ಉಡುಪಿ: ಹಿಂದೂ ವಿದ್ಯಾರ್ಥಿಗಳ ಮೇಲೆ ಇಸ್ಲಾಂ ಆಚರಣೆಗಳ ಹೇರಿಕೆ ಆರೋಪ: ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಉಡುಪಿಯ ಕುಂದಾಪುರ ತಾಲೂಕಿನ  ಶಂಕರನಾರಾಯಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮದರ್ ಥೆರೆಸಾ ಮೆಮೋರಿಯಲ್ ಶಾಲೆ ಆಯೋಜಿಸಿದ ವಲಯ ಮಟ್ಟದ ಕ್ರೀಡಾಕೂಟ ಇದೀಗ ವಿವಾದಕ್ಕೆ ತುತ್ತಾಗಿದೆ.

ಈ ಕ್ರೀಡಾಕೂಟದಲ್ಲಿ ಬಲವಂತವಾಗಿ ಹಿಂದೂ ಧರ್ಮದ ವಿದ್ಯಾರ್ಥಿನಿಯರನ್ನು ಮುಸ್ಲಿಂ ಆಜಾನ್ ಆಚರಣೆ ಮಾಡಿಸಲಾಗಿದೆ ಎಂದು ಆರೋಪಿಸಿ  ಹಿಂದೂಪರ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿವೆ.

ಇಂದು ಬೆಳಿಗ್ಗೆ ಶಾಲೆಯ ಮುಂಭಾಗ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ರೀಡಾಕೂಟದ ಸ್ವಾಗತ ನೃತ್ಯದಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಂ ಮತದ ಹಾಡುಗಳಿಗೆ ವಿದ್ಯಾರ್ಥಿನಿಯರು ನೃತ್ಯ ಮಾಡಿದ್ದರು.

ಇದೇ ವೇಳೆ ಆಝಾನ್‌ ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ಸಂಬಂಧ ನಿನ್ನೆಯೇ ಶಾಲಾಡಳಿತ ಕ್ಷಮೆ ಕೇಳಿತ್ತು. ಆದರೆ ಘಟನೆ ಕುರಿತು ಕ್ಷಮೆ ಯಾಚಿಸುವಂತೆ ಹಿಂದೂ ಜಾಗರಣಾ ವೇದಿಕೆ ಇವತ್ತು ಪ್ರತಿಭಟನೆ ನಡೆಸಿತು.

Check Also

ಮಂಗಳೂರು : ತುಳುನಾಡ್ ಟ್ರಸ್ಟ್ (ರಿ) ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಮಂಗಳೂರು : ಇಂದು ನಗರದ ಕೆಪಿಟಿಯ ಕದ್ರಿ ಬಳಿ ಇರುವ ವೀರ ಯೋಧರ ಸ್ಮಾರಕ ಭವನದಲ್ಲಿ ನಮ್ಮ ತುಳುನಾಡ್ ಟ್ರಸ್ಟ್ …

Leave a Reply

Your email address will not be published. Required fields are marked *

You cannot copy content of this page.