ಮಂಗಳೂರು: ಕುಡುಕನಿಗೆ ನೋಟಿನ ಬಂಡಲ್ ಪತ್ತೆ ಕೇಸ್ ಗೆ ಟ್ವಿಸ್ಟ್; ಠಾಣೆಗೆ ತೆರಳಿದ ವಾರಸುದಾರ..! ದೂರಿನಲ್ಲಿ ಏನಿದೆ ಗೊತ್ತಾ…?

ಮಂಗಳೂರು:ಪಂಪ್‌ವೆಲ್‌ನಲ್ಲಿ ಕುಡುಕನ ಬಳಿ ನೋಟಿನ ಬಾಕ್ಸ್ ಪತ್ತೆಯಾಗಿತ್ತು.‌ಸುದ್ದಿ ವೈರಲ್ ಅಗುತ್ತಿದ್ದಂತೆ ಭಾರೀ ಸಂಚಲನ ಕೂಡ ಮೂಡಿತ್ತು. ಇದೀಗ ಪತ್ತೆಯಾಗಿದ್ದ ನೋಟುಗಳ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.

ಠಾಣೆಗೆ ಹಾಜರಾದ ವ್ಯಕ್ತಿ ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದೆ.ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ನ್ಯಾಯಾಲಯದಲ್ಲಿ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಆ ವ್ಯಕ್ತಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ನ.26ರಂದು ಕುಡುಕನೋರ್ವನ ಕೈಯಲ್ಲಿ ನೋಟಿನ ಬಾಕ್ಸ್ ಗಳು ಪತ್ತೆಯಾಗಿದ್ದವು.ಕುಡುಕನ ಬಳಿ ಇದ್ದ 49,000 ರೂ.ಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದರು. ಬಳಿಕ ಮತ್ತೋರ್ವರ ಮನೆಯವರು ಪೊಲೀಸರಿಗೆ 2.99 ಲಕ್ಷ ರೂ.ಗಳನ್ನು ತಂದು ಒಪ್ಪಿಸಿದ್ದರು.ಆದರೆ ಹಣದ ಮೂಲ ಪತ್ತೆಯಾಗಿರಲಿಲ್ಲ.ಬಂಡಲ್‌ಗಳಲ್ಲಿ ಒಟ್ಟು ಎಷ್ಟು ಹಣವಿತ್ತು ಎಂಬುದೂ ಗೊತ್ತಾಗಿರಲಿಲ್ಲ. ಈ ಬಗ್ಗೆ ಕಮಿಷನರ್ ಪ್ರತಿಕ್ರಿಯಿಸಿ ಹಣದ ವಾರಸುದಾರರು ಇದ್ದರೆ ಸಂಪರ್ಕಿಸುವಂತೆ ಕೇಳಿದ್ದರು.ಸೂಕ್ತ ದಾಖಲೆ ಸಲ್ಲಿಸಿ ಹಣ ಪಡೆದುಕೊಳ್ಳುವಂತೆ ಹೇಳಿದ್ದರು. ಇದಲ್ಲದೆ ಬಾಕ್ಸ್ ನಲ್ಲಿ 10 ಲಕ್ಷ ಇತ್ತು ಎಂದು ಹೇಳಲಾಗಿತ್ತು.ಈ ಬಗ್ಗೆ ಎಷ್ಟು ಹಣ ಇತ್ತು ಎನ್ನುವ ಬಗ್ಗೆ ಸಂಶಯ ಕೂಡ ಮೂಡಿತ್ತು.

Check Also

ಮಂಗಳೂರು: ಪಿಎಂ ಇಜಿಪಿ, ಮುದ್ರಾಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸಿ – ಸಂಸದ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇಜಿಪಿ ಹಾಗೂ ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದವರಿಗೆ ವಿಶೇಷವಾಗಿ ಮಹಿಳೆಯರು …

Leave a Reply

Your email address will not be published. Required fields are marked *

You cannot copy content of this page.