ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್ 9 ಗೆ ಇಂದು ತೆರೆ ಬೀಳುತ್ತಿದೆ. ರಿಯಾಲಿಟಿ ಶೋನ ಇತ್ತೀಚಿನ ಸೀಸನ್ ಈ ವರ್ಷ ಸೆಪ್ಟೆಂಬರ್ 24 ರಂದು ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ದಿವ್ಯಾ ಉರುಡುಗ, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ಸಾನ್ಯಾ ಅಯ್ಯರ್, ಐಶ್ವರ್ಯ ಪಿಸ್ಸೆ, ಅರುಣ್ ಸಾಗರ್, ಕಾವ್ಯಶ್ರೀ ಗೌಡ, ದರ್ಶ್ ಚಂದ್ರಪ್ಪ ಅನುಪಮಾ ಗೌಡ, ರೂಪೇಶ್ ರಾಜಣ್ಣ, ಅಮೂಲ್ಯ ಗೌಡ, ವಿನೋದ್ ಗೋಬರಗಾಲ, ಮತ್ತು ನೇಹಾ ಗೌಡ ಸೇರಿದಂತೆ 15 ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು.
ಬಿಗ್ ಬಾಸ್ ಕನ್ನಡ ಶೋ ಶುರುವಾದಾಗಿನಿಂದಲೂ ಕಾರ್ಯಕ್ರಮದ ಹೋಸ್ಟ್ ಆಗಿರುವ ಕಿಚ್ಚ ಸುದೀಪ್ ಅತ್ಯಂತ ಪ್ರಬುದ್ಧವಾಗಿ ನಡೆಸಿಕೊಡುತ್ತಿದ್ದಾರೆ. ಸೀಸನ್ 1 ರಿಂದ 9 ರವರೆಗೆ ಸುದೀಪ್ ಬಿಗ್ ಬಾಸ್ ಮನೆಗೆ ಮುಕುಟದಂತಿದ್ದಾರೆ. ಇಂದು ಬಿಗ್ ಬಾಸ್ ಕನ್ನಡ ಸೀಸನ್ 9 ಕೊನೆಯ ದಿನ. 100 ದಿನದ ಆಟ ಮುಗಿದಿದೆ. ದೊಡ್ಮನೆಯ ಲೈಟ್‌ಗಳು ಆಫ್ ಆಗಿವೆ.
ಇಂತಿ ನಿಮ್ಮ ಪ್ರೀತಿಯ ಕಿಚ್ಚ!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ ಗ್ರಾಂಡ್ ಫಿನಾಲೆ#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ@KicchaSudeep pic.twitter.com/map8PGzuPf
— Colors Kannada (@ColorsKannada) December 31, 2022
ಪ್ರತಿವಾರ ಶನಿವಾರ ಮತ್ತು ಭಾನುವಾರ ಅತ್ಯಂತ ಉತ್ಸಾಹದಿಂದ ವೇದಿಕೆಗೆ ಬರುತ್ತಿದ್ದ ಕಿಚ್ಚ ಸುದೀಪ್, ಮನೆಯಲ್ಲಿದ್ದ ಸ್ಪರ್ಧಿಗಳ ಸರಿ ತಪ್ಪುಗಳನ್ನು ಹೇಳುತ್ತಿದ್ದರು. ಆತಂಕಗಳನ್ನು ನಿವಾರಿಸುತ್ತಿದ್ದರು. ವೈಮನಸ್ಸುಗಳನ್ನು ಸರಿ ಮಾಡಿ ಒಬ್ಬ ಸ್ಟ್ರಿಕ್ಟ್ ಟೀಚರ್ ಹಾಗೆ ಬುದ್ಧಿ ಹೇಳುತ್ತಿದ್ದರು. ಇದರ ಜೊತೆಗ ಒಬ್ಬ ಸೋದರ, ಆತ್ಮೀಯ ಸ್ನೇಹಿತನಂತೆ ಕಂಟೆಸ್ಟಂಟ್‌ಗಳ ಜತೆ ಮಾತನಾಡಿ, ಅವರಲ್ಲಿ ಹುರುಪು ತುಂಬುತಿದ್ದರು.
ಇಂದು ಕೊನೆಯ ದಿನವಾದ ಹಿನ್ನೆಲೆ ಬಿಗ್ ಬಾಸ್ ತಂಡ ಕಿಚ್ಚ ಸುದೀಪ್ ಅವರ ವಿಡಿಯೋವನ್ನು ಪ್ಲೇ ಮಾಡಿದರು. ಇದರಲ್ಲಿ ಕಿಚ್ಚನ ನಗು, ಸಿಟ್ಟು ಸೇರಿದಂತೆ ಎಲ್ಲ ಭಾವನೆಗಳ ಮಿಶ್ರಣವಾಗಿತ್ತು. ಯಾವುದಕ್ಕೂ ಜಗ್ಗದ, ಕುಗ್ಗದ ಕಿಚ್ಚ ಸುದೀಪ್ ಈ ವಿಟಿ ನೋಡುತ್ತಿದ್ದಂತೆ ಭಾವುಕರಾದರು. ಸುದೀಪ್ ವೇದಿಕೆಯ ಮೇಲೆಯೇ ಕಣ್ಣೀರಿಟ್ಟರು.