ಲಕ್ನೋ: ಏಳು ವರ್ಷಗಳ ಅನಂತರ ಕೊಲೆ ಯಾಗಿದ್ದಾಳೆ ಎಂದು ಹೇಳಲಾದ ಮಹಿಳೆಯು ಪತ್ತೆಯಾಗಿದ್ದು, ಇದರಿಂದ ಉತ್ತರ ಪ್ರದೇಶ ಅಲೀಗಢ ಜಿಲ್ಲೆಯಲ್ಲಿ ದಾಖಲಾದ ಹತ್ಯೆ ಪ್ರಕರಣ ವೊಂದಕ್ಕೆ ಹೊಸ ತಿರುವು ಸಿಕ್ಕಿದೆ.
2015ರಲ್ಲಿ 15 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಅಲೀಗಢ ಜಿಲ್ಲೆಯ ಗೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಆಕೆಯ ತಂದೆ ದೂರು ನೀಡಿದ್ದರು.
ಕೆಲವು ದಿನಗಳ ಅನಂತರ ಆಗ್ರಾದಲ್ಲಿ ಬಾಲಕಿ ಯೊಬ್ಬಳ ಶವ ದೊರೆತಿತ್ತು. ಇದು ತನ್ನದೇ ಮಗಳ ದೇಹ ಎಂದು ದೂರುದಾರರು ಗುರುತಿ ಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ವಿಷ್ಣು ಎಂಬಾತನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಆದರೆ ವಿಷ್ಣು ತಾಯಿಗೆ ಪೊಲೀಸರ ತನಿಖೆ ಯಲ್ಲಿ ನಂಬಿಕೆ ಬರಲಿಲ್ಲ. ಆಕೆ ಸ್ವತಃ ಬಾಲಕಿಯ ಪತ್ತೆಗೆ ಮುಂದಾದರು.
ಕೆಲವು ದಿನಗಳ ಹಿಂದೆ ಆಕೆಯನ್ನು ಹತ್ರಾಸ್‌ನಲ್ಲಿ ಕಂಡ ವಿಷ್ಣು ತಾಯಿ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪತ್ತೆಯಾದ ಮಹಿಳೆಯನ್ನು ಕರೆತಂದಿದ್ದು, ಆಕೆಯ ಡಿಎನ್‌ಎ ಪರೀಕ್ಷೆಗೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆಯ ಫಲಿತಾಂಶವು ಆರೋಪಿ ವಿಷ್ಣು ಭವಿಷ್ಯವನ್ನು ನಿರ್ಧರಿಸಲಿದೆ. ಆತ ಕಳೆದ 7 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿ ಸುತ್ತಿದ್ದಾನೆ.