ತಾಜಾ ಸುದ್ದಿ

ಉಡುಪಿ: ಯುವತಿ ನಾಪತ್ತೆ

ಉಡುಪಿ: ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಬಡಗುಬೆಟ್ಟುವಿನ ಇಂದಿರಾನಗರದಲ್ಲಿರುವ ಅಜ್ಜಿ ಮನೆಯಿಂದ ನ.28ರಂದು ಹೋದ ನಿಖಿತಾ(19) ಎಂಬಾಕೆ ಈವರೆಗೆ ವಾಪಾಸ್‌ ಬಾರದೆ ನಾಪತ್ತೆಯಾಗಿದ್ದಾರೆ. ಸಪೂರ ಶರೀರ, ಗೋದಿ ಮೈಬಣ್ಣ ಹೊಂದಿರುವ ಈಕೆ, ಪಿಂಕ್ ಚೂಡಿ ದಾರದ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರು ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಹೊಸ ದರ ಇಂದಿನಿಂದಲೇ ಜಾರಿ ಸಾಧ್ಯತೆ

ಉಡುಪಿ: ಜನರ ತೀವ್ರ ವಿರೋಧದ ನಡುವೆಯೂ ಸದ್ದಿಲ್ಲದೇ ಹೆಜಮಾಡಿ ಟೋಲ್‌ನಲ್ಲಿ ವಾಹನಗಳಿಂದ ಹೆಚ್ಚುವರಿ ಶುಲ್ಕ ವಸೂಲಿಗೆ ಮುಂದಾಗಿರುವುದು ಜನಾಕ್ರೋಶಕ್ಕೆ ಕಾರಣ ವಾಗಿದೆ. ಸಾರ್ವಜನಿಕರು ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಜಿಲ್ಲೆಯ ಶಾಸಕರು, ಸಚಿವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳೂ ಸುರತ್ಕಲ್‌ ಟೋಲ್‌ನ ದರವನ್ನು ಹೆಜಮಾಡಿಯಲ್ಲಿ ಸಂಗ್ರಹಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಇದಾವುದಕ್ಕೂ ಟೋಲ್‌ ಗುತ್ತಿಗೆಯ ಕಂಪೆನಿಯಾಗಲೀ ಅಥವಾ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾಗಲೀ ಬೆಲೆಯೇ ಕೊಡದಿರುವುದೂ ಜನಾಕ್ರೋಶವನ್ನು ಹೆಚ್ಚಿಸಿದೆ. ಹೆಜಮಾಡಿ ಟೋಲ್‌ ದರ ಪರಿಷ್ಕರಣೆ ವಿಷಯವಾಗಿ ಡಿ. 5ರಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಸಚಿವ ನಿತಿನ್‌ …

Read More »

ಕಾರ್ಕಳ: ಐತಿಹಾಸಿಕ ಕೋಟೆಕಣಿಯಲ್ಲಿ ಹಳೆ ಕಾಲದ ಕಲ್ಲಿನ ಸಾವಿರಾರು ಪಿರಂಗಿ ಗುಂಡುಗಳು ಪತ್ತೆ

ಕಾರ್ಕಳ: ಐತಿಹಾಸಿಕ ಹಿನ್ನಲೆಯುಳ್ಳ ಕಾರ್ಕಳ ಸರಕಾರಿ ಆಸ್ಪತ್ರೆ ಬಳಿಯ ಕೋಟೆಕಣಿ ಪರಿಸರದಲ್ಲಿ ಶನಿವಾರ ಕಟ್ಟಡ ನಿರ್ಮಾಣ ಕಾಮಗಾರಿಗೆಂದು ಹಿಟಾಚಿಯಲ್ಲಿ ಮಣ್ಣು ಅಗೆಯುತ್ತಿದ್ದಾಗ ಫಿರಂಗಿ ಮಾದರಿಯ ಕಲ್ಲುಗುಂಡುಗಳು ಪತ್ತೆಯಾಗಿವೆ. ಉದ್ಯಮಿಯೊಬ್ಬರು ಖರೀದಿಸಿದ್ದ ಈ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಸುಮಾರು 15 ಅಡಿ ಆಳದಲ್ಲಿ ವೃತ್ತಾಕಾರದ ನೂರಾರು ಕಲ್ಲು ಗುಂಡುಗಳು ಪತ್ತೆಯಾಗಿವೆ. ಸ್ಥಳಕ್ಕೆ ಕಾರ್ಕಳ ಪ್ರಭಾರ ತಹಶೀಲ್ದಾರ್ ಪುರಂದರ ಎಸ್ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉತ್ಖನನದಿಂದ ಸಿಕ್ಕಿರುವ ಕಲ್ಲು ಗುಂಡುಗಳನ್ನು ಪುರಾತತ್ವ ಇಲಾಖೆಗೆ ಒಪ್ಪಿಸಲಾಗಿದೆ. ಇತಿಹಾಸಕಾರರ ಪ್ರಕಾರ …

Read More »

ಸಮಂತಾ ಬಳಿಕ ಮತ್ತೋರ್ವ ನಟಿಗೆ ಗಂಭೀರ ಆರೋಗ್ಯ ಸಮಸ್ಯೆ

ಹೈದರಾಬಾದ್: ಇತ್ತೀಚೆಗೆ ಸಮಂತಾ ತಮ್ಮ ಕಾಯಿಲೆಯ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡಿದ್ದರು. ಈಗ ಈ ಸಾಲಿಗೆ ಮತ್ತೋರ್ವ ಖ್ಯಾತ ನಟಿ ಸೇರಿದ್ದಾರೆ. ಟಾಲಿವುಡ್‌ ನಲ್ಲಿ 2006 ರಲ್ಲಿ ʼ ಮಾಯಾಜಲಂʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪೂನಂ ಕೌರ್ ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. “ಕಳೆದ ಎರಡು ವರ್ಷಗಳಿಂದ “ಫೈಬ್ರೊಮ್ಯಾಲ್ಗಿಯ”( ನಿದ್ರಾಹೀನತೆ, ನೆನಪಿನ ಶಕ್ತಿ, ಮಾನಸಿಕ ಸಮಸ್ಯೆಗಳು ಮತ್ತು ತೀವ್ರವಾದ ಸ್ನಾಯು ನೋವುಗಳು) ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ಸದ್ಯ ನಾನು ಈ ಸಂಬಂಧ ಕೇರಳದಲ್ಲಿ ಆರ್ಯವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ” …

Read More »

ಗೋಹತ್ಯೆ ಆರೋಪಿಗಳಿಗೆ 2- 7 ವರ್ಷ ಜೈಲು, 5-10 ಲಕ್ಷ ದಂಡ

ಬೆಂಗಳೂರು : ಗೋಹತ್ಯೆ ಆರೋಪಿಗಳಿಗೆ 2 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. ಇಂದು ವಿಕಾಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಭು ಚೌಹ್ಹಾಣ್ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ಬಂದ ಮೇಲೆ ಗೋವುಗಳ ಹತ್ಯೆ ಸಂಖ್ಯೆ ಇಳಿಕೆಯಾಗುತ್ತಿದೆ, ಕಾನೂನು ಉಲ್ಲಂಘಿಸಿ ಗೋಹತ್ಯೆ ಎಸಗುವ ಆರೋಪಿಗಳಿಗೆ 50 ಸಾವಿರ ರೂ.ಯಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. …

Read More »

ವಿವಾಹಪೂರ್ವ ಸೆಕ್ಸ್ ಮಾಡಿದ್ರೆ ಇನ್ಮುಂದೆ 1 ವರ್ಷ ಜೈಲು, ಹೊಸ ಕಾನೂನು!

ವಿವಾಹ ಪೂರ್ವ ಲೈಂಗಿಕ ಸಂಪರ್ಕ ಹೊಂದಿದರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೊಸ ಕ್ರಿಮಿನಲ್ ಕಾನೂನು ಜಾರಿಗೆ ತರಲು ಸಜ್ಜಾಗಿದೆ. ಇನ್ಮುಂದೆ ಪತಿ ಅಥವಾ ಪತ್ನಿ ಆಲ್ಲದೆ ಬೇರೆಯವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ, ಅದನ್ನು ವ್ಯಬಿಚಾರವೆಂದು ಪರಿಗಣಿಸಲಾಗಿತ್ತದೆ. ಎಲ್ಲಾ ವಿವಾಹೇತರ ಸಂಬಂಧಗಳೂ ಇನ್ಮುಂದೆ ನಿಷಿದ್ಧ. ವಿವಾಹ ಹೊರತುಪಡಿಸಿ ಉಳಿದ ಕಡೆ ಸೆಕ್ಸ್ ಮಾಡಲು ತೊಡಗಿದರೆ ಇನ್ನೂ ಶಿಕ್ಷೆ ಕಾದಿದೆ. ಈಗಿರುವ ಆರ್ಟಿಕಲ್ 415 ರಲ್ಲಿ ಉಲ್ಲೇಖಿಸಿದಂತೆ ಅಂತಹಾ ಸೆಕ್ಸ್ ಮಾಡುವವರಿಗೆ ಗರಿಷ್ಠ 1 ವರ್ಷ ಜೈಲು …

Read More »

“ಶ್ರಾದ್ಧಳನ್ನ 35 ತುಂಡುಗಳಾಗಿ ಕತ್ತರಿಸಿದ್ರೆ, ನಾನು ನಿನ್ನನ್ನ 70 ತುಂಡುಗಳಾಗಿ ಕತ್ತರಿಸ್ತೇನೆ” ; ಲಿವ್-ಇನ್ ಸಂಗತಿಗೆ ವ್ಯಕ್ತಿ ಬೆದರಿಕೆ

ಶ್ರದ್ಧಾ ವಾಕರ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೀರುವಾಗ ಮಹಾರಾಷ್ಟ್ರದಲ್ಲಿ ಇಂತಹ ಬೆದರಿಕೆಯ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನ ಶ್ರದ್ಧಾಳಂತೆ ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಶ್ರಾದ್ಧಳನ್ನ 35 ತುಂಡುಗಳಾಗಿ ಮಾಡಲಾಗಿತ್ತು. ನಾನು ನಿಮ್ಮನ್ನ 70 ತುಂಡುಗಳಾಗಿ ಕತ್ತರಿಸುತ್ತೇನೆ ಎಂದು ಹೇಳಿದ್ದಾನೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಿಂದೂ ಯುವಕನಂತೆ ನಟಿಸಿ, ತನ್ನನ್ನ ಪ್ರೀತಿಸುವ ನಾಟಕವಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ತನ್ನ ಮೇಲಿನ ಅತ್ಯಾಚಾರದ ನಂತ್ರ ಆತ ತನ್ನ ನಿಜ ಮತವನ್ನ ತೋರಿಸಿದ್ದಾನೆ. …

Read More »

ಮಂಗಳೂರು: ದ.ಕ ಜಿಲ್ಲೆಯಲ್ಲಿ ಡಿ. 5ರಿಂದ ಮೆದುಳು ಜ್ವರ ನಿಯಂತ್ರಣ ಲಸಿಕಾ ಅಭಿಯಾನ

ಮಂಗಳೂರು: ಮಕ್ಕಳಿಗೆ ಮಾರಣಾಂತಿಕವಾಗ ಬಲ್ಲ ಮೆದುಳು ಜ್ವರ ನಿಯಂತ್ರಣಕ್ಕೆ ದ ಕ ಜಿಲ್ಲೆಯಲ್ಲಿ ಡಿ. 5ರಿಂದ ಲಸಿಕಾ ಅಭಿಯಾನ ಆರಂಭಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ ಅಭಿಯಾನದ ಮೂಲಕ 1ರಿಂದ 15 ವರ್ಷದ ಮಕ್ಕಳಿಗೆ JE ಲಸಿಕೆಯನ್ನು ನೀಡಲಾಗುವುದು, ಹಾಗೆಯೇ ಮುಂದೆ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿಯಲ್ಲಿ 9 ಮತ್ತು 16 ತಿಂಗಳ ವಯಸ್ಸಿ ಮಕ್ಕಳಿಗೆ JE ಲಸಿಕೆಯನ್ನು ಎರಡು ಡೋಸ್‌ಗಾಗಿ ನೀಡಲಾಗುವುದು. ಜಿಲ್ಲೆಯಾದ್ಯಂತ ಜಿ.ಇ ಲಸಿಕಾ ಅಭಿಯಾನ ನಡೆಯಲಿದೆ. ಜಿಲ್ಲೆಯಲ್ಲಿ 3,514 ಲಸಿಕಾ ಕೇಂದ್ರಗಳಲ್ಲಿ ಅಭಿಯಾನ ನಡೆಯಲಿದ್ದು, 4,73,770 …

Read More »

ಬಂಟ್ವಾಳ: ಅಕ್ರಮ ಗೋಸಾಗಾಟ: ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಭಜರಂಗದಳ ಕಾರ್ಯಕರ್ತರು

ಬಂಟ್ವಾಳ: ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರವೊಂದನ್ನು ರಕ್ಷಣೆ ಮಾಡಿದ ಭಜರಂಗದಳದ ಕಾರ್ಯಕರ್ತರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳದಲ್ಲಿ ನಡೆದಿದೆ. ಭಜರಂಗದಳ ಕಲ್ಲಡ್ಕ ಪ್ರಖಂಡದ ಕಾರ್ಯಕರ್ತರು ಈ ಕಾರ್ಯಾಚರಣೆಯನ್ನು ನಡೆಸಿದ್ದು ಮ್ಯಾಕ್ಸಿಂ ಹಾಗೂ ವಿಶ್ವನಾಥ ಬಾಳ್ತಿಲ ಎಂಬವರನ್ನು ಹಿಡಿದು ಪೋಲೀಸರಿಗೊಪ್ಪಿಸಿದ್ದಾರೆ. ಇಲ್ಲಿನ ಮೆಲ್ಕಾರ್ ಸಮೀಪದ ಕಂದೂರು ಎಂಬಲ್ಲಿ ಪಿಕಪ್ ವಾಹನದಲ್ಲಿ ದನವೊಂದನ್ನು ವದೆ ಮಾಡುವ ಉದ್ದೇಶದಿಂದ ಅಪೆ ರಿಕ್ಷಾದಲ್ಲಿ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಪಡೆದ ದಾಳಿ ನಡೆಸಿ ಕಾರ್ಯಕರ್ತರು ಜಾನುವಾರುವನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಪೊಲೀಸರಿಗೆ …

Read More »

ಕಾರ್ಕಳ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಕಾರ್ಕಳ: ಎಂಪಿಎಂ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ತೃತೀಯ ಬಿಎ ವಿದ್ಯಾರ್ಥಿನಿ ನಿಟ್ಟೆ ಗ್ರಾಮದ ಕೀರ್ತನಾ (19) ಇಂದು ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Read More »

You cannot copy content of this page.