ತಾಜಾ ಸುದ್ದಿ

ಉಡುಪಿ: ಹಾಲಿನ ದರ ಕನಿಷ್ಠ ಐದು ರೂಪಾಯಿ ಕೂಡಲೇ ಏರಿಸಬೇಕೆಂದು ಸಹಕಾರ ಭಾರತಿ ವತಿಯಿಂದ ಸಿಎಂಗೆ ಮನವಿ

ಉಡುಪಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನ.7ರಂದು ಉಡುಪಿಗೆ ಭೇಟಿ ನೀಡಿದ್ದರು. ಈ ವೇಳೆ ಹೈನುಗಾರ ರೈತರಿಂದ ಖರೀದಿಸುವ ಹಾಲಿನ ದರ ಕನಿಷ್ಠ ಐದು ರೂಪಾಯಿ ಕೂಡಲೇ ಏರಿಸಬೇಕೆಂದು ಸಹಕಾರ ಭಾರತಿ ವತಿಯಿಂದ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅವರು ಸಿಎಂ ಗೆ ಮನವಿಯನ್ನು ಸಲ್ಲಿಸಲಾಯಿತು. ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದರ ಒಕ್ಕೂಟದ ರಚನೆ ಮತ್ತು ಸಾಲ ಮನ್ನ ಯೋಜನೆಯಲ್ಲಿ ಬಾಕಿ ಉಳಿದಿರುವ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದರು. ಈ ಸಂದರ್ಭದಲ್ಲಿ , ಸಹಕಾರ ಭಾರತಿ ಹಾಲು ಪ್ರೊಕೋಸ್ಟದ ರಾಜ್ಯ ಸಂಚಾಲಕ ಸಾಣೂರು …

Read More »

‘ಹಿಂದೂ’ ಭಾರತೀಯ ಪದವೇ ಅಲ್ಲ, ಅದರ ಅರ್ಥ ಬಹಳ ಅಶ್ಲೀಲ : ವಿವಾದಕ್ಕೆ ಕಾರಣವಾಯ್ತು ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ‘ಹಿಂದೂ’ ಎಂಬುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಅವರ ಹೇಳಿಕೆಯ ವಿಡಿಯೋವನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಾರಕಿಹೊಳಿ, ಹಿಂದೂ ಪದದ ಅರ್ಥವನ್ನು ತಿಳಿದ ನಂತರ ನಾಚಿಕೆಪಡುತ್ತಾರೆ ಮತ್ತು ಅದರ ಬಗ್ಗೆ ಚರ್ಚೆ ನಡೆಯಬೇಕು ಎಂದು ಹೇಳಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್‌ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, …

Read More »

ಶಾಸಕ ರೇಣುಕಾಚಾರ್ಯ ಸಹೋದರ ಪುತ್ರನ ಸಾವಿನ ಹಿಂದಿನ ಮತ್ತೊಂದು ರಹಸ್ಯ ಬಯಲು

ದಾವಣಗೆರೆ: ನಾಪತ್ತೆಯಾದ ನಾಲ್ಕು ದಿನಗಳ ಬಳಿಕ, ಶಾಸಕ ಎಂ.ಪಿ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಶವವಾಗಿ ಪತ್ತೆಯಾಗಿದ್ದರು. ಚಂದ್ರು ಸಾವಿನ ಬಳಿಕ ಹಲವು ರಹಸ್ಯಗಳು, ಪ್ರಕರಣಕ್ಕೆ ಹೊಸ ಹೊಸ ಟ್ವಿಸ್ಟ್ ಗಳು ಸಿಕ್ಕುತ್ತಲೇ ಇವೆ. ಇದೀಗ ಚಂದ್ರಶೇಖರ್ ಶವ ಸಿಕ್ಕಾಗ ಒಳ ಉಡುಪೇ ಇರದಿದ್ದ ಮತ್ತೊಂದು ರಹಸ್ಯ ಬಯಲಾಗಿದೆ. ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣದಲ್ಲಿ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ. ಚಂದ್ರಶೇಖರ್ ಶವ ತುಂಗಾ ನದಿಯ ಕಾಲುವೆಯಲ್ಲಿ ಪತ್ತೆಯಾದ ಬಳಿಕ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ದಾವಣಗೆರೆ …

Read More »

ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10% ಮೀಸಲಾತಿಗೆ ಸುಪ್ರಿಂ ಅಸ್ತು

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಕಲ್ಪಿಸಿರುವುದರ ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.ಹೌದು 10 ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠವು ಇಡಬ್ಲ್ಯೂಎಸ್ ಮೀಸಲಾತಿಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದೆ. ಕೇಂದ್ರ ಸರ್ಕಾರದಿಂದ ಇಡಬ್ಲ್ಯುಎಸ್ ಗೆ 10% ಮೀಸಲಾತಿ ಒದಗಿಸುವ 103ನೇ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದ್ದವು. ಜಸ್ಟೀಸ್ ಉದಯ್ …

Read More »

ನಾಳೆ ಸಂಭವಿಸಲಿದೆ ವರ್ಷದ ಕೊನೆಯ ʻಚಂದ್ರಗ್ರಹಣʼ. ಭಾರತದಲ್ಲಿ ಚಂದ್ರಗ್ರಹಣದ ಎಲ್ಲೆಲ್ಲಿ ಗೋಚರಿಸಲಿದೆ? ಇಲ್ಲಿದೆ ಮಾಹಿತಿ

ನವದೆಹಲಿ: 2022 ರ ಕೊನೆಯ ʻಸಂಪೂರ್ಣ ಚಂದ್ರಗ್ರಹಣ (Lunar Eclipse)ʼವು ನವೆಂಬರ್ 8 ರಂದು(ನಾಳೆ) ಸಂಭವಿಸಲಿದೆ. ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ಪ್ರಕಾರ, ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳವರೆಗೆ ಸಂಭವಿಸುವುದಿಲ್ಲ. ಈ ಮಾಹಿತಿಯನ್ನು ಹಂಚಿಕೊಂಡಿರುವ ನಾಸಾ ಟ್ವೀಟ್ ಮಾಡಿದ್ದು, ‘ನವೆಂಬರ್ 8, 2022 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಹಾದುಹೋಗುತ್ತಾನೆ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಇದು ಮತ್ತೆ 3 ವರ್ಷಗಳ ನಂತ್ರ ಸಂಭವಿಸುತ್ತದೆ. ಆದ್ದರಿಂದ ಇದು ನಿಮ್ಮ ಪ್ರದೇಶದಲ್ಲಿ ಗೋಚರಿಸುತ್ತದೆಯೇ ಎಂದು ಪರೀಕ್ಷಿಸಲು ಮರೆಯದಿರಿ. ಕೊನೆಯ ಬಾರಿಗೆ ಮೇ …

Read More »

ಶಾಸಕ ರೇಣುಕಾಚಾರ್ಯ ತಮ್ಮನ ಪುತ್ರ ಸಾವು ಪ್ರಕರಣ: ವಿನಯ್ ಗುರೂಜಿ ಆಶ್ರಮಕ್ಕೆ ಪೊಲೀಸರ ಭೇಟಿ

ಚಿಕ್ಕಮಗಳೂರು: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ತುಂಗಾನದಿ ಕಾಲುವೆಯಲ್ಲಿ ಕಾರಿನ ಸಹಿತ ಶವವಾಗಿ ಪತ್ತೆಯಾಗಿದ್ದರು. ಈ ಹಿನ್ನಲೆಯಲ್ಲಿ ಅವರು ವಿನಯ್ ಗುರೂಜಿ ಭೇಟಿಯಾಗೋದಕ್ಕೆ ಹೋಗುತ್ತಿರೋದಾಗಿ ಹೇಳಿ ಮನೆಯಿಂದ ತೆರಳಿ, ಶವವಾಗಿ ಪತ್ತೆಯಾಗಿದ್ದ ಕಾರಣ, ಪೊಲೀಸರು ಆಶ್ರಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಕ್ಟೋಬರ್ 31ರಂದು ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಭೇಟಿಯಾಗಿ ಬರೋದಾಗಿ ಮನೆಯಲ್ಲಿ ಹೇಳಿ ತೆರಳಿದ್ದರು. ಆದ್ರೇ ಹೀಗೆ ತೆರಳಿದ್ದಂತ ಅವರು …

Read More »

ಅರಳು ಪ್ರತಿಭೆ ಉಡುಪಿಯ ಪ್ರಣತಿ ಆಚಾರ್ಯ

ಪ್ರಣತಿ ಆಚಾರ್ಯ ಇವರು ಮೂಲತಃ ಉಡುಪಿಯವರಾದ್ದು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಮುಗಿಸಿ ಈಗ ಅಮೆರಿಕನ್ ಮಲ್ಟಿ ನ್ಯಾಷನಲ್ ಕಂಪನಿ ಡಿಎಸ್ ಸಿ ಟೆಕ್ನಾಲಜಿಯ ಬೆಂಗಳೂರು ಶಾಖೆಯಲ್ಲಿ ತಮ್ಮ ಉದ್ಯೋಗವನ್ನು ಸಲ್ಲಿಸುತ್ತಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆಯಲ್ಲಿ ತಮ್ಮ ಭರತನಾಟ್ಯ ಕಲಿಕೆಯನ್ನು ನಡೆಸುತ್ತಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್ ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಕಳೆದ 16 ವರುಷಗಳಿಂದ ವಿದ್ವಾನ್ ಮಧೂರು ಪಿ. ಬಾಲಸುಬ್ರಮಣ್ಯಂ …

Read More »

ಮಂಗಳೂರು‌ ನಿವಾಸಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ‌ ಮೃತ್ಯು

ಬೆಂಗಳೂರು: ಮಂಗಳೂರು‌ ನಿವಾಸಿ ಬೆಂಗಳೂರಿನ ಕುಣಿಗಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಬಜ್ಪೆಯ ಭಾಸ್ಕರದಾಸ್ ಎಕ್ಕಾರು (65) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು-ಮಂಗಳೂರು ರಾ.ಹೆ.ಯ ಕುಣಿಗಲ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾಸ್ಕರದಾಸ್ ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣ ಅವರನ್ನು ಬೆಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು‌ ಮೃತಪಟ್ಟಿದ್ದಾರೆ. ಇವರು‌ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗೂ ಆರೆಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣಾ ಸಮನ್ವಯ ಪರಿಯೋಜನಾ ಪ್ರಮುಖ್ ಆಗಿ ಕೆಲಸ ಮಾಡಿದ್ದರು.

Read More »

ಬ್ರಹ್ಮಾವರ: ಡೆತ್ ನೋಟ್ ಬರೆದಿಟ್ಟು ವಿವಾಹಿತೆ ನೇಣಿಗೆ ಶರಣು

ಬ್ರಹ್ಮಾವರ: ವಿವಾಹಿತ ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿನ್ಸಿ ಶೈಜು ಥೋಮಸ್ (30) ಆತ್ಮಹತ್ಯೆ ಮಾಡಿಕೊಂಡವರು. ಇವರು ವಿವಾಹಿತರಾಗಿದ್ದು ಇವರ ಗಂಡ ಉದ್ಯೋಗದ ನಿಮಿತ್ತ ದುಬೈಯಲ್ಲಿದ್ದರು. ಇವರು ಮಗಳೊಂದಿಗೆ ಗಂಡನ ಮನೆಯಾದ ಹಂದಾಡಿ ಗ್ರಾಮದ ಬೇಳೂರುಜೆಡ್ಡು ಎಂಬಲ್ಲಿ ವಾಸವಾಗಿದ್ದು, ಅತ್ತೆ, ಮಾವ ಅದೇ ಮನೆಯ ಕೆಳ ಅಂತಸ್ತಿನಲ್ಲಿ ವಾಸವಾಗಿದ್ದರು. ಬಿನ್ಸಿ ಶೈಜು ಥೋಮಸ್ ಅವರು ಅಕ್ಟೋಬರ್ 26ರಂದು ರಾತ್ರಿ ಇಲಿ ಪಾಷಾಣ ಸೇವಿಸಿ ಡೆತ್ ನೋಟ್ ಬರೆದಿಟ್ಟು ಯಾರಿಗೂ …

Read More »

43 ಪ್ರಯಾಣಿಕರಿದ್ದ ವಿಮಾನ ಕೆರೆಗೆ ಪತನ, ಸಾವು ನೋವಿನ ಆತಂಕ

ತಾಂಜನಿಯಾ: 43 ಪ್ರಯಾಣಿಕರಿದ್ದ ವಿಮಾನವೊಂದು ತಾಂಜನಿಯಾದ ವಿಕ್ಟೋರಿಯಾ ಲೇಕ್​​ನಲ್ಲಿ ಪತನಗೊಂಡಿದೆ. ಕೆಟ್ಟ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಬುಕೊಬಾದಲ್ಲಿರುವ ಕೆರೆಗೆ ಬಿದ್ದಿದೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಿಂದ 100 ಮೀಟರ್ ಅಂತರದಲ್ಲಿ ಅಪಘಾತ ಸಂಭವಿಸಿದೆ. ಬುಕೊಬಾ ವಿಮಾನ ನಿಲ್ದಾಣದ ಬಳಿ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 39 ಪ್ರಯಾಣಿಕರು ಸೇರಿ 43 ಮಂದಿ ವಿಮಾನದಲ್ಲಿ ಇದ್ದರು. ಅವರಲ್ಲಿ ಇಬ್ಬರು ಪೈಲಟ್​​ಗಳು ಹಾಗೂ ಇಬ್ಬರು ಕ್ಯಾಬಿನ್ ಸಿಬ್ಬಂದಿ ಇದ್ದರು. ವಿಮಾನವು ದಾರ್​ …

Read More »

You cannot copy content of this page.