ಹೆಬ್ರಿ: ತೋಟದಲ್ಲಿ ಆಟವಾಡುತ್ತಿದ್ದ 4ರ ಹರೆಯದ ಪುಟ್ಟ ಬಾಲಕ ಸೆಗಣಿ ಗುಂಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿಯ ಬಚ್ಚಪ್ಪು ಎಂಬಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಸೋಮೇಶ್ವರ ಓಕಾನ್ ಎಂಬವರ ಮುನೇಶ್ವರ ಎಂಬವನು ಮೃತಪಟ್ಟ ಬಾಲಕ. ಸೋಮೇಶ್ವರ ಓಕಾನ್ ಕಳೆದ 6 ವರ್ಷಗಳಿಂದ ತನ್ನ ಪತ್ನಿ ಮಗನ ಜತೆಗೆ ಬಚ್ಚಪ್ಪು ಎಂಬಲ್ಲಿನ ಆಂಟನಿಯವರ ತೋಟದಲ್ಲಿ ವಾಸವಿದ್ದು ಅಲ್ಲಿಯೇ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.
ಎಂದಿನಂತೆ ಭಾನುವಾರ ಕೆಲಸಕ್ಕೆ ರಜಾವಾಗಿದ್ದರಿಂದ ಸೋಮೇಶ್ವರನ 4 ವರ್ಷದ ಪುಟ್ಟ ಬಾಲಕ ಮುನೇಶ್ವರ ತೋಟದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸೆಗಣಿಯ ಗುಂಡಿಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾನೆ.11 ಗಂಟೆಗೆ ಆಟವಾಡಲೆಂದು ಹೋರಹೋಗಿದ್ದ ಮಗು ಮರಳಿ ಮನೆಗೆ ಬಾರದಿದ್ದಾಗ ಆತಂಕಗೊಂಡ ಮಗುವಿನ ತಾಯಿ ಹುಡುಕಿಕೊಂಡು ಹೋದಾಗ ಮುನೇಶ್ವರನ ಶವ ಸೆಗಣಿ ಗುಂಡಿಯಲ್ಲಿ ಪತ್ತೆಯಾಗಿದೆ.
ಏನೂ ಅರಿಯದ ಪುಟ್ಟಕಂದ ತೆರೆದ ಸೆಗಣಿ ಗುಂಡಿಗೆ ಬಿದ್ದು ಮೃತಪಟ್ಟ ವಿಚಾರ ತಿಳಿದು ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.ಹೊಟ್ಟೆಪಾಡಿಗಾಗಿ ದೂರದ ಜಾರ್ಖಂಡ್ ನಿಂದ ಬಂದ ದಂಪತಿ ತಮ್ಮ ಕರುಳಕುಡಿ ಕಳೆದುಕೊಂಡಿರುವುದು ನಿಜಕ್ಕೂ ದುಖದ ಸಂಗತಿಯಾಗಿದೆ.ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.