ತಾಜಾ ಸುದ್ದಿ

ವಾಹನ ಸವಾರರಿಗೆ ಗುಡ್ ನ್ಯೂಸ್ : ಪೆಟ್ರೋಲ್-ಡೀಸೆಲ್ ದರ ಪ್ರತಿ ಲೀಟರ್ ಗೆ 2 ರೂಪಾಯಿ ಇಳಿಕೆ

ನವದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಪೆಟ್ರೋಲ್, ಡೀಸೆಲ್ (Petrol and Diesel) ದರ ಇಳಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ 2 ರೂಪಾಯಿ ಇಳಿಕೆಯಾಗಿದ್ದು, ಪರಿಷ್ಕೃತ ದರ ನಾಳೆ ಅಂದರೆ ಮಾರ್ಚ್ 15ರ ಬೆಳಗ್ಗೆ 6ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂಪಾಯಿ ಕಡಿತ ಮಾಡಿದ್ದರು. ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿತಗೊಳಿಸಲಾಗಿದೆ. ಇದರೊಂದಿಗೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಬೆಂಗಳೂರಿನಲ್ಲಿ ಇಂದು …

Read More »

ಪುತ್ತಿಲ ಪರಿವಾರ ಬಿಜೆಪಿ ಜತೆ ವಿಲೀನ- ಚೌಟರಿಗೆ ಮತ್ತಷ್ಟು ಬಲ

ಪುತ್ತೂರು: ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ಪಕ್ಷ ಸೇರ್ಪಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿವಾಸದಲ್ಲಿ ಗುರುವಾರ ರಾತ್ರಿ ನಡೆದ ಸಭೆಯಲ್ಲಿ ಹಸುರು ನಿಶಾನೆ ಸಿಕ್ಕಿದೆ. ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪ್ರಮುಖ ನಾಯಕರೊಂದಿಗೆ ಪುತ್ತಿಲ ಸಮಾಲೋಚಿಸಿದರು. ಬಳಿಕ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿವಾಸಕ್ಕೆ ಆಗಮಿಸಿದ ಪುತ್ತಿಲರನ್ನು ಆತ್ಮೀಯವಾಗಿ ಬರಮಾಡಿಕೊಂಡ ವಿಜಯೇಂದ್ರ ಕೆಲ ಹೊತ್ತು ಚರ್ಚೆ ನಡೆಸಿದರು. ಬಳಿಕ ಕೈಗೊಂಡ ತೀರ್ಮಾನದಂತೆ ಪುತ್ತಿಲ ಅವರು ಮಂಗಳೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪುತ್ತಿಲ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಪುತ್ತೂರು ಭಾಗದಲ್ಲಿ …

Read More »

ಮಂಗಳೂರು : ಕನ್ನಡ ಸಿನಿಮಾ ‘ಮೆಹಬೂಬ’ದಲ್ಲಿ ಹಿಂದುತ್ವ ಜಿಹಾದ್ ಪ್ರೇರೇಪಣೆ ಆರೋಪ

ಮಂಗಳೂರು : ನಾಳೆ ರಿಲೀಸ್ ಆಗಲಿರುವ ಮೆಹಬೂಬ ಕನ್ನಡ ಸಿನಿಮಾದಲ್ಲಿ ಹಿಂದುತ್ವ ಜಿಹಾದ್ ಪ್ರೇರೇಪಣೆ ಆರೋಪ ಕೇಳಿ ಬಂದಿದೆ. ಇದೀಗ ಮೆಹಬೂಬ ಸಿನಿಮಾ ಬಿಡುಗಡೆಗೆ ಮುಸ್ಲಿಂ ಸಮುದಾಯದ ವಿರೋಧ‌ ವ್ಯಕ್ತವಾಗಿದೆ. ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಅಭಿನಯದ ಈ ಸಿನಿಮಾ ಕರಾವಳಿಯ ನೈಜ ಘಟನೆಯೊಂದನ್ನು ಆಧರಿಸಿ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಈ ಸಿನಿಮಾ ಬಿಡುಗಡೆಗೆ ಮುಸ್ಲಿಂ ಸಮುದಾಯ ಹಾಗೂ ವಿದ್ಯಾರ್ಥಿ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ವಿರುದ್ಧ ಆಕ್ರೋಶ‌ ಕೇಳಿ ಬರುತ್ತಿದೆ. ಈ ಸಿನಿಮಾವನ್ನು ನಾಳೆ ಬಿಡುಗಡೆ ಮಾಡಬಾರದೆಂದು ಸಿಎಂಗೆ …

Read More »

ಉಡುಪಿ: ಬಸ್ ನ ಚಕ್ರಕ್ಕೆ ಸಿಲುಕಿ ಬಸ್‌ ಮಾಲಕ ‘ದಯಾನಂದ ಶೆಟ್ಟಿ’ ಮೃತ್ಯು

ಮಣಿಪಾಲ: ಬಸ್ ಮಾಲಕನೇ ಗ್ಯಾರೇಜ್ ಒಂದರಲ್ಲಿ ಬಸ್ ನ ಅಡಿಗೆ ಬಿದ್ದು ಮೃತಪಟ್ಟ ಘಟನೆ ಮಣಿಪಾಲದ ಬಡಗಬೆಟ್ಟುವಿನಲ್ಲಿ ಸಂಭವಿಸಿದೆ. ಅವಘಡದಲ್ಲಿ ಮೃತಪಟ್ಟವರನ್ನು ಉಡುಪಿ ಮಾಂಡವಿ ಬಸ್‌ನ ಮಾಲಕ ದಯಾನಂದ ಶೆಟ್ಟಿ (65) ಎಂದು ತಿಳಿದುಬಂದಿದೆ.ಇವರು ತಮ್ಮ ಬಸ್‌ನ್ನು 80 ಬಡಗಬೆಟ್ಟು ಬಳಿಯ ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದರು. ಇದನ್ನು ನೋಡಲು ಬಂದಿದ್ದ ಈ ಸಂದರ್ಭದಲ್ಲಿ ಮೆಕ್ಯಾನಿಕ್ ಬಸ್‌ನ್ನು ಒಮ್ಮಿಂದೊಮ್ಮಲೆ ಚಲಾಯಿಸಿದ್ದರು. ಆಗ ಬಸ್‌ನ ಎದುರು ಇದ್ದ ದಯಾನಂದ ಅವರು ಬಸ್ ನ ಎದುರಿನ ಚಕ್ರಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಅವಘಡದಲ್ಲಿ ದಯಾನಂದ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ …

Read More »

ಹಾವೇರಿ ಕ್ಷೇತ್ರಕ್ಕೆ ಬಸವರಾಜ್ ಬೊಮ್ಮಾಯಿ ಹೆಸರು ಘೋಷಣೆ-ಈಶ್ವರಪ್ಪ ಆಕ್ರೋಶ; ಶಿವಮೊಗ್ಗದಿಂದ ಬಂಡಾಯ?

ಶಿವಮೊಗ್ಗ: ಬಿಜೆಪಿ ಎರಡನೇ ಪಟ್ಟಿ ಪ್ರಕಟವಾಗುತ್ತಿದ್ದಂತೆ ಹಾವೇರಿ ಕ್ಷೇತ್ರಕ್ಕೆ ಬಸವರಾಜ್ ಬೊಮ್ಮಾಯಿ ಅವರ ಹೆಸರು ಘೋಷಣೆಯಾದುದನ್ನು ಕಂಡು ಮಾಜಿ ಸಿಎಂ ಕೆ.ಎಸ್. ಈಶ್ವರಪ್ಪ ಅವರು ಭಾರೀ ಆಕ್ರೋಶ ಹೊರ ಹಾಕಿ ಬೆಂಬಲಿಗರ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ”ಯಡಿಯೂರಪ್ಪ ಅವರು ನನಗೆ ಮೋಸ ಮಾಡಿದ್ದಾರೆ. ಕಾಂತೇಶ್ ಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಮಾರ್ಚ್ 15 ರಂದು ಸಂಜೆ ಶಿವಮೊಗ್ಗದಲ್ಲಿ ಬೆಂಬಲಿಗರ ಸಭೆ ನಡೆಸುತ್ತೇನೆ. ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಾನು …

Read More »

ಆರು ತಿಂಗಳ ಮೊದಲು ದ.ಕ.ಜಿಲ್ಲೆಯ ಸೀಟ್ ಬದಲಾವಣೆಗೆ ಒಪ್ಪಿಗೆ ನೀಡಿದ್ದೆ – ನಳಿನ್ ಕುಮಾರ್ ಕಟೀಲು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿವರ್ತನೆಗೆ ಅವಕಾಶವಿದೆ. ಹೊಸಬರಿಗೆ ಅವಕಾಶ ಕೊಡುವುದಾದರೆ ನನ್ನಿಂದ ಅಡ್ಡಿಯಿಲ್ಲ ಎಂದು ಆರು ತಿಂಗಳ ಮೊದಲೇ ಪಕ್ಷದ ಹಿರಿಯರಿಗೆ ತಿಳಿಸಿದ್ದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಟಿಕೆಟ್ ಕೈತಪ್ಪಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು. ಬಿಜೆಪಿ ನನಗೆ 15 ವರ್ಷಗಳ ದೊಡ್ಡ ಅವಕಾಶ ಕೊಟ್ಟಿದೆ. ಈ ಕ್ಷೇತ್ರದ ಸಂಸದನಾಗಲು ಪಕ್ಷದ ಹಿರಿಯರು ಅವಕಾಶ …

Read More »

BREAKING: BJPಯಿಂದ ಎರಡನೇ ಪಟ್ಟಿ ಪ್ರಕಟ, ಉಡುಪಿ-ಚಿಕ್ಕಮಗಳೂರು ಕೋಟಾಗೆ ಟಿಕೇಟ್

ಬೆಂಗಳೂರು: ಲೋಕಸಭಾ ಚುನಾವಣೆ 2024 ಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕುತೂಹಲ ಕೆರಳಿಸಿತ್ತು. ಉಡುಪಿಯಿಂದ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕಣಕ್ಕೆ ಇಳಿಯಲಿದ್ದಾರೆ. ಈ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೇಟ್ ನೀಡಲಾಗಿದೆ. ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲಿಗೆ ಕ್ಷೇತ್ರ ಕೈತಪ್ಪಿದ್ದು, ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು ಉತ್ತರ ಸಂಸದರಾಗಿದ್ದ ಡಿ.ವಿ. ಸದಾನಂದ ಗೌಡ …

Read More »

ಪುತ್ತೂರು : ಮಹಿಳೆಯರಿಗೆ ಸರ್ಕಾರ ಉಚಿತ ಬಸ್, ಫುಟ್ ಬೋರ್ಡ್‌ನಲ್ಲೇ ನಿಂತು ಅಪಾಯಕಾರಿ ಪ್ರಯಾಣ..!

ಪುತ್ತೂರು : ಮಹಿಳೆಯರಿಗೆ ಸರ್ಕಾರ ಉಚಿತ ಬಸ್‌ ಗ್ಯಾರಂಟಿ ನೀಡಿದ್ದು ಸರಕಾರಿ ಬಸ್ಸುಗಳು ಫುಲ್ ರಶ್ ಆಗಿ ತುಂಬು ತುಳುಕುತ್ತಿವೆ. ಸರಕಾರಿ ಬಸ್ ಗಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಮಹಿಳೆಯರು, ಮಕ್ಕಳು ಜೀವ ಕೈಯಲ್ಲಿ ಹಿಡಿದು ಬಸ್ ಫುಟ್ ಬೋರ್ಡ್‌ನಲ್ಲೇ ನಿಂತು ಪ್ರಯಾಣಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬಸ್ ನಿಲ್ಲಿಸದೇ ಹೋದಲ್ಲಿ ರಸ್ತೆ ಮಧ್ಯೆ ಬಂದು ವಿದ್ಯಾರ್ಥಿಗಳು ನಿಲ್ಲುತ್ತಿದ್ದಾರೆ ಎಂದು ಬಸ್ ನಿರ್ವಾಹಕರು ದೂರಿದ್ದಾರೆ. ಬಸ್ ನಲ್ಲಿ ಸ್ಥಳಾವಕಾಶ ಇಲ್ಲ ಎಂದು ನಿರ್ವಾಹಕರು ಹೇಳಿದರೂ ಕೇಳದೆ. ಅಪಾಯಕಾರಿ ರೀತಿಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಎಂದು ನಿರ್ವಹಕರು …

Read More »

ಆಧಾರ್ ಕಾರ್ಡ್’ ಉಚಿತ ನವೀಕರಣ ಗಡುವು ವಿಸ್ತರಣೆ ; ಮನೆಯಲ್ಲಿ ಕುಳಿತು ಅಪ್ಡೇಡ್ ಮಾಡೋದ್ಹೇಗೆ ಗೊತ್ತಾ.?

ನವದೆಹಲಿ: ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸುವ ಗಡುವನ್ನು ಕೇಂದ್ರ ಸರ್ಕಾರ ಜೂನ್ 14 ರವರೆಗೆ ವಿಸ್ತರಿಸಿದೆ. ಮಾರ್ಚ್ 14 ರ ಗಡುವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಜೂನ್ 14 ರವರೆಗೆ ವಿಸ್ತರಿಸಿತ್ತು. ಜೂನ್ 14 ರವರೆಗೆ ಈ ಸೇವೆ ಮೈಆಧಾರ್ ಪೋರ್ಟಲ್ನಲ್ಲಿ ಮಾತ್ರ ಲಭ್ಯವಿದೆ ಎಂದು ಆಧಾರ್ ಸಂಸ್ಥೆ ತಿಳಿಸಿದೆ. “ನಿವಾಸಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯ ಆಧಾರದ ಮೇಲೆ, ಈ ಸೌಲಭ್ಯವನ್ನು ಇನ್ನೂ 3 ತಿಂಗಳು ಅಂದರೆ 15.12.2023 ರಿಂದ 14.03.2024 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅದರಂತೆ, ಮೈ ಆಧಾರ್ ಪೋರ್ಟಲ್ ಮೂಲಕ …

Read More »

ಶಿರಾಡಿ ಘಾಟಿಯಲ್ಲಿ ರಸ್ತೆಗುರುಳಿದ ಗ್ಯಾಸ್ ತುಂಬಿದ ಟ್ಯಾಂಕರ್ , ಗ್ಯಾಸ್ ಸೋರಿಕೆ –ಸಂಚಾರ ಅಸ್ತವ್ಯಸ್ತ

ಚಾಲಕನ ನಿಯಂಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾದ ಘಟನೆ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿಘಾಟ್‌ನಲ್ಲಿ ನಡೆದಿದೆ. ಶಿರಾಡಿಘಾಟ್ ರಸ್ತೆಯ ಡಬಲ್ ಕ್ರಾಸ್ ಸನಿಹದ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಸಿಗದೆ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿ ಗ್ಯಾಸ್ ಸೋರಿಕೆಯಾಗುತ್ತಿದೆ. ಮುನ್ನಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸುತ್ತಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ತಲುಪಿದೆ. ಮಂಗಳೂರು ಧರ್ಮಸ್ಥಳಕ್ಕೆ ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ …

Read More »

You cannot copy content of this page.