ಬಂಟ್ವಾಳ: ಕೊಡುಗೈದಾನಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕಿ ನಿಧನ

ಬಂಟ್ವಾಳ: ಧಾರ್ಮಿಕ, ಸಾಮಾಜಿಕ ಧುರೀಣ, ಕೊಡುಗೈ ದಾನಿಯಾಗಿರುವ ಬಂಟ್ವಾಳ ತಾಲೂಕಿನ ಕೆ.ಸೇಸಪ್ಪ ಕೋಟ್ಯಾನ್(75)ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದು, ಇವರ ಮೃತದೇಹವನ್ನು ನಾಳೆ (ಜ. 27) ಬೆಳಗ್ಗೆ 9ರಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತರ ಸ್ವಗೃಹ ಪಚ್ಚಿನಡ್ಕದ ಶುಭ ನಿಲಯದಲ್ಲಿ ಇಡಲಾಗುತ್ತಿದ್ದು, ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.

ಇವರ ಮದುವೆಯಾಗಿ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮನೆಯಲ್ಲಿ ಶುಭಯಾನ ಎಂಬ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ಈ ಬಾರಿ ಪಡೆದಿದ್ದರು. ಇವರು ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯ ವಾಗಿದ್ದು, ಅನೇಕ ದೈವ ದೇವಸ್ಥಾನ ಗಳು ಜೀರ್ಣೋದ್ಧಾರ ಇವರ ಮೂಲಕ ನಡೆದಿವೆ. ಬಂಟ್ವಾಳ ‌ಪೋಲೀಸ್ ಲೈನ್ ನ ದೇವಸ್ಥಾನದ ಅಧ್ಯಕ್ಷ ರಾಗಿದ್ದ ಇವರು ಕಳೆದ 25 ವರ್ಷಗಳಿಂದ ಬಂಟ್ವಾಳ ಬಿಲ್ಲವ ಸಂಘದ ಯಶಸ್ವಿ ಅಧ್ಯಕ್ಷರಾಗಿ ಮಿಂಚಿದವರು.
ಭುವನೇಶ್ ಪಚ್ಚಿನಡ್ಕ, ಪತ್ನಿ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.

Check Also

ಮಂಗಳೂರು: ವಿಡಿಯೋ ಲೈಕ್ ಮಾಡಿ 5 ಲಕ್ಷ ಕಳೆದುಕೊಂಡರು..!

ಮಂಗಳೂರು: ಆನ್‌ಲೈನ್ ಗಳಿಕೆಯ ನಕಲಿ ಜಾಲಕ್ಕೆ ಸಿಲುಕಿ ವ್ಯಕ್ತಿಯೊಬ್ಬರು 5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೆ. 28ರಂದು ದೂರುದಾರರು ಇನ್ …

Leave a Reply

Your email address will not be published. Required fields are marked *

You cannot copy content of this page.