ಸಮಂತಾ ಬಳಿಕ ಮತ್ತೋರ್ವ ನಟಿಗೆ ಗಂಭೀರ ಆರೋಗ್ಯ ಸಮಸ್ಯೆ

ಹೈದರಾಬಾದ್: ಇತ್ತೀಚೆಗೆ ಸಮಂತಾ ತಮ್ಮ ಕಾಯಿಲೆಯ ಬಗ್ಗೆ ಮುಕ್ತವಾಗಿ ಮಾತನಾಡಿಕೊಂಡಿದ್ದರು. ಈಗ ಈ ಸಾಲಿಗೆ ಮತ್ತೋರ್ವ ಖ್ಯಾತ ನಟಿ ಸೇರಿದ್ದಾರೆ.

ಟಾಲಿವುಡ್‌ ನಲ್ಲಿ 2006 ರಲ್ಲಿ ʼ ಮಾಯಾಜಲಂʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪೂನಂ ಕೌರ್ ತಾವು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

“ಕಳೆದ ಎರಡು ವರ್ಷಗಳಿಂದ “ಫೈಬ್ರೊಮ್ಯಾಲ್ಗಿಯ”( ನಿದ್ರಾಹೀನತೆ, ನೆನಪಿನ ಶಕ್ತಿ, ಮಾನಸಿಕ ಸಮಸ್ಯೆಗಳು ಮತ್ತು ತೀವ್ರವಾದ ಸ್ನಾಯು ನೋವುಗಳು) ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ಸದ್ಯ ನಾನು ಈ ಸಂಬಂಧ ಕೇರಳದಲ್ಲಿ ಆರ್ಯವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ” ಎಂದು ಅಭಿಮಾನಿಗಳೊಂದಿಗೆ ವಿಚಾರವನ್ನು ಹೇಳಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸ್ವಲ್ಪ ವಿಶ್ರಾಂತಿ ಪಡೆಯೋಣ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿ ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಶುಭ ಹಾರೈಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೂನಂ ಕೌರ್‌ ವಿವಾದಿತ ಪೋಸ್ಟ್‌ ಗಳಿಂದ ಸುದ್ದಿಯಾಗಿದ್ದರು. ʼಶೌರ್ಯಂʼ, ‘ವಿನಾಯಕುಡು’, ‘ಈನಾಡು’, ‘ಗಣೇಶ್ ‍& ಗಗನಂ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Check Also

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಐದು ತಾಲೂಕುಗಳ ಶಾಲೆ ,ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನಾಳೆ ಅಂದರೆ ಜು.19ರಂದು ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ …

Leave a Reply

Your email address will not be published. Required fields are marked *

You cannot copy content of this page.