ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಡೆದ ಅಪಘಡಗಳಲ್ಲಿ 16 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಶಿವಮೊಗ್ಗದ ವಿದ್ಯಾನಗರದಲ್ಲಿ ಮಂಜುನಾಥ್ ಓಲೇಕಾರ್ ಎಂಬುವರ ಮನೆಯಲ್ಲಿ ಶನಿವಾರ ರಾತ್ರಿ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಮಿಸ್ ಫೈರ್ ಆಗಿ ಮಂಜುನಾಥ್ ಅವರ ಪುತ್ರ ಸ್ನೇಹಿತ ವಿನಯ್ ಎಂಬುವರಿಗೆ ಗುಂಡು ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೇ ವೇಳೆ ಮಂಜುನಾಥ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಪಕ್ಕದ ಕಟ್ಟಡಕ್ಕೆ ಜಿಗಿದು ಒಡಿಶಾದ ಬಾಪಿ, ಗುಡ್ಡದಹಳ್ಳಿಯಲ್ಲಿ ಲಾರಿ ಡಿಕ್ಕಿಯಾಗಿ ಯಾದಗಿರಿಯ ದೇವರಾಜು ಮೃತಪಟ್ಟಿದ್ದಾನೆ. ಚಿಂತಾಮಣಿಯ ಐಮರೆಡ್ಡಿಹಳ್ಳಿಯಲ್ಲಿ ದೊಡ್ಡಗಂಜೂರಿನ ನವೀನ್ ರೆಡ್ಡಿ ಕೊಲೆಯಾಗಿದ್ದಾನೆ. ಬೆಳ್ತಂಗಡಿಯ ಗೋಳಿಯಂಗಡಿಯಲ್ಲಿ ಕಾರು ಬಸ್ ಡಿಕ್ಕಿಯಾಗಿ ಇಬ್ಬರು, ಅಂಕೋಲಾ ಬಾಳೆಗುಳಿಯಲ್ಲಿ ಕಾರು ಬಸ್ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ.
ಇನ್ನು ಚನ್ನಮ್ಮನ ಕಿತ್ತೂರಿನಲ್ಲಿ ಕಾರು ಡಿಕ್ಕಿಯಾಗಿ ಅಕ್ಷತಾ ಹುಲಿಕಟ್ಟೆ, ಸಂಸದ ರಾಘವೇಂದ್ರ ಅವರ ಫೋಟೋ ಗ್ರಾಫರ್ ಪ್ರಸನ್ನ ಕನಕಪುರ ಮಾವತ್ತೂರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.