ಬೆಂಗಳೂರು: ನಗರದಲ್ಲಿ ವಿಕೃತಿ ಘಟನೆ ನಡೆದಿದೆ. ಗಂಡ ತನ್ನ ಹೆಂಡತಿಯನ್ನೇ ಸ್ನೇಹಿತರೊಂದಿಗೆ ಬಲವಂತವಾಗಿ ಮಲಗಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಗಂಡನ ಹಲ್ಲೆಗೆ ಬೇಸತ್ತು ಆತನ ಗೆಳೆಯರೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿಕೊಂಡಿದ್ದಾಳೆ. ನಂತರ ಪತ್ನಿ ಸ್ನೇಹಿತರೊಂದಿಗೆ ಬೆಡ್ನಲ್ಲಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿದ್ದು, ಆಕೆಯ ಸಹೋದರಿಯನ್ನು ತನ್ನ ಜೊತೆ ಮಲಗುವಂತೆ ಕಿರುಕುಳ ನೀಡುತ್ತಿದ್ದನು. ಪತಿಯ ಕೆಟ್ಟ ನಡೆಯಿಂದ ಬೇಸತ್ತ ಪತ್ನಿ, ಸಂಪಿಗೆಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಲೈಂಗಿಕ ಕಿರುಕುಳ , ಎನ್ಡಿಪಿಎಸ್ ಹಾಗೂ ಐಟಿ ಆಕ್ಟ್ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಎಂಬಾತಾ 2011ರಲ್ಲಿ ಮಹಿಳಾ ಟೆಕ್ಕಿಯೊಬ್ಬಳನ್ನು ಮದುವೆಯಾಗಿದ್ದಾನೆ. ಆರಂಭದಲ್ಲಿ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದ ಜಾನ್ ಪಾಲ್, ಮದುವೆಯಾದ ಮೂರ್ನಾಲ್ಕು ವರ್ಷಕ್ಕೆ ಅಂದರೆ 2015ರಲ್ಲಿ ಹೇಯ ಕೃತ್ಯ ಎಸಗಲು ಆರಂಭಿಸಿದ್ದಾನೆ. ಪಾರ್ಟಿಗೆಂದು ಸ್ನೇಹಿತರನ್ನು ಮನೆಗೆ ಕರೆಸಿ ಅವರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪತ್ನಿಗೆ ಒತ್ತಾಯಿಸಲು ಆರಂಭಿಸಿದ್ದಾನೆ.