BREAKING NEWS : ಅಕ್ರಮ ಎಸಗಿದ ‘ನ್ಯಾಯಬೆಲೆ ಅಂಗಡಿ’ ಲೈಸೆನ್ಸ್ ರದ್ದು ; ಸರ್ಕಾರದ ಕ್ರಮ ಎತ್ತಿ ಹಿಡಿದ ‘ಹೈಕೋರ್ಟ್’

ಬೆಂಗಳೂರು : ಅಕ್ರಮ ಎಸಗಿದ ನ್ಯಾಯಬೆಲೆ ಅಂಗಡಿ ಲೈಸೆನ್ಸ್ ರದ್ದುಗೊಳಿಸಿ ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರದ ಕ್ರಮವನ್ನ ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

ಸಿಜೆ ಪಿ.ಬಿ ವರಾಳೆ, ನ್ಯಾ. ಅಶೋಕ್‌ಎಸ್ ಕಿಣಗಿರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ರಾಮನಗರದ ಸಂಜೀವಯ್ಯ ಎಂಬುವವರ ನ್ಯಾಯಬೆಲೆ ಅಂಗಡಿ ಲೈಸನ್ಸ್ ರದ್ದುಗೊಳಿಸಿದೆ.

ಈ ಮೂಲಕ ರಾಮನಗರ ಜಿಲ್ಲಾಡಳಿತದ ಕ್ರಮ ಹೈಕೋರ್ಟ್ ಎತ್ತಿ ಹಿಡಿದಿದೆ.

ಪಡಿತರ ಧಾನ್ಯ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಪಡಿತರ ಕಾರ್ಡ್‍ದಾರರಿಗೆ ಧಾನ್ಯ ನೀಡದಿರುವಂತಹ ಎಲ್ಲ ಪ್ರಕರಣಗಳು ಲೈಸನ್ಸ್ ರದ್ದು ಮಾಡಲು ಅರ್ಹವಾಗಿವೆ. ಇನ್ನು ಬಡವರಿಗೆಂದೇ ಪಡಿತರ ಧಾನ್ಯ ಪೂರೈಕೆ ಮಾಡಲಾಗ್ತಿದೆ. ಆದ್ರೆ, ಈ ಆಹಾರ ಧಾನ್ಯ ಪೂರೈಕೆ ಮಾಡದಿರುವುದು ಗಂಭೀರ ವಿಚಾರ ಎಂದು ಹೈಕೋರ್ಟ್ ಹೇಳಿದೆ.

Check Also

ಮಂಗಳೂರು: ವಿಡಿಯೋ ಲೈಕ್ ಮಾಡಿ 5 ಲಕ್ಷ ಕಳೆದುಕೊಂಡರು..!

ಮಂಗಳೂರು: ಆನ್‌ಲೈನ್ ಗಳಿಕೆಯ ನಕಲಿ ಜಾಲಕ್ಕೆ ಸಿಲುಕಿ ವ್ಯಕ್ತಿಯೊಬ್ಬರು 5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೆ. 28ರಂದು ದೂರುದಾರರು ಇನ್ …

Leave a Reply

Your email address will not be published. Required fields are marked *

You cannot copy content of this page.