ತಾಜಾ ಸುದ್ದಿ

ಕ ಸಾ ಪ ಉಡುಪಿ ತಾಲೂಕು ಘಟಕದಿಂದ ಮನೆಯೇ ಗ್ರಂಥಾಲಯ ವಿನೂತನ ಕಾರ್ಯಕ್ರಮ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ‘ಮನೆಯೇ ಗ್ರಂಥಾಲಯ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಕನ್ನಡದ ಹಿರಿಯ ವಿದ್ವಾಂಸ ನಾಡೋಜ ಡಾ ಕೆ. ಪಿ. ರಾವ್ ಅವರು ಇದೇ ಬರುವ ಮಂಗಳವಾರ ಸಂಜೆ 5:30ಕ್ಕೆ ಉಡುಪಿಯ ಬೈಲೂರಿನಲ್ಲಿರುವ ಶಶಿಪ್ರಭಾ ಮತ್ತು ವಿವೇಕಾನಂದ ಅವರ ಮನೆಯಲ್ಲಿ ಚಾಲನೆ ನೀಡಲಿದ್ದಾರೆ. ಮನೆ ಮಂದಿರ ಅಂಗಡಿ ಆಸ್ಪತ್ರೆ ಬ್ಯಾಂಕು ಇನ್ನಿತರ ಸ್ಥಳಗಳಲ್ಲಿ ಗ್ರಂಥಾಲಯ ಸ್ಥಾಪನೆಗೊಳ್ಳುವ ಮೂಲಕ ಓದುವ ಹವ್ಯಾಸ ಬೆಳೆಸುವ ಒಂದು ವಿನೂತನ ಕಾರ್ಯಕ್ರಮವೇ ಮನೆಯೇ ಗ್ರಂಥಾಲಯ. ಕನ್ನಡದ ಹಿರಿಯ ಹಾಗೂ ಕಿರಿಯ ಲೇಖಕರ, …

Read More »

ಉಡುಪಿ: ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಯುವಕರಿಂದ ಮಾರಣಾಂತಿಕ ಹಲ್ಲೆ

ಉಡುಪಿ: ತಡರಾತ್ರಿ ಪೆಟ್ರೋಲ್ ಹಾಕದೇ ಇದ್ದದ್ದಕ್ಕೆ ಬಂಕ್ ಸಿಬ್ಬಂದಿ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ನಡೆದಿದೆ. ಪ್ರದೀಪ್ ಕುಮಾರ್ (26) ಹಲ್ಲೆಗೆ ಒಳಗಾದ ಬಂಕ್ ಸಿಬ್ಬಂದಿ. ಮಧ್ಯರಾತ್ರಿ ಪೆಟ್ರೋಲ್ ಹಾಕಲು ಎರಡು ಬೈಕ್ ಗಳಲ್ಲಿ ಯುವಕರ ಬಂಕ್ ಗೆ ಬಂದಿದ್ದಾರೆ. ಈ ವೇಳೆ ಯುವಕರು ಪೆಟ್ರೋಲ್ ಹಾಕಲು ಹೇಳಿದಾಗ ಬಂಕ್ ಬಂದ್ ಆಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಬಂಕ್ ಸಿಬ್ಬಂದಿಯ ಮಾತಿನಿಂದ ಕುಪಿತಗೊಂಡ ಯುವಕನೋರ್ವ ಸಿಬ್ಬಂದಿ ಪ್ರದೀಪ್ ಕುಮಾರ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. …

Read More »

ಬೃಹತ್ ಸ್ವಚ್ಚತಾ ಕಾರ್ಯ ಕ್ರಮ : 5000ರೂ ದಂಡ ವಸೂಲಿ

ಮಂಗಳೂರು ತಾ.ಪಂ: ನೀರುಮಾರ್ಗ ಗ್ರಾಮ ಪಂಚಾಯತ್ ವತಿಯಿಂದ ಇಂದು ಗ್ರಾಮ‌ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ‌ ಸ್ಥಳಗಳಲ್ಲಿನ ತ್ಯಾಜ್ಯ ಸಂಗ್ರಹಿಸಿ‌ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಬೃಹತ್ ಸ್ವಚ್ಚತಾ ಕಾರ್ಯ ಕ್ರಮ ಆಯೋಜಿಸಲಾಗಿತ್ತು. ಸ್ವಚ್ಚತಾ ಕಾರ್ಯದ ವೇಳೆ ರಸ್ತೆ ಬದಿ ಎಸೆದ ಕಸದ ಮೂಟೆಯಲ್ಲಿ ಕೆಲವೊಂದು ಬಿಲ್ ಗಳು ಹಾಗೂ ಆನ್ ಲೈನ್ ನಿಂದ ಖರೀದಿಸಿದ ವಸ್ತುಗಳ ಕವರ್ ಗಳು ಸಿಕ್ಕಿದ್ದು, ಅದರಲ್ಲಿನ ವಿಳಾಸವನ್ನು ಪತ್ತೆ ಹಚ್ಚಿ ಸಂಬಂಧಪಟ್ಟವರಿಂದ ಸುಮಾರು 5000 ರೂ ದಂಡ ವಸೂಲಿ ಮಾಡಲಾಯಿತು. ಈ ಸ್ವಚ್ಚತಾ ಕಾರ್ಯದಲ್ಲಿ ಗ್ರಾ.ಪಂ‌ ಅಧ್ಯಕ್ಷರು, …

Read More »

ಉಡುಪಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ- ಕಾನೂನು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ

ಉಡುಪಿ: ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಎಗರಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿದ್ಯಾರ್ಥಿಗಳಾದ ಶ್ರೀವತ್ಸ ಮತ್ತು ಗಣೇಶ್‌ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಉಡುಪಿ ಸಂಚಾರ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಸುದರ್ಶನ್‌ ದೊಡ್ಡಮನಿ ಅವರು ಸಿಬಂದಿ ಸತೀಶ್‌ ಅವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದರು. ಈ ವೇಳೆ ಸಿಟಿ ಬಸ್‌ ನಿಲ್ದಾಣದ ಕಡೆಯಿಂದ ಕಲ್ಸಂಕ ಕಡೆ ಹೋಗುತ್ತಿರುವಾಗ ಓರ್ವ ವ್ಯಕ್ತಿ ತನ್ನ ಬೈಕ್‌ನಲ್ಲಿ ಕಲ್ಸಂಕ ಕಡೆಗೆ ಹೆಲ್ಮೆಟ್‌ ಧರಿಸದೇ ಮೊಬೈಲ್‌ನಲ್ಲಿ ಮಾತನಾಡುತ್ತಾ ಚಲಾಯಿಸುತ್ತಿದ್ದ. ನಿಲ್ಲಿಸುವಂತೆ ಸೂಚಿಸಿದಾಗ ಆತ ವೈನ್‌ಗೇಟ್‌ ಬಳಿ ಹೋಗಿ ನಿಲ್ಲಿಸಿದ್ದಾನೆ. …

Read More »

ಸೇಂಟ್‌ ಮೇರೀಸ್‌ನಲ್ಲಿ 4 ತಿಂಗಳು ಬೋಟ್‌ಯಾನ ಸ್ಥಗಿತ..!

ಮಲ್ಪೆ ಬೀಚ್‌ & ಸೀವಾಕ್‌ ಪ್ರದೇಶಗಳಿಂದ ಸೈಂಟ್‌ ಮೇರೀಸ್‌ ದ್ವೀಪಕ್ಕೆ ತೆರಳುವ ಪ್ರವಾಸಿ ಬೋಟ್‌, ಬೀಚ್‌ನಲ್ಲಿ ನಡೆಸುವ ಜಲಕ್ರೀಡಾ ಚಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾರ್ಬರ್‌ ಕ್ರಾಫ್ಟ್‌ ನಿಯಮ ಪ್ರಕಾರ ಮೇ 16ರಿಂದ ಸೆ.15ರವರೆಗೆ ಈ ಚಟುವಟಿಕೆ ಸ್ಥಗಿತಗೊಳಿಸಲಾಗುತ್ತದೆ. ಮಳೆಗಾಲದಲ್ಲಿ ಸಮುದ್ರದ ಅಲೆಗಳ ಒತ್ತಡದ ಹಿನ್ನಲೆಯಲ್ಲಿ ಯಾವುದೇ ಪ್ರವಾಸಿ ಬೋಟ್‌ಯಾನ, ಜಲಕ್ರೀಡೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಸೀವಾಕ್‌ ವೇ, ಉದ್ಯಾನವನ ಮತ್ತು ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ವಿಹರಿಸಬಹುದು ಎಂದು ಮಲ್ಪೆ ಅಭಿವೃದ್ಧಿ ಸಮಿತಿ ತಿಳಿಸಿದೆ.

Read More »

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮಂಗಳೂರು: ಮೂಲತಃ ಮಂಗಳೂರು ನಿವಾಸಿ, ಮುಂಬೈಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (70) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಮುಂಬೈಯಲ್ಲಿ ನಿಧನರಾದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ತನ್ನ 14ನೇ ವಯಸ್ಸಿನಲ್ಲೇ ಮುಂಬೈಗೆ ತೆರಳಿದ್ದ ರಘುನಂದನ್ ಕಾಮತ್ ತನ್ನ ಸಹೋದರನ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದರು. 1984 ರಲ್ಲಿ ಕೇವಲ 4 ಮಂದಿ ಸಿಬ್ಬಂದಿ ಜತೆ ನ್ಯಾಚುರಲ್ ಐಸ್ ಕ್ರೀಂ ಸಂಸ್ಥೆಯನ್ನು ಆರಂಭಿಸಿದರು. ಪ್ರಸ್ತುತ ನ್ಯಾಚುರಲ್ ಸಂಸ್ಥೆ ದೇಶದಲ್ಲೇ ಪ್ರತಿಷ್ಠಿತ ಐಸ್ ಕ್ರೀಂ ಉದ್ಯಮವಾಗಿ ಸಾವಿರಾರು …

Read More »

ಹೆಬ್ರಿ: ಕೆ ಎಸ್ ಆರ್ ಟಿ ಸಿ ಬಸ್ ಸಿಬ್ಬಂದಿ ಮೇಲೆ ಪ್ರವಾಸಿಗರಿಂದ ಹಲ್ಲೆ

ಹೆಬ್ರಿ: ಕೆ ಎಸ್ ಆರ್ ಟಿ ಸಿ ಬಸ್ ಸಿಬ್ಬಂದಿ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸಂಭವಿಸಿದೆ. ಆಗುಂಬೆಯಿಂದ ಹೆಬ್ರಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ನ ಹಿಂದೆ ಪ್ರವಾಸಿಗರ ಕಾರಿತ್ತು.ಈ ವೇಳೆ ಪ್ರವಾಸಿಗರ ಕಾರಿಗೆ ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾರಿನಲ್ಲಿದ್ದ ಪ್ರವಾಸಿಗರು ,ಘಾಟಿಯ ಮಧ್ಯೆ ಬಸ್ ನಿಲ್ಲಿಸಿ ನಿರ್ವಾಹಕ ಮತ್ತು ಚಾಲಕನಿಗೆ ಹಲ್ಲೆ ಮಾಡಿದ್ದಾರೆ. ಈ ಗಲಾಟೆಯಿಂದಾಗಿ ಘಾಟಿಯಲ್ಲಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಆಗಿದೆ.ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಪುತ್ತೂರು : ಹೆಲ್ಮೆಟ್ ಇಲ್ಲದೆ ರಾಂಗ್ ಸೈಡ್ ನಲ್ಲಿ ವಿದ್ಯಾರ್ಥಿಗಳ ತ್ರಿಬಲ್ ರೈಡ್ : ಕಾರುಗಳಿಗೆ ಡಿಕ್ಕಿ!

ಪುತ್ತೂರು : ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ರಾಂಗ್ ಸೈಡ್ ನಿಂದ ಬಂದು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ದರ್ಬೆ ಸಮೀಪ ನಡೆದಿದೆ. ಆಕ್ಟಿವಾದಲ್ಲಿ ಮೂವರು ವಿದ್ಯಾರ್ಥಿಗಳು ಹೆಲ್ಮೆಟ್ ಕೂಡ ಧರಿಸದೆ ರಾಂಗ್ ಸೈಡ್ ನಿಂದ ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Read More »

ಗಾಂಧಿ ಆಸ್ಪತ್ರೆಯ 30ರ ಸಂಭ್ರಮದಿ ರಾಜಾಂಗಣದಲ್ಲಿ ಹರಿದು ಬಂದ ಗಂಗಾ ಹಾಗು ಅನುರೂಫ್ ಅಪರೂಪದ ವಯೋಲಿನ್ ನಾದಕ್ಕೆ ಮನಸೋತ ಕೃಷ್ಣನಗರಿ

ಖ್ಯಾತ ಬಾಲ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರನ್ ರವರ ವಯೋಲಿನ್ ವಾದನ ಕಛೇರಿ ಬುಧವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯ ನಡುವೆ ನಡೆಯಿತು. ಅಪಾರ ಜನಪ್ರಿಯತೆ ಯನ್ನು ಪಡೆದುಕೊಂಡಿರುವ ಈ ಬಾಲ ಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ, ಗೌರವಿಸಿ ಹರಸಿದರು . ಗುರು ವಿದ್ವಾನ್ ಶ್ರೀ ಅನುರೂಪ್ ಹಾಗು ಪಕ್ಕವಾದ್ಯದಲ್ಲಿ ಸಹಕರಿಸಿದರನ್ನು ಪ್ರಸಾದ ನೀಡಿ ಗೌರವಿಸಿದರು ರಾಜಾಂಗಣ ದಲ್ಲಿ ನಡೆದ ಕಿಕ್ಕಿರಿದ ಕಲಾಪ್ರಿಯರು ಪಿಟೀಲುವಾದನದ ಸುಧೆಯನ್ನು ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆಯ …

Read More »

ಉಳ್ಳಾಲ : ಎರಡು ಸ್ಕೂಟರ್‌ಗಳ ಮಧ್ಯೆ ಅಪಘಾತ – ಸಹ ಸವಾರ ಸಾವು..!

ಉಳ್ಳಾಲ : ಎರಡು ಸ್ಕೂಟರ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ಸಹ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಗರದ ಹೊರವಲಯದ ಕಲ್ಲಾಪು ಜಂಕ್ಷನ್ ನಲ್ಲಿ ನಡೆದಿದೆ. ಉಳ್ಳಾಲ ಕೋಟೆಪುರ, ಕೋಡಿ ನಿವಾಸಿ ಅಹಮ್ಮದ್ ನಿಷಾದ್ (22) ಮೃತಪಟ್ಟ ಯುವಕ. ನಿಷಾದ್ ಮುಂಜಾನೆ 4ಗಂಟೆಯ ವೇಳೆಗೆ ಸಯ್ಯದ್ ಹಫೀಜ್ ಎಬುವರೊಂದಿಗೆ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಮಂಗಳೂರಿನಿಂದ ತೊಕ್ಕೊಟ್ಟಿಗೆ ಬರುತ್ತಿದ್ದರು. ಈ ವೇಳೆ ಕಲ್ಲಾಪು ಜಂಕ್ಷನ್ ನಲ್ಲಿ ತೊಕ್ಕೊಟ್ಟಿನಿಂದ ಬಂದು ಗ್ಲೋಬಲ್ ಮಾರ್ಕೆಟ್ ಗೆ ಕ್ರಾಸ್ ಆಗುತ್ತಿದ್ದ ಸ್ಕೂಟ‌ರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ …

Read More »

You cannot copy content of this page.