ಬಂಟ್ವಾಳ: ಬಿ ಸಿ ರೋಡಿನ ತಲಪಾಡಿ ಎಂಬಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರೊಂದು ಬಂಟ್ವಾಳ ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದು ಕಾರು ಚಾಲಕ ಮೊಹಮ್ಮದ್ ಶೇಖ್ ಫೈಜಲ್ ನನ್ನು ವಶಕ್ಕೆ ಪಡೆದು ಮಾರುತಿ ಸ್ವಿಫ್ಟ್ ಕಾರನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಫೈಝಲ್ ಡಿಸೆಂಬರ್ 5 ರಂದು ಬೆಳಗ್ಗೆ ಬಿ ಸಿ ರೋಡಿನ ತಲಪಾಡಿಯಲ್ಲಿ ತನ್ನ ಕಾರನ್ನು ಹಿಂಬದಿಯಿಂದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಘಟನೆಯಲ್ಲಿ ರಿಕ್ಷಾ ಚಾಲಕ ಪುರುಷೋತ್ತಮ್ ಮತ್ತು ಪ್ರಯಾಣಿಕ ಹೃತಿಕ್ ಗಾಯಗೊಂಡಿದ್ದರು.
ಆರಂಭದಲ್ಲಿ ಆಟೋರಿಕ್ಷಾ ತಾನಾಗಿಯೇ ಪಲ್ಟಿಯಾಗಿ ಹೇಳಲಾಗಿತ್ತದ್ದರೂ, ಬಳಿಕ ಕಾರು ಹಿಂಬದಿಯಿಂದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಆರೋಪಿಯು ಘಟನೆಯಿಂದ ತಪ್ಪಿಸಿಕೊಳ್ಳವ ದೃಷ್ಟಿಯಿಂದ ಅಪಘಾತದ್ ಬಳಿಕ ಮುಂದೆ ಸಾಗದೆ ಕಾರನ್ನು ತಿರುಗಿಸಿ ಬಿ.ಸಿ ರೋಡ್ ಗೆ ಬಂದು ಪರಾರಿಯಾಗಿದ್ದನು.
ಪೊಲೀಸರು ಸಾಕಷ್ಟು ನಿಗಾ ವಹಿಸಿ ಅನೇಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ವೀಕ್ಷಿಸಿ ಕಾರಿನ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ಸಂಚಾರ ಠಾಣೆಯ ರಾಜು ತನಿಖಾಧಿಕಾರಿಯಾಗಿದ್ದು, ನಾಗೇಶ್ ಕೆ ಸಿ ಸಹಾಯಕ ತನಿಖಾಧಿಕಾರಿಯಾಗಿದ್ದರು.