ದೇವನಹಳ್ಳಿ: ಟಿಶ್ಯು ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಮೆಸೇಜ್ ಪತ್ತೆಯಾಗಿ, ಆತಂಕ ಸೃಷ್ಟಿಸಿತ್ತು. ಭದ್ರತಾ ಸಿಬ್ಬಂದಿ ತಪಾಸಣೆ ವೇಳೆ ಇದು ಸುಳ್ಳು ಸಂದೇಶ ಎಂಬುದು ಪತ್ತೆಯಾಗಿದೆ. ಕೊಲ್ಕತ್ತಾ ನೇತಾಜಿ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ 6E 379 ವಿಮಾನದಲ್ಲಿ ಘಟನೆ ಸಂಭವಿಸಿದೆ.
ನವೆಂಬರ್ 27ರ ಬೆಳಗ್ಗೆ 5-30ಕ್ಕೆ ಹೊರಟ ವಿಮಾನ ಬೆಳಗ್ಗೆ 8ಕ್ಕೆ ಬೆಂಗಳೂರಿಗೆ ಆಗಮಿಸಿತ್ತು. ವಿಮಾನದ 6ಡಿ ಸೀಟಿನ ಅಡಿ ಪತ್ತೆಯಾದ ನೀಲಿ ಬಣ್ಣದಲ್ಲಿ ಟಿಶ್ಯು ಮೇಲೆ ಬಾಂಬ್ ಬೆದರಿಕೆ ಮೆಸೇಜ್ ಕಂಡು ಬಂದಿತ್ತು. ಭದ್ರತಾ ಸಿಬ್ಬಂದಿ ತಪಾಸಣೆಯಿಂದ ಆತಂಕ ದೂರವಾಗಿದೆ. ಈ ಘಟನೆ ಸಂಬಂಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.