ಉಡುಪಿ : ಉಡುಪಿ ಜಿಲ್ಲೆಯಲ್ಲಿ ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿದ್ದಾರೆ. ಉಡುಪಿ ಜಿಲ್ಲೆ ಕಾಪು ಠಾಣಾ ವ್ಯಾಪ್ತಿಯ ಪಾಂಗಾಳದಲ್ಲಿ ಈ ಘಟನೆ ನಡೆದಿದ್ದು ಮೃತರನ್ನು 39 ವರ್ಷದ ಶರತ್ ಶೆಟ್ಟಿ ಎಂದು ಗುರುತ್ತಿಸಲಾಗಿದೆ.
ಭೂ ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಶರತ್ ಶೆಟ್ಟಿ ಭೂ ವ್ಯವಹಾರ ಮಾಡಿಕೊಂಡಿದ್ದರು ಎನ್ನಲಾಗಿದೆ.
ಪಾಂಗಾಳದಲ್ಲಿ ನೇಮೋತ್ಸದಲ್ಲಿದ್ದ ಶರತ್ ಶೆಟ್ಟಿಯಲ್ಲಿ ಕರೆ ಮಾಡಿ ಪಾಂಗಾಳ ಸೇತುವೆ ಬಳಿ ಬರಲು ಹೇಳಿದ ದುಷ್ಕರ್ಮಿಗಳು ಅಲ್ಲಿ ಬಂದ ಶೆಟ್ಟರ ಮೇಲೆ ಡ್ರಾಗರ್‌ನಿಂದ ಹಲ್ಲೆ ಮಾಡಿ ಬಳಿಕ ಪರಾರಿಯಾಗಿದ್ದಾರೆ, ತೀವ್ರ ರಕ್ತ ಸ್ರಾವದಲ್ಲಿ ಬಿದಿದ್ದ ಶರತ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶ್ವಾನ ದಳ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.