![WhatsApp Image 2023-01-19 at 5.22.53 PM](https://i0.wp.com/thrishulnews.com/wp-content/uploads/2023/01/WhatsApp-Image-2023-01-19-at-5.22.53-PM.jpeg?fit=800%2C450&ssl=1?v=1674129200)
![](https://i0.wp.com/thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg?fit=1050%2C600&ssl=1)
ಜನ ತಮ್ಮ ಫೋಟೋ ಶೂಟ್ ಇತರರಿಗಿಂತ ವಿಭಿನ್ನವಾಗಿರಲೆಂದು ಸಾಕಷ್ಟು ಬೇರೆ ಬೇರೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಸದ್ಯ ಹಿಂದಿ ಕಿರುತೆರೆ ನಟಿ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ ಜೋಡಿ ತಮ್ಮ ಬೆಡ್ ರೂಮ್ ಫೋಟೋಶೂಟ್ ಮಾಡಿಸಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ಫೋಟೋಶೂಟ್ ನಲ್ಲಿ ಅಂಕಿತಾ ಕಪ್ಪು ಪೈಟಿನಿ ಸೀರೆಯಲ್ಲಿ ಪರಿಪೂರ್ಣ ಮರಾಠಿ ವಧುವಿನಂತೆ ಕಾಣುತ್ತಿದ್ದಾರೆ. ಅದೇ ಸಮಯದಲ್ಲಿ, ಅವರ ಪತಿ ವಿಕ್ಕಿ ಜೈನ್ ಕೂಡ ಕಪ್ಪು ಕುರ್ತಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ, ಬೆಡ್ ರೂಮ್ ನಲ್ಲಿರುವ ಆಕೆಯ ರೋಮ್ಯಾಂಟಿಕ್ ಫೋಟೋಗಳಿಂದಾಗಿ ಜನರು ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಹಬ್ಬದ ವೇಳೆ ಬೆಡ್ ರೂಮ್ ಫೋಟೋಶೂಟ್ ಶೋಕಿ ಬೇಕಿತ್ತಾ ಅಂತಾ ನೆಟ್ಟಿಗರು ಕಿಡಿಕಾರಿದ್ದಾರೆ. 2021ರಲ್ಲಿ ವಿಕ್ಕಿ ಜೈನ್ ಜೊತೆ ಅಂಕಿತಾ ಲೋಖಂಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.