ಪ್ರೀತಿಯ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ. ಹಾಗೆಂದು ತನಗಿಂತ ಸುಮಾರು 50 ವರ್ಷ ಹಿರಿಯರಾದ ಯಾರನ್ನಾದರೂ ಮದುವೆಯಾಗಲು ಬಯಸುತ್ತಾರೆಯೇ? ಇಲ್ಲ ಎಂದುಕೊಂಡರೆ ಅದು ತಪ್ಪು. ಏಕೆಂದರೆ 23ರ ಹರೆಯದ ಯುವತಿಯೊಬ್ಬಳು ತನ್ನ 71ರ ಹರೆಯದ ಸಂಗಾತಿಯನ್ನು ಮದುವೆಯಾಗುವ ಆಸೆಯನ್ನು ಹಂಚಿಕೊಂಡಿದ್ದಾಳೆ.
ತಾನು ಈ ಬಗ್ಗೆ ಗೊಂದಲದಲ್ಲಿ ಇದ್ದು, ಸಲಹೆ ನೀಡಿ ಎಂದು ಕೇಳಿಕೊಂಡಿದ್ದಾಳೆ.
ತನ್ನ ರೆಡ್ಡಿಟ್ ಖಾತೆಯಲ್ಲಿ ಈ ವಿಷಯವನ್ನು ಯುವತಿ ಹಂಚಿಕೊಂಡು ಸಲಹೆಗಾಗಿ ಕಾದಿದ್ದಾಳೆ. 71 ವರ್ಷದ ವ್ಯಕ್ತಿಯನ್ನು ತಾನು ಆಕಸ್ಮಿಕವಾಗಿ ಭೇಟಿಯಾದೆ. ಅವನ ಮೇಲೆ ಪ್ರೀತಿ ಉಕ್ಕಿದೆ. ಆತ ಕೂಡ ಮದುವೆಯಾಗುವ ಆಸೆ ಮುಂದಿಟ್ಟಿದ್ದಾನೆ ಎಂದಿರುವ ಯುವತಿ, ತಾನು ಈತನನ್ನು ಮದುವೆಯಾಗುವುದೋ, ಬೇಡವೋ ಎಂಬ ಗೊಂದಲದಲ್ಲಿ ಇದ್ದಾಳಂತೆ.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಈ ಜೋಡಿ ಕಳೆದೆರಡು ವರ್ಷಗಳಿಂದ ಒಟ್ಟಿಗೇ ಲಿವ್ ಇನ್ ಸಂಬಂಧದಲ್ಲಿ ಇದ್ದಾರೆ. ಯುವತಿ, ಈತನನ್ನು ತುಂಬಾ ಪ್ರೀತಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾಳೆ. ಆತ ವಯಸ್ಸಾದರೂ ತುಂಬಾ ಶಕ್ತಿವಂತನೂ, ಆರೋಗ್ಯವಂತನೂ ಆಗಿದ್ದಾನೆ. ಅಷ್ಟೇ ಅಲ್ಲದೇ ಆತ ನನ್ನಿಂದ ಯಾವುದೇ ಮಕ್ಕಳನ್ನು ಬಯಸುವುದಿಲ್ಲ. ಆದ್ದರಿಂದ ಇಬ್ಬರೂ ಮದುವೆಯಾದರೆ ತುಂಬಾ ಸಮಯ ಅನ್ಯೋನ್ಯವಾಗಿರಬಹುದು ಎಂದು ಯುವತಿ ಹೇಳಿದ್ದಾಳೆ.
ಅಜ್ಜನ ವಯಸ್ಸಿನವನ ಜತೆ ಮದುವೆಯಾಗಲು ಬಯಸಿರುವ ಯುವತಿಯ ಬಗ್ಗೆ ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.