೈಯಲ್ಲಿ ಬಳೆ ಹಾಗೂ ಬಟ್ಟೆಯ ಬಣ್ಣದ ಮೂಲಕ ಮಹಿಳೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯಬೇಕಿದೆ.

Read More »

ರಸ್ತೆ ನಿರ್ಮಾಣಕ್ಕೆ ವಿರೋಧ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. !

ಭೋಪಾಲ್ : ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಟ್ರಕ್ ನಿಂದ ಜಲ್ಲಿಕಲ್ಲು ಮಣ್ಣು ಸುರಿದು ಭಾಗಶಃ ಸಮಾಧಿ ಮಾಡಿದ ಘಟನೆ ನಡೆದಿದೆ. ಮಂಗವಾ ಪೊಲೀಸ್ ಠಾಣಾ ವ್ಯಾಪ್ತಿಯ ಹಿನೋಟಾ ಜೊರೊಟ್ ಗ್ರಾಮದಲ್ಲಿ ಖಾಸಗಿ ಭೂಮಿಯಲ್ಲಿ ರಸ್ತೆ ನಿರ್ಮಾಣವನ್ನು ವಿರೋಧಿಸುತ್ತಿದ್ದ ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಎಂಬ ಮಹಿಳೆಯರನ್ನು ಕುತ್ತಿಗೆಯವರೆಗೆ ಹೂಳಲಾಗಿತ್ತು. ಈ ಘಟನೆಯ ವೀಡಿಯೊದಲ್ಲಿ ಇಬ್ಬರು ಮಹಿಳೆಯರು ಜಲ್ಲಿ ತುಂಬಿದ ಟ್ರಕ್ ನ ಹಿಂದೆ ಕುಳಿತಿರುವುದನ್ನು ತೋರಿಸಲಾಗಿದೆ. ನಂತರ ಅವರನ್ನು ಸ್ಥಳೀಯರು ರಕ್ಷಿಸಿ …

Read More »

ಕುಂದಾಪುರದಲ್ಲಿ ಕಂಡು ಬಂದ ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆ..!

ಕುಂದಾಪುರ: ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆಯೊಂದು ಕುಂದಾಪುರ ತಾಲೂಕಿನ ಬಸ್ರೂರಿನ ಸಂದೇಶ್ ಪುತ್ರನ್ ಎಂಬುವವರ ಮನೆಯಲ್ಲಿ ಕಂಡುಬಂದಿದೆ. ಇದರ ಸಾಮಾನ್ಯ ಹೆಸರು ಇಂಡಿಯನ್ ಪೈಂಟೆಡ್ ಫ್ರಾಗ್(ವೈಜ್ಞಾನಿಕ ಹೆಸರು- ಉಪರೋಡಾನ್ ಟ್ಯಾಪ್ರೊಬಾನಿಕಸ್). ಸಾಮಾನ್ಯವಾಗಿ ಎಲ್ಲ ಕಡೆ ಕಂಡು ಬರುವ ಈ ಕಪ್ಪೆಯನ್ನು ಶ್ರೀಲಂಕಾ ಬುಲ್‌ಫ್ರಾಗ್ ಎಂಬುದಾಗಿಯೂ ಕರೆಯಲಾಗುತ್ತದೆ. ಮರದೊಳಗೆ ಇರುವ ಈ ಕಪ್ಪೆ ನಿಂತ ನೀರಲ್ಲಿ ಅಂದರೆ ಕೆರೆ, ಹಳ್ಳಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಕುಂದಾಪುರದ ಬಸ್ರೂರಿನಲ್ಲಿ ಕಂಡುಬಂದಿರುವ ಈ ಕಪ್ಪೆ ಇದೀಗ ಎಲ್ಲರ ಆಕರ್ಷಣೆಯಾಗಿದೆ.

Read More »

You cannot copy content of this page.