ಬಂಟ್ವಾಳ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು ಈ ಪ್ರಕರಣಕ್ಕೆ ಮತ್ತೊಂದು ಗಂಭೀರ ಆರೋಪ ಥಳುಕು ಹಾಕಿಕೊಂಡಿದೆ.
ಬಂಧಿತ ಆರೋಪಿಯಾಗಿರುವ ಬೋಳಂತೂರು ನಿವಾಸಿ ಆಟೋ ಚಾಲಕ ಅದ್ರಾಮ ಎಂಬಾತ 19 ವರ್ಷದ ಯುವಕ ಸಮದ್ ಎಂಬಾತನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಸಲಿಂಗಕಾಮಿ ಆಟೋ ಚಾಲಕ ಅದ್ರಾಮ.?!ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಒಬ್ಬ ಕುಖ್ಯಾತ ಸಲಿಂಗಕಾಮಿ ಎನ್ನುವ ಆರೋಪ ಕೇಳಿಬಂದಿದೆ. ಈ ಹಿಂದೆಯೂ ಹಲವು ಅಪ್ರಾಪ್ತ ಬಾಲಕರನ್ನು ಬಳಸಿ ಸಾರ್ವಜನಿಕವಾಗಿ ಒದೆ ತಿಂದಿದ್ದ.
ವಿಟ್ಲ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿ ಭಾಗದ ಸುರಿಬೈಲು ನಿವಾಸಿ ಸಪ್ಪಿ @ ಸಮದ್ ಕೆಲ ದಿನಗಳ ನಾಪತ್ತೆಯಾಗಿದ್ದ. ರವಿವಾರ ರಾತ್ರಿ ವೇಳೆ ಯುವಕನನ್ನು ಕಿಡ್ನಾಪ್ ನಡೆಸಿದ್ದಾನೆ. ಬಳಿಕ ಮಂಚಿ ಇರಾ, ಮುಡಿಪು ರಸ್ತೆಯ ನಿರ್ಜನ ಪ್ರದೇಶದ ಗುಡ್ಡದಲ್ಲಿ ಪೆಟ್ರೋಲ್ ಸುರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಅದ್ರಾಮ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.