ರಕ್ತದಾನ ಮಾಡಿ ಜಾಗೃತಿ ಮೂಡಿಸಿದ ಪುಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು

ಪುಂಜಾಲಕಟ್ಟೆ ಕಾಲೇಜಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ರಕ್ತದಾನ


ಪುಂಜಾಲಕಟ್ಟೆ, ಎ. 26: ಇಲ್ಲಿಯ ಸರಕಾರಿ ಪ್ರಥಮದರ್ಜೆ ಕಾಲೇಜು ಆಂತರಿಕ ಗುಣಮಟ್ಟ ಭರವಸಾ ಕೋಶ, ಭಾರತೀಯ ಯುವ ರೆಡ್‌ಕ್ರಾಸ್, ರಾಷ್ಟೀಯ ಸೇವಾಯೋಜನೆ, ರೋವರ್ಸ್ ಮತ್ತು ರೆಂಜರ್ಸ್, ಹಳೆ ವಿದ್ಯಾರ್ಥಿ ಸಂಘ, ಹಾಗೂ ರೋಟರಿ ಕ್ಲಬ್ ಮಡಂತ್ಯಾರ್ ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಎ. 26ರಂದು ರಕ್ತದಾನ ಶಿಬಿರದ ಉದ್ಘಾಟನ ಕಾರ್ಯಕ್ರಮ ಜರಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಟಿ.ಕೆ. ಶರತ್‌ಕುಮಾರ್ ಅವರು ವಹಿಸಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉದ್ಘಾಟನೆಯನ್ನು ಮಡಂತ್ಯಾರು ರೋಟರಿ ಕ್ಲಬ್‌ನ ಹರ್ಷನಾತರಾಯಣ ಶೆಟ್ಟಿ ನೆರವೇರಿಸಿದರು. ರಕ್ತದಾನದ ಕುರಿತು ಜಾಗೃತಿ ಮೂಡಿಸುದರ ಫಲವಾಗಿ ಭಿತ್ತಿ ಪತ್ರವನ್ನು ಅನಾವರಣಗೊಳಿಸಲಾಯಿತು. ಮುಖ್ಯ ಅತಿಥಿಯಾಗಿ ಆಂತೋನಿ ಅವರು ರಕ್ತದಾನದ ಜಾಗೃತಿಯ ಕುರಿತು ಮಾತುಗಳನ್ನಾಡಿದರು. ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಕ್ರೀಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನವನ್ನು ಮಾಡಿದರು. ೮೭ ಯೂನಿಟ್ ರಕ್ತ ಸಂಗ್ರಹವಾಗಿದೆ.

Check Also

ಪ್ರೇಮಿಗಳಿಗೆ ಶಾಕಿಂಗ್ ನ್ಯೂಸ್‌.. ಲವ್​​ ಬ್ರೇನ್​ಗೆ ತುತ್ತಾಗಿ ಯುವತಿ ಆಸ್ಪತ್ರೆಗೆ ದಾಖಲು

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಕೈಯಲ್ಲಿ ಫೋನ್​ ಇರುತ್ತೆ. ಅದರಲ್ಲೂ ಪ್ರೀತಿಯಲ್ಲಿದ್ದ ಯುವಕ ಯುವತಿಯರಿಗೆ ಫೋನ್ ಎಂದರೆ …

Leave a Reply

Your email address will not be published. Required fields are marked *

You cannot copy content of this page.