ಸೌಜನ್ಯ ಪರವಾಗಿ ಬೆಳ್ತಂಗಡಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಪ್ರತಿಭಟನಾ ವೇದಿಯಲ್ಲಿ ಮಾತನಾಡಿದ ಸೌಜನ್ಯ ತಾಯಿ ಕುಸುಮಾವತಿ ಅವರು, ‘ಇಂದಿನ ಪ್ರತಿಭಟನೆಯಲ್ಲಿ ನನ್ನ ಮಗಳ ಭಾವಚಿತ್ರವಿರುವ ಪ್ಲೆ ಕಾರ್ಡ್ ಗಳು ಇದೆ . ಆದರೆ ಮೊನ್ನೆಯ ಪ್ರತಿಭಟನೆಯಲ್ಲಿ ಕೇವಲ ನ್ಯಾಯ ಸಿಗಲಿ ಎಂಬ ಫ್ಲೆಕ್ಸ್ ಇತ್ತು. ಹರೀಶ್ ಅಣ್ಣ ಮನೆಗೆ ಬಂದು ಇಂದಿನ ಪ್ರತಿಭಟನೆ ಅಹ್ವಾನ ನೀಡಿದರು.
ನಾನು ಇಲ್ಲಿರುವ ನಾಯಕರಿಗೆ ಮನವಿ ಮಾಡುತ್ತೇನೆ. 11 ವರ್ಷಗಳಿಂದ ನಮ್ಮ ಸಂಸದರಲ್ಲಿ ನ್ಯಾಯಕ್ಕಾಗಿ ಕೇಳಿಕೊಂಡಿದ್ದೆ. ಆದರೆ ಈಗ ಸಂಸದರು ನನ್ನ ಮಗಳ ಪರವಾಗಿ ಧ್ವನಿ ಎತ್ತಿದ್ದಾರೆ. ನಮ್ಮನ್ನ ಮೋದಿಯಲ್ಲಿಗೆ ಕರೆದುಕೊಂಡು ಹೋಗಬೇಕು. ನನಗೆ ಹರೀಶ್ ಅಣ್ಣನ ಮೇಲೇ ನಂಬಿಕೆ ಇದೇ’ ಎಂದು ಬೆಳ್ತಂಗಡಿಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಬಾಗ ಸೌಜನ್ಯ ತಾಯಿ ಕುಸುಮಾವತಿ ಪ್ರಾರ್ಥನೆ ಮಾಡಿದ್ದಾರೆ. ನೈಜ ಆರೋಪಿಗಳ ಪತ್ತೆಗೆ ಅಣ್ಣಪ್ಪ ಸ್ವಾಮಿಗೆ ಕಾಣಿಕೆ ಹಾಕಿ ಕಣ್ಣೀರಿಟ್ಟು, ವಿಹಿಂಪ ಹಾಗು ಬಜರಂಗದಳ ಮುಖಂಡರ ಜೊತೆಗೂಡಿ ಪ್ರಾರ್ಥನೆ ಸಲ್ಲಿದ್ದಾರೆ. ಬಳಿಕ ಈ ಪ್ರಕರಣದಲ್ಲಿ ಸೌಜನ್ಯ ತಾಯಿ ಆರೋಪಿಸಿರುವ ಮಲ್ಲಿಕ್ ಜೈನ್, ಉದಯ್ ಜೈನ್, ಧೀರಜ್ ಕೆಲ್ಲ ಕೂಡ ಈ ಪ್ರಕರಣದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಅನಾವಶ್ಯಕವಾಗಿ ಎಳೆದು ತರಲಾಗಿದೆ. ಎಂದು ಸಾವಿರಾರು ಜನರ ಮುಂಭಾಗ ಪ್ರಾರ್ಥನೆ ಮಾಡಿದ್ದಾರೆ.