ಬಾಗಲಕೋಟೆ: ಜಿಲ್ಲೆಯ ಮುಧೋಳ ಹೊವಲಯದ ಮಂಟೂರ್ ಬೈಪಾಸ್ ಬಳಿ ಪಾಪಿ ಮಗನೊಬ್ಬ ತಂದೆಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ದೇಹವನ್ನು 30 ತುಂಡು ತುಂಡು ಮಾಡಿದ್ದಾನೆ.
ಪರಶುರಾಮ ಕುಳಲಿ (54) ಎಂಬವರು ನಿತ್ಯ ಕುಡಿದು ಬಂದು ಮನೆಯಲ್ಲಿ ಮಗನಿಗೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ಮಗ ವಿಠ್ಠಲ ಕುಳಲಿ (20) ತಂದೆಯನ್ನೇ ರೋಡ್ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದಿದ್ದಾನೆ. ಈ ಘಟನೆ ಕಳೆದ ಮಂಗಳವಾರ ರಾತ್ರಿ 12ಗಂಟೆ ಸುಮಾರಿಗೆ ನಡೆದಿದೆ.
ತಂದೆಯನ್ನು ಕೊಂದ ನಂತರ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಕೊಳವೆ ಬಾವಿಗೆ ಹಾಕಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲಕ್ಕೆ ಕೊಂಡೊಯ್ಯುತ್ತಾನೆ. ತಂದೆಯ ಮೃತದೇಹವನ್ನು ಕೊಳವೆ ಬಾವಿಗೆ ಹಾಕುವಾಗ ದೇಹ ಅದರೊಳಗೆ ಹೋಗದಿದ್ದಾಗ ಮಗ ವಿಠಲ, ದೇಹವನ್ನು 30 ತುಂಡುಗಳನ್ನಾಗಿ ಮಾಡಿ ಬೋರ್ವೆಲ್ಗೆ ಹಾಕಿ ಮನೆಗೆ ವಾಪಸ್ ಆಗಿದ್ದು, ಸದ್ಯ ಕೊಲೆಗಡುಕನ ಬಣ್ಣ ಬಯಲಾಗಿದ್ದು, ಮೃತದೇಹವನ್ನು ಹೊರತೆಗೆಯಲಾಗಿದೆ. ಇದೀಗ ಕುಟುಂಬಸ್ಥರ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.