ತಾಂಜನಿಯಾ: 43 ಪ್ರಯಾಣಿಕರಿದ್ದ ವಿಮಾನವೊಂದು ತಾಂಜನಿಯಾದ ವಿಕ್ಟೋರಿಯಾ ಲೇಕ್ನಲ್ಲಿ ಪತನಗೊಂಡಿದೆ. ಕೆಟ್ಟ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಬುಕೊಬಾದಲ್ಲಿರುವ ಕೆರೆಗೆ ಬಿದ್ದಿದೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಿಂದ 100 ಮೀಟರ್ ಅಂತರದಲ್ಲಿ ಅಪಘಾತ ಸಂಭವಿಸಿದೆ.
ಬುಕೊಬಾ ವಿಮಾನ ನಿಲ್ದಾಣದ ಬಳಿ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 39 ಪ್ರಯಾಣಿಕರು ಸೇರಿ 43 ಮಂದಿ ವಿಮಾನದಲ್ಲಿ ಇದ್ದರು. ಅವರಲ್ಲಿ ಇಬ್ಬರು ಪೈಲಟ್ಗಳು ಹಾಗೂ ಇಬ್ಬರು ಕ್ಯಾಬಿನ್ ಸಿಬ್ಬಂದಿ ಇದ್ದರು. ವಿಮಾನವು ದಾರ್ ಇಸ್ ಸಲಾಮ್ ನಿಲ್ದಾಣದಿಂದ ಬುಕೊಬಾಗೆ ಬರುತ್ತಿತ್ತು ಎನ್ನಲಾಗಿದೆ.
ಇದುವರೆಗೆ 26 ಮಂದಿಯನ್ನ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯವು ಮುಂದುವರಿದಿದೆ. ಸಾವು ನೋವಿನ ಆತಂಕ ಹೆಚ್ಚಾಗಿದೆ.