Recent Posts

ಮಂಗಳೂರು: ಕುಡುಕನಿಗೆ ನೋಟಿನ ಬಂಡಲ್ ಪತ್ತೆ ಕೇಸ್ ಗೆ ಟ್ವಿಸ್ಟ್; ಠಾಣೆಗೆ ತೆರಳಿದ ವಾರಸುದಾರ..! ದೂರಿನಲ್ಲಿ ಏನಿದೆ ಗೊತ್ತಾ…?

ಮಂಗಳೂರು:ಪಂಪ್‌ವೆಲ್‌ನಲ್ಲಿ ಕುಡುಕನ ಬಳಿ ನೋಟಿನ ಬಾಕ್ಸ್ ಪತ್ತೆಯಾಗಿತ್ತು.‌ಸುದ್ದಿ ವೈರಲ್ ಅಗುತ್ತಿದ್ದಂತೆ ಭಾರೀ ಸಂಚಲನ ಕೂಡ ಮೂಡಿತ್ತು. ಇದೀಗ ಪತ್ತೆಯಾಗಿದ್ದ ನೋಟುಗಳ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ. ಠಾಣೆಗೆ ಹಾಜರಾದ ವ್ಯಕ್ತಿ ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದೆ.ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಆ ವ್ಯಕ್ತಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ನ.26ರಂದು ಕುಡುಕನೋರ್ವನ ಕೈಯಲ್ಲಿ …

Read More »

ಬೆಳ್ತಂಗಡಿ: ಅರೆಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ..!

ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್  ವ್ಯಾಪ್ತಿಯ ಕೇಲ್ತಾಜೆ ಸಮೀಪ ಮೃತದೇಹವೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೇಲ್ತಾಜೆ ಸಮೀಪ ರಬ್ಬರ್ ತೋಟದ ಚರಂಡಿಯಲ್ಲಿ ಸುಟ್ಟ ಮೃತದೇಹ ಪತ್ತೆಯಾಗಿದೆ. ಮೃತದೇಹ ಸಂಪೂರ್ಣವಾಗಿ ಕೊಳೆತ ಹೋಗಿದ್ದು, ಯಾವುದೇ ಗುರುತು ಸಿಗದ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ತಜ್ಞರು ಭೇಟಿ ನೀಡುವ ನಿರೀಕ್ಷೆಯಿದೆ.  ಕಟ್ಟಿಗೆ  ಹಾಕಿ ಸುಟ್ಟ ರೀತಿಯಲ್ಲಿ ಮೃತದೇಹವಿದ್ದು ವಾಸನೆ ಬಂದಾಗ ಹತ್ತಿರದ ಮನೆಯವರು ಬಂದು ನೋಡಿದಾಗ ಮೃತದೇಹ ಕಂಡು ಬಂದಿದೆ.

Read More »

‘ಪುಂಡರ ಗ್ಯಾಂಗ್’ ಹೆಡಮುರಿ ಕಟ್ಟಲು ‘ಲೇಡಿ ಪೊಲೀಸ್’, ಮಾಡಿದ್ದೇನು ಗೊತ್ತಾ…? ರೋಚಕ ಕಥೆ..!

ಇಂದೋರ್ : ಎಂಜಿಎಂ ವೈದ್ಯಕೀಯ ಕಾಲೇಜಿನ ರ್ಯಾಗಿಂಗ್ ಪ್ರಕರಣವನ್ನ ಮಧ್ಯಪ್ರದೇಶದ ಇಂದೋರ್ನ ಪೊಲೀಸರು ಅತ್ಯಂತ ವಿಶಿಷ್ಟ ರೀತಿಯಲ್ಲಿ ಭೇದಿಸಿದ್ದಾರೆ. ಜುಲೈ 24ರಂದು ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತಾದ್ರೂ, ಇದನ್ನ ನೀಡಿದ್ಯಾರು.? ಯಾರನ್ನ ರ್ಯಾಗಿಂಗ್ ಮಾಡಲಾಗ್ತಿದೆ ಅನ್ನೋ ಯಾವ ಮಾಹಿತಿಯೂ ಸಿಗದ ಕುರುಡು ಪ್ರಕರಣವಾಗಿತ್ತು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಲು ಪೊಲೀಸರು ರಹಸ್ಯ ಪೊಲೀಸ್ ಅಧಿಕಾರಿ ಶಾಲಿನಿ ಚೌಹಾಣ್ ಅವ್ರನ್ನ ನೇಮಿಸಿದ್ದಾರೆ. ಈ ಕುರುಡು ರ್ಯಾಗಿಂಗ್ ಪ್ರಕರಣವನ್ನ ಹೇಗೆ ಬಯಲಿಗೆಳೆಯಲು ಸಜ್ಜಾದ ಶಾಲಿನಿ, ವೈದ್ಯಕೀಯ ವಿದ್ಯಾರ್ಥಿ ಎಂದು ಕಾಲೇಜಿಗೆ …

Read More »

You cannot copy content of this page.