ಕಾರ್ಕಳ: ವಿದೇಶದಿಂದ ಬಂದಿದ್ದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪಿದ ಘಟನೆ ನಡೆಸಿದೆ.ರಿತೇಶ್ ನೀಲ್ ಮೊಂತೆರೋ(35) ಮೃತಪಟ್ಟ ಯುವಕ.
ರಿತೇಶ್ ದುಬೈನಲ್ಲಿ ಉದ್ಯೋಗ ಮಾಡಿಕೊಂಡಿದ್ದು ಇತ್ತೀಚೆಗೆ ಊರಿಗೆ ಬಂದಿದ್ದರು. ಕೆಲ ದಿನಗಳ ಹಿಂದೆ ಮೂಡುಬಿದಿರೆಯಲ್ಲಿ ನಾದಿನಿಯ ಮನೆಯ ಅಂಗಳದಲ್ಲಿ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು.
ಬಳಿಕ ಚಿಕಿತ್ಸೆ ಪಡೆದು ಬೆಳ್ಮನ್ ನ ತನ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ದಿನಾಂಕ ನ.30ರಂದು ಊಟ ಮಾಡಿ ಮಲಗಿದವರು ಬೆಳ್ಳಿಗ್ಗೆ ಎಬ್ಬಿಸಿದಾಗ ಅವರು ಮಾತನಾಡದೇ ಇದ್ದುದರಿಂದ ಅವರನ್ನು ಉಪಚರಿಸಿ ಬೆಳ್ಮಣನಿನ ವೈದ್ಯರನ್ನು ಮನೆಗೆ ಕರೆಸಿ ತೋರಿಸಿದಾಗ ರಿತೇಶ್ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.