Recent Posts

ಮಂಗಳೂರು: ಡಿಸೆಂಬರ್ 1ರಿಂದ ಸುರತ್ಕಲ್ ಟೋಲ್ ಗೇಟ್‌ನಲ್ಲಿ‌ ಸುಂಕ ವಸೂಲಾತಿ ಇಲ್ಲ-ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್

ಮಂಗಳೂರು: ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್ ನಲ್ಲಿ ಡಿಸೆಂಬರ್ 1ರಿಂದ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸುರತ್ಕಲ್ ಟೋಲ್ ಗೇಟ್‌ಅನ್ನು ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕದೊಂದಿಗೆ ವಿಲೀನಗೊಳಿಸಿಗಿದೆ. ಈ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಜಿಲ್ಲಾಧಿಕಾರಿ ಅವರು ನವೆಂಬರ್ 24ರಂದು ಹೊರಡಿಸಿರುವ ಆದೇಶ ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.‌ ಅದರಂತೆ ಡಿಸೆಂಬರ್ 1ರಿಂದ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ಇರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

Read More »

ಯುವಕರಿಗೆ ಭಯೋತ್ಪಾದನೆ ತರಬೇತಿ: ಐವರು ಜೈಶ್ ಉಗ್ರರಿಗೆ ಜೀವಾವಧಿ ಶಿಕ್ಷೆ

ನವದೆಹಲಿ: ದೇಶಾದ್ಯಂತ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ನೇಮಿಸಿ ತರಬೇತಿ ನೀಡಿದ ಜೈಶ್-ಎ-ಮೊಹಮ್ಮದ್ (JeM)ನ ಐವರು ಭಯೋತ್ಪಾದಕರಿಗೆ ದೆಹಲಿ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ ನ್ಯಾಯಾಧೀಶ ಶೈಲೇಂದರ್‌ ಮಲಿಕ್‌ ಅವರು ತೀರ್ಪು ನೀಡಿದ್ದು, ಜೆಇಎಂನ ಸಜ್ಜದ್ ಅಹ್ಮದ್‌ ಖಾನ್‌, ಬಿಲಾಲ್ ಅಹ್ಮದ್ ಮಿರ್‌, ಮುಜಾಫರ್ ಅಹ್ಮದ್‌ ಭಟ್‌, ಇಶ್ಪಾಕ್‌ ಅಹ್ಮದ್‌ ಭಟ್ ಮತ್ತು ಮೆಹರಾಜ್‌–ಉದ್‌–ದಿನ್‌ ಚೋಪಾನ್‌ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಈ ಪ್ರಕರಣದ ಇನ್ನೊಬ್ಬ ಅಪರಾಧಿ ತನ್ವೀರ್ ಅಹ್ಮದ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

Read More »

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್‌ ಶೆಟ್ಟಿ ಜಪ್ಪುರವರ ಮಾತೃಶ್ರೀಯವರ ವೈಕುಂಠ ಸಮಾರಾಧನೆ

ಉಳ್ಳಾಲ: ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್‌ ಶೆಟ್ಟಿ ಜಪ್ಪುರವರ ಮಾತೃಶ್ರೀಯವರಾದ ಶ್ರೀಮತಿ ಕಲ್ಯಾಣಿ ಶೆಟ್ಟಿ ಯವರು ನ. 15ರಂದು ದೈವಾದೀನರಾಗಿದ್ದರು. ಮೃತರು ಉಳಿದೊಟ್ಟು ದಿವಂಗತ ಬಿರ್ಮು ಶೆಟ್ಟಿ ಅವರ ಮಗಳು, ಪಡ್ಯಾರ ಮನೆ ದಿವಂಗತ ಸೀತಾರಾಮ ಶೆಟ್ಟಿ ಅವರ ಪತ್ನಿಯಾಗಿದ್ದು, ಇಂದು ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮವು ಕೊಲ್ಯ ಶ್ರೀ ಮುಕಾಂಬಿಕಾ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಚಿತ್ರ ನಿರ್ಮಾಪಕ ತಮ್ಮಣ್ಣ ಶೆಟ್ಟಿ, ವ್ಯಕ್ತಿ ಯೊಬ್ಬರು ದೈವಾದೀನರಾದ ಸಂದರ್ಭದಲ್ಲಿ ಅಳವಡಿಸ ಬೇಕಾದ ತುಳುನಾಡ ಕಟ್ಟು ಕಟ್ಟಲೆ ಬಗ್ಗೆ ವಿವರಣೆ ನೀಡಿದರು. ಖ್ಯಾತ …

Read More »

You cannot copy content of this page.