ತಾಜಾ ಸುದ್ದಿ

ಬೆಂಗಳೂರು: ದ್ವಿತೀಯ ಪಿಯುಸಿ 2023ರ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಮಾರ್ಚ್ 9ರ ಗುರುವಾರ ಆರಂಭವಾಗುವ ಪರೀಕ್ಷೆಯು ಮಾರ್ಚ್ 29ರ ತನಕ ನಡೆಯಲಿದೆ. ಮಧ್ಯದಲ್ಲಿ ಒಟ್ಟು 7 ದಿನಗಳಲ್ಲಿ ಪರೀಕ್ಷೆಗಳು ಇರುವುದಿಲ್ಲ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 36 ವಿವಿಧ ವಿಷಯಗಳು, ಭಾಷೆಗೆ ಸಂಬಂಧಿಸಿದಂತೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಮಂಡಳಿಯು ಮಾಹಿತಿ ನೀಡಿದೆ. ಪರೀಕ್ಷೆಯ ವೇಳಾಪಟ್ಟಿ: ಮಾರ್ಚ್ 9: ಕನ್ನಡ, ಅರೇಬಿಕ್ 11: ಗಣಿತ, …

Read More »

ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಂದ ಪಾಪಿ ಪತಿ : ತಾಯಿ ಬರ್ಬರ ಹತ್ಯೆ ಕಂಡು ಬೆಚ್ಚಿಬಿದ್ದ ಮಗ

ಮಂಗಳೂರು: ನಗರದ ತೆಂಕ ಎಕ್ಕಾರು ಗ್ರಾಮದಲ್ಲಿ ಕಂಠ ಪೂರ್ತಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿಯೊಂದಿಗೆ ಜಗಳವಾಡಿ ಕೊಲೆಗೈದಿರುವ ಘಟನೆ ನಡೆದಿದೆ. ದುರ್ಗೇಶ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿ ಸರಿತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಮರದ ರೀಪಿನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ತಾಯಿಯ ಹತ್ಯೆ ಕಂಡು ಮಗ ರಾಹುಲ್ ಹೆದರಿ ತನ್ನ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ. ಸ್ವತಃ ಆರೋಪಿಯೇ ಇಂದು ಬೆಳಗ್ಗೆ ತನ್ನ ಅಣ್ಣ ಮಧುಗೆ ಕರೆ ಮಾಡಿ ಸರಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ. ಮಧು ಸ್ಥಳಕ್ಕೆ ಬಂದು ನೋಡಿದಾಗ ದುರ್ಗೇಶನೇ ಸರಿತಾಳನ್ನು …

Read More »

ಬಸ್ -ಟಿಪ್ಪರ್ ಮುಖಾಮುಖಿ; ಮಹಿಳೆ ಸಾವು, 15 ಮಂದಿಗೆ ಗಾಯ

ಚಿಕ್ಕಮಗಳೂರು : ಎನ್.ಆರ್.ಪುರ ತಾಲೂಕಿನ ಮುತ್ತಿನ ಕೊಪ್ಪದಲ್ಲಿ ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ಸೋಮವಾರ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಅವಘಡದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಬಸ್ ನಲ್ಲಿದ್ದ 15 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ.   ಅವಘಡದ ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರತ್ನಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಗಾಯಳುಗಳನ್ನು ಎನ್.ಆರ್ ಪುರ ಹಾಗೂ ಶಿವಮೊಗ್ಗದ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿವವರಗಳನ್ನು ನಿರೀಕ್ಷಿಸಲಾಗುತ್ತಿದೆ.

Read More »

ಬಂಟ್ವಾಳ: ಟ್ಯಾಬ್ಲೆಟ್‌ ಸೇವಿಸಿ ʼಜೀವನ್ಮರಣ ಹೋರಾಟʼದಲ್ಲಿ ಬಾಲಕಿ

ಬಂಟ್ವಾಳ : ಅತಿಯಾಗಿ ತಲೆ ನೋವಿನ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ಶಾಲಾ ಬಾಲಕಿಯೋರ್ವಳು ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ವರದಿಯಾಗಿದೆ.   ಕುಮ್ಡೆಲು ನಿವಾಸಿಯಾಗಿರುವ ಬಾಲಕಿ ಮಂಗಳೂರು ಖಾಸಗಿ ಕಾಲೇಜಿನ ಅಪ್ರಾಪ್ತ ಬಾಲಕಿಯಾಗಿದ್ದಾಳೆ. ಬಡತನದ ಕುಟುಂಬದ ಬಾಲಕಿಯಾಗಿರುವ ಈಕೆಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಾಲಕಿ ಅತಿಯಾದ ತಲೆನೋವಿನಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಸದ್ಯ ಸ್ಪಷ್ಟವಾದ ಯಾವುದೇ ಕಾರಣ ತಿಳಿದು ಬಂದಿಲ್ಲ. ಒಂದು ಕಡೆಯಿಂದ ತಾಯಿಯ ಅನಾರೋಗ್ಯ, ಇನ್ನೊಂದು ಕಡೆಯಿಂದ ಮೈಗ್ರೇನ್ ಸಮಸ್ಯೆ ಇವೆಲ್ಲವೂಗಳ ಜೊತೆ ಅತಿಯಾದ ಬಡತನದಿಂದ ಬೇಸತ್ತ ವಿದ್ಯಾರ್ಥಿನಿ ಮಾತ್ರೆ ತೆಗೆದಕೊಂಡಿದ್ದಾಳಾ? …

Read More »

ದೆಹಲಿಯಲ್ಲಿ ಮತ್ತೊಂದು ಪ್ರಿಡ್ಜ್ ಸ್ಟೋರಿ.. ಗಂಡನನ್ನೆ ಕೊಂದು ಪ್ರಿಡ್ಜ್ ನಲ್ಲಿಟ್ಟ ಮಹಿಳೆ..!!

ನವದೆಹಲಿ : ನವದೆಹಲಿಯಲ್ಲಿ ಮತ್ತೊಂದು ಪ್ರಿಡ್ಜ್ ಮರ್ಡರ್ ಕಥೆ ನಡೆದಿದ್ದು, ಈ ಬಾರಿ ಪತ್ನಿಯೇ ಪತಿಯನ್ನು ಕೊಂದು ಪೀಸ್ ಪಿಸ್ ಮಾಡಿ ಪ್ರಿಡ್ಜ್ ನಲ್ಲಿಟ್ಟು ಬಳಿಕ ನೆರೆಹೊರೆ ಪ್ರದೇಶಗಳಲ್ಲಿ ಹೂತು ಹಾಕಿದ್ದಾಳೆ. ಇಡೀ ದೇಶವನ್ನೇ ನಡುಗಿಸಿದ ದೆಹಲಿಯ ಶ್ರದ್ಧಾ ವಾಕರ್ ಕ್ರೂರ ಹತ್ಯೆಯ ಬೆನ್ನಲ್ಲೇ ಇನ್ನೊಂದು ಅಂತಹುದೇ ಸೇಮ್ ಟು ಸೇಮ್ ಮರ್ಡರ್ ನಡೆದಿದೆ. ಅದು ದೆಹಲಿಯಲ್ಲಿ, ವರದಿಗಳ ಪ್ರಕಾರ ಜೂನ್‌ನಲ್ಲಿ ಪಾಂಡವ ನಗರದಲ್ಲಿ ಪೊಲೀಸರಿಗೆ ಮೊದಲ ಬಾರಿಗೆ ಮನುಷ್ಯನ ಕೆಲ ದೇಹದ ಭಾಗಗಳು ಸಿಕ್ಕಿದ್ದವು. ಅವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಕೊಲೆಯಾದ ವ್ಯಕ್ತಿಯ …

Read More »

ಹೆಬ್ರಿ: ಕಡಿಮೆ ಅಂಕ ಬಂದಿದ್ದಕ್ಕೆ ಪ್ರಾಂಶುಪಾಲರಿಂದ ಕಿರುಕುಳ?-ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

ಹೆಬ್ರಿ: ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಸಂಭವಿಸಿದೆ. ಹೆಬ್ರಿಯ ಎಸ್.ಆರ್ ಪಿಯು ಕಾಲೇಜಿನ ವಿದ್ಯಾರ್ಥಿನ, ಪೆರ್ಡೂರಿನ ತೃಪ್ತಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ದುರದೃಷ್ಟದ ಸಂಗತಿಯೆಂದರೆ, ಕೇವಲ 10 ಮಾರ್ಕ್ ಕಡಿಮೆ ಬಂದ ಕಾರಣಕ್ಕಾಗಿ ಈ ವಿದ್ಯಾರ್ಥಿನಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಅಂಕ ಕಡಿಮೆ ಬಂದಿದ್ದಕ್ಕೆ ಕಾಲೇಜಿನ ಪ್ರಾಂಶುಪಾಲರು ಈಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ತೃಪ್ತಿ ಇಲ್ಲಿ ಉಚಿತ ಸೀಟ್ ಪಡೆದುಕೊಂಡಿದ್ದು ಉಚಿತ ಸೀಟ್ ಪಡೆದಿದ್ದ ಮಕ್ಕಳಿಗೆ ಮಾರ್ಕ್ ಕಡಿಮೆ ಬಂದ …

Read More »

ಉಡುಪಿ: ಕರಾವಳಿ ಜನರು ‘ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತ’ರಾಗಬೇಕು : ಪೇಜಾವರ ಶ್ರೀಗಳು ಎಚ್ಚರಿಕೆ|

ಉಡುಪಿ: ಕರಾವಳಿ ಜನರು ʻಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತʼರಾಗಿರಬೇಕು ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಎಚ್ಚರಿಕೆ ಸಂದೇಶ ನೀಡಿದ್ದಾರೆ   ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಬೆನ್ನಲ್ಲೇ ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಮಾದ್ಯಮಗಳೊಂದಿಗೆ ಮಾತನಾಡಿ, ಕರಾವಳಿಯಲ್ಲಿ ನಡೆಯುತ್ತಿರುವ ಉಗ್ರಕೃತ್ಯಗಳ ಬಗ್ಗೆ ಕರಾವಳಿ ಭಾಗದ ಜನರು ಸದಾ ಜಾಗೃತರಾಗಿರಬೇಕು ಎಂದು ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕರಾವಳಿ ಜನರು ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತರಾಗಬೇಕು. …

Read More »

BREAKING NEWS ಬೆಂಗಳೂರು: ಟಿಶ್ಯು ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ

ದೇವನಹಳ್ಳಿ: ಟಿಶ್ಯು ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಮೆಸೇಜ್ ಪತ್ತೆಯಾಗಿ, ಆತಂಕ ಸೃಷ್ಟಿಸಿತ್ತು. ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಇದು‌ ಸುಳ್ಳು ಸಂದೇಶ ಎಂಬುದು ಪತ್ತೆಯಾಗಿದೆ. ಕೊಲ್ಕತ್ತಾ ನೇತಾಜಿ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ 6E 379 ವಿಮಾನದಲ್ಲಿ ಘಟನೆ ಸಂಭವಿಸಿದೆ. ನವೆಂಬರ್ 27ರ ಬೆಳಗ್ಗೆ 5-30ಕ್ಕೆ ಹೊರಟ ವಿಮಾನ ಬೆಳಗ್ಗೆ 8ಕ್ಕೆ ಬೆಂಗಳೂರಿಗೆ ಆಗಮಿಸಿತ್ತು. ವಿಮಾನದ 6ಡಿ ಸೀಟಿನ ಅಡಿ ಪತ್ತೆಯಾದ ನೀಲಿ ಬಣ್ಣದಲ್ಲಿ ಟಿಶ್ಯು ಮೇಲೆ ಬಾಂಬ್ ಬೆದರಿಕೆ ಮೆಸೇಜ್ ಕಂಡು ಬಂದಿತ್ತು. ಭದ್ರತಾ ಸಿಬ್ಬಂದಿ ತಪಾಸಣೆಯಿಂದ …

Read More »

BIGG NEWS : ಕುಕ್ಕರ್ ಬಾಂಬರ್ ಶಾರಿಕ್ ಮೊಬೈಲ್ ನಲ್ಲಿ ಜಿಹಾದಿ ವಿಡಿಯೋಗಳು ಪತ್ತೆ!

ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮೊಬೈಲ್ ನಲ್ಲಿ ಮತ್ತಷ್ಟು ಸ್ಪೋಟಕ ಜಿಹಾದಿ ವಿಡಿಯೋಗಳನ್ನು ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಮತಾಂಧ ಮನಃಸ್ಥಿತಿಯನ್ನು ಹೊಂದಿದ್ದ ಮಹಮ್ಮದ್‌ ಶಾರೀಕ್‌ನ ಮೊಬೈಲ್‌ನಲ್ಲಿ 1 ಸಾವಿರಕ್ಕೂ ಹೆಚ್ಚು ಜೆಹಾದಿ ವೀಡಿಯೋಗಳು ಪತ್ತೆಯಾಗಿವೆ.ಐಸಿಸ್‌ ಉಗ್ರರ ವಿಧ್ವಂಸಕ ಕೃತ್ಯಗಳ ವೀಡಿಯೋ ಸೇರಿದಂತೆ 55 ಜಿಬಿಗೂ ಅಧಿಕ ವೀಡಿಯೋ, ಪೊಟೋಗಳು ಆತನ ಮೊಬೈಲ್‌ ಮತ್ತು ಪೆನ್‌ಡ್ರೈವ್‌ನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬಾಂಬ್ ಸ್ಫೋಟದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಗ್ರ ಶಾರೀಕ್‍ನನ್ನೂ ಹತ್ಯೆಗೆ ಸಂಚಿನ …

Read More »

ಉಳ್ಳಾಲ ವಲಯ ನೂತನ ಕುಲಾಲ ಯುವ ವೇದಿಕೆಗೆ ಚಾಲನೆ

ಉಳ್ಳಾಲ : ಕುಲಾಲ ಯುವ ವೇದಿಕೆ ಉಳ್ಳಾಲ ವಿಧಾನ ಸಭಾಕ್ಷೇತ್ರ ಕುಲಾಲ ಯುವ ವೇದಿಕೆ ಉಳ್ಳಾಲ ವಲಯ ನೂತನ ತಂಡದ ರಚನೆ ನಿನ್ನೆ ಕೊಲ್ಯ ಕುಲಾಲ ಸಮುದಾಯ ಭವನ ಕೊಲ್ಯ ದಲ್ಲಿ ಚಾಲನೆಗೊಂಡಿತ್ತು. ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸುಕುಮಾರ್ ಬಂಟ್ವಾಳ,  ಕೊಲ್ಯ ಕುಲಾಲ ಸಂಘ ಅಧ್ಯಕ್ಷ ಭಾಸ್ಕರ್ ಕುತ್ತಾರ್, ಹಿರಿಯರಾದ ಹೊನ್ನಯ ಕುಲಾಲ್,  ಅಶೋಕ್ ಕುಳೂರ್ , ಹೇಮಚಂದ್ರ ಕೈರಂಗಳ, ಹರ್ಷ ಮುಡಿಪು,  ಪ್ರವೀಣ್ ಕುಲಾಲ್ ಮುಡಿಪು, ಪ್ರವೀಣ್ ಕೊಲ್ಯ,  ನಾರಾಯಣ ತಲಪಾಡಿ,  ರಂಜಿತ್ ಉಚ್ಚಿಲ್.ಪ್ರಕಾಶ್ ಪಿಲಿಕೂರ್, ಜಯ ಪ್ರಕಾಶ್ …

Read More »

You cannot copy content of this page.