ಉಡುಪಿ: ಭೂಮಿಗಿಂತ ದೊಡ್ಡದಾದ ಒಂದು ಸೌರಕಲೆ ಗೋಚರ

ಉಡುಪಿ:  ಸೂರ್ಯನ ಮೇಲ್ಮೈಯಲ್ಲಿ ಭೂಮಿಗಿಂತ ದೊಡ್ಡದಾದ ಒಂದು ಸೌರಕಲೆಯನ್ನು ಗುರುತಿಸಲಾಗಿದ್ದು ಅದನ್ನು “ಸೌರಕಲೆ 3363” ಎಂದು ಹೆಸರಿಸಲಾಗಿದೆ.

“ಸೌರಕಲೆ” ಎಂಬುದು ಸೂರ್ಯನ ಮೇಲ್ಮೈಯಲ್ಲಿರುವ ಒಂದು ಪ್ರದೇಶವಾಗಿದೆ. ಅಲ್ಲಿ ತಾಪಮಾನವು ಅದರ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಕಡಿಮೆ ಇರುತ್ತದೆ. ಸೂರ್ಯನ ಮೇಲ್ಮೈ 5000 ಡಿಗ್ರಿಗಳಷ್ಟು ಬಿಸಿಯಾಗಿರುತ್ತದೆ. ಆದರೆ ಈ ಪ್ರದೇಶವು 4500 ಡಿಗ್ರಿಗಳಲ್ಲಿವೆ. ಈ ಭಾಗ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ನಡುವೆ 500K ಅಷ್ಟು ತಾಪಮಾನದ ವ್ಯತ್ಯಾಸವಿದೆ. ಅಂದರೆ, ಅದರ ಸುತ್ತಮುತ್ತಲಿನ ಪ್ರದೇಶಗಳು ಸೌರಕಲೆಗಿಂತ ಹೆಚ್ಚಿನ ಬೆಳಕನ್ನು ನೀಡುತ್ತದೆ. ಹಾಗಾಗಿ, ಅದು ಕಪ್ಪಾಗಿ ಕಾಣುತ್ತದೆ.

ಕಳೆದ ಕೆಲವು ದಿನಗಳಲ್ಲಿ “ಸೌರಕಲೆ 3363ನ್ನು” ಗಮನಿಸಲಾಗಿದ್ದು, ಅದರ ಗಾತ್ರ ಹೆಚ್ಚಾಗುತ್ತಿದೆ. ಗಾತ್ರದಲ್ಲಿನ ಈ ಹೆಚ್ಚಳವು ಯಾವುದೇ ದೂರದರ್ಶಕಗಳು ಅಥವಾ ಬೈನಾಕ್ಯುಲರ್‌ಗಳಿಲ್ಲದೆ ಸೌರಶೋಧಕದ ಸಹಾಯದಿಂದ ಬರಿಗಣ್ಣಿಗೆ ಸೌರಕಲೆ ಗೋಚರಿಸುವಂತೆ ಮಾಡಿದೆ. ಸಾಮಾನ್ಯವಾಗಿ, ಸೌರಕಲೆಗಳು ಸೌರ ಶೋಧಕವನ್ನು ಹೊಂದಿದ ದೂರದರದರ್ಶಕದಲ್ಲಿ ಮಾತ್ರ ಗೋಚರಿಸುತ್ತವೆ. ಹಾಗಾಗಿ, ಈ ಸೌರಕಲೆ 3363 ರ ಗಾತ್ರವು ಪ್ರಸ್ತುತ ಭೂಮಿಗಿಂತ ದೊಡ್ಡದಾಗಿದೆ ಎಂದು ಸೂಚಿಸುತ್ತದೆ.

ವಿಶಿಷ್ಟವಾಗಿ ಸೌರಕಲೆಗಳು ಗಾತ್ರದಲ್ಲಿ 16 ಕಿ.ಮೀ ನಿಂದ 160000 ಕಿ.ಮೀ ವರೆಗೆ ಬದಲಾಗಬಹುದು. ಭೂಮಿಯ ವ್ಯಾಸವು 12742 ಕಿ.ಮೀ. ಆದ ಕಾರಣ, ಸೌರಕಲೆಯು ಭೂಮಿಗಿಂತ ದೊಡ್ಡದಾಗಿರುವುದು ಸಹಜ. ಸೌರಕಲೆಯು ಸೂರ್ಯನ ಸಂಕೀರ್ಣ ಕಾಂತೀಯ ಕ್ಷೇತ್ರಗಳ ಪರಿಣಾಮವಾಗಿದೆ. ಸೌರಕಲೆ 3363 ಸ್ಫೋಟಗೊಳ್ಳುವುದಿಲ್ಲ ಮತ್ತು ಭೂಮಿಗೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡುವುದಿಲ್ಲ.

“ಒಂದು ಸೌರಕಲೆಯನ್ನು ಯಾವ ಸ್ಥಳದಿಂದಾದರೂ ಕೆಲವು ದಿನ ಅಥವಾ ಗಂಟೆಗಳವರೆಗೆ ಸೂರ್ಯನ ಮೇಲ್ಮೈಯಲ್ಲಿ ಗುರುತಿಸಬಹುದು. ಸೂರ್ಯನು ಚಲಿಸುವ ಅನುಗುಣಕ್ಕೆ ತಕ್ಕಂತೆ ಸೂರ್ಯನ ಮೇಲ್ಮೈಯಲ್ಲಿರುವ ಸ್ಥಿರವಾದ ಹಾಗೂ ದೊಡ್ಡದಾದ ಸೌರಕಲೆಗಳು ಕೆಲ ದಿನಗಳವರೆಗೆ ಗೋಚರಿಸುತ್ತವೆ ಹಾಗು ಇನ್ನೂ ಕೆಲ ಗಂಟೆಗಳ ಒಳಗೆ ಮರೆಯಾಗುತ್ತದೆ. 3363 ಎಂಬ ಸೌರಕಲೆಯು ಈ ವರ್ಷದ ಜುಲೈ 6 ತಾರೀಕಿನಿಂದ ಗೋಚರಿಸುತ್ತಿದ್ದು, ಈ ವಾರದ ಅಂತ್ಯದವರೆಗೆ ಗೋಚರಿಸುವ ಸಾಧ್ಯತೆ ಇದೆ. ಇದಾದ ನಂತರ,ಮತ್ತೆ ಗೋಚರಿಸಲು ಸಾಧ್ಯವಿಲ್ಲ.

“ಸೂರ್ಯನನ್ನು ವೀಕ್ಷಿಸುವ ವೇಳೆಯಲ್ಲಿ ನಾವು ಫಿಲ್ಟರ್ ನ ಬಳಕೆಯಂತಹ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂರ್ಯನನ್ನು ನೇರವಾಗಿ ನೋಡುವುದಾಗಲಿ, ದಿನನಿತ್ಯದ ಚಟುವಟಿಕೆಯಲ್ಲಿ ಬಳಸುವ ಎಕ್ಸರೇ ಹಾಳೆ, ಕನ್ನಡಕಗಳನ್ನು ಬಳಸಬಾರದು. ಸೂರ್ಯನನ್ನು ಯಾವಾಗಲೂ ಪ್ರಮಾಣೀಕರಿಸಿದ ಸೋಲಾರ್ ಫಿಲ್ಟರ್ ನ ಮೂಲಕವೇ ನೋಡಬೇಕು. ಈ ವಸ್ತುವಿನ ಹೊರತಾಗಿ ಬೇರೆ ವಸ್ತುಗಳ ಮೂಲಕ ಸೂರ್ಯನನ್ನು ನೋಡಿದರೆ ಕಣ್ಣಿನ ದೃಷ್ಟಿಗೆ ಅಪಾಯವಾಗುತ್ತದೆ. ಹಾಗಾಗಿ, ಜಾಗೃತೆವಹಿಸುವುದು ಮುಖ್ಯ” ಎಂದು ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ತಿಳಿಸಿದೆ

“ಈ ಸೌರಕಲೆಯ ಬೆಳವಣಿಗೆಯ ಹಂತಗಳನ್ನು ನಾಸಾ ಲೈವ್ ನಲ್ಲಿ ಸೂರ್ಯನ ದೃಶ್ಯವನ್ನು ತೋರಿಸಿದಂತೆ ನಮ್ಮ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವೆಬ್ಸೈಟ್ ನಲ್ಲಿ ಟ್ರ್ಯಾಕ್ ಮಾಡುಲಾಗುತ್ತಿದೆ. ಆಸಕ್ತಿಯುಳ್ಳವರು ಇದನ್ನು ಅನುಸರಿಸಬಹುದು” ಎಂದು ಹೇಳಿದೆ

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.