ತಾಜಾ ಸುದ್ದಿ

ಮಂಗಳೂರು: ತನಿಯಾ ಮೋಂಟ್ರಾ ಆಟೋರಿಕ್ಷಾದ ಶೋರೂಮ್ ಗೆ ಲಯನ್ ಅನಿಲ್ ದಾಸ್ ಭೇಟಿ

ಮಂಗಳೂರು:  ಜನವರಿ 1 ರಂದು ಎನ್ಎಚ್ 66 ಜಪ್ಪಿನ ಮೊಗ್ರು ಯೇನಪೊಯ ಶಾಲೆಯ ಬಳಿ ತನಿಯಾ ಮೋಂಟ್ರಾ ಹೆಸರಿನಲ್ಲಿ ಆಟೋರಿಕ್ಷಾದ ಶೋರೂಮ್ ಶುಭಾರಂಭಗೊಂಡಿತು. ಇಂದು ಲಯನ್ ಅನಿಲ್ ದಾಸ್ ರವರು ನೂತನ ಶೋ ರೂಮ್ ಗೆ ಭೇಟಿ ನೀಡಿ ಸಮಾಜದ ಯುವ ಉದ್ಯಮಿ ತನಿಯ ಮೋಟರ್ಸ್ ನ ಮಾಲಕ ರಾದ ಗೌತಮ್ ರವರಿಗೆ ಹೊಸ ಡೀಲರ್ ಮೋಂಟ್ರಾ ಆಟೋ ರಿಕ್ಷಾ ದ ಶೋ ರೂಮ್ ಗೆ ಶುಭ ಹಾರೈಸಿದರು. ಬಳಿಕ ಆಟೋರಿಕ್ಷಾವನ್ನು ಸ್ವತ: ಚಲಾಯಿಸುವ ಮೂಲಕ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು …

Read More »

ಶಾಲಾ ಪಠ್ಯದಲ್ಲಿ ‘ಸಿದ್ದೇಶ್ವರ ಶ್ರೀ’ ಜೀವನ ಚರಿತ್ರೆ ಅಳವಡಿಕೆ : ಸಿಎಂ ಬೊಮ್ಮಾಯಿ ಘೋಷಣೆ

ವಿಜಯಪುರ : ಶಾಲಾ ಪಠ್ಯದಲ್ಲಿ ‘ಸಿದ್ದೇಶ್ವರ ಶ್ರೀ’ ಜೀವನ ಚರಿತ್ರೆ ಅಳವಡಿಸಲು ರಾಜ್ಯ ಸರ್ಕಾರ ಸಿದ್ದವಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ವಿಜಯಪುರದ ಸೈನಿಕ ಶಾಲೆಯಲ್ಲಿ ಇಂದು ಸಿದ್ದೇಶ್ವರ ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನದ ಬಳಿಕ ಮಾತನಾಡಿದಂತ ಅವರು, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಂತೆ ಬದುಕಿದವರು ಮತ್ತಾರೂ ಇಲ್ಲ. ಎಲ್ಲರಿಗೂ ಮಾದರಿಯಾಗುವಂತ ನಡೆ ಅವರದ್ದಾಗಿದೆ. ಅವರು ಯಾವತ್ತೂ ಯಾವುದಕ್ಕೂ ಆಸೆ ಪಡಲಿಲ್ಲ ಎಂದರು. ಶಾಲಾ ಪಠ್ಯದಲ್ಲಿ ‘ಸಿದ್ದೇಶ್ವರ ಶ್ರೀ’ ಜೀವನ ಚರಿತ್ರೆ ಅಳವಡಿಸುವ ಕುರಿತು ಕ್ರಮ ವಹಿಸಲು ಸರ್ಕಾರ ಸಿದ್ದವಿದೆ ಎಂದು ಸಿಎಂ ಬೊಮ್ಮಾಯಿ …

Read More »

ಮಂಗಳೂರು: ತಣ್ಣೀರಬಾವಿ ಲಾಠಿ ಚಾರ್ಜ್ ಪ್ರಕರಣ – ಪೊಲೀಸ್ ಕಾನ್ಸ್‌ಟೇಬಲ್ ಸಸ್ಪೆಂಡ್

ಮಂಗಳೂರು: ತಣ್ಣೀರಬಾವಿ ಬೀಚ್‌ ಬಳಿ ಬ್ಲಾಕ್ ಆಗಿದ್ದ ಕಾರಣಕ್ಕೆ, ಅಲ್ಲಿ ಸೇರಿದ್ದ ಯುವಕರ ಮೇಲೆ ಹಾಗೂ 6 ನೇ ತರಗತಿ ವಿದ್ಯಾರ್ಥಿ ಮೇಲೆ ಲಾಠಿ ಏಟು ಬೀಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಸುನೀಲ್ ಎಂಬವರನ್ನು ಅಮಾನತುಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಣ್ಣೀರಬಾವಿ ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಸುನೀಲ್ ಅವರನ್ನು ಅಮಾನತುಗೊಳಿಸಲಾಗಿದ್ದು, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಘಟನೆ ಕುರಿತು ಯಾರಿಂದಲೂ ಪೋಷಕರು ಅಥವಾ ಬಾಲಕನಿಂದಾಗಲಿ ಯಾವುದೇ …

Read More »

ಬಿಕ್ಕಿಬಿಕ್ಕಿ ಅತ್ತ ಬಸನಗೌಡ ಪಾಟೀಲ್ ಯತ್ನಾಳ್! ಕಾರಣ ತಿಳಿಯಿರಿ…

ವಿಜಯಪುರ: ಕೇಂದ್ರದ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಧೈರ್ಯ, ನೇರ ನಡೆನುಡಿಗೆ ಹೆಸರಾದವರು. ಅವರು ಕೂಡ ಕಣ್ಣೀರು ಸುರಿಸುತ್ತಾರೆಯೇ ಎಂದು ಆಶ್ಚರ್ಯ ಪಡಬೇಡಿ. ಅಂಥದೊಂದು ಘಟನೆ ನಡೆದಿದೆ. ನಿನ್ನೆ ವಿಜಯಪುರದಲ್ಲಿ ಲಿಂಗೈಕ್ಯರಾದ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪಾರ್ಥಿವ ಶರೀರ ನೋಡಿ ಯತ್ನಾಳ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರು ಕಣ್ಣೀರು ಹಾಕಿದ ವಿಡಿಯೋ ಈಗ ವೈರಲ್ ಆಗಿದೆ. ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಗೆ ಪಾರ್ಥಿವ ಶರೀರ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸುವ ಮುನ್ನ ನಡೆದ ತಯಾರಿ ವೇಳೆಯಲ್ಲಿ ಯತ್ನಾಳ್ …

Read More »

ಮೆಸ್ಕಾಂ ಗ್ರಾಹಕರಿಗೆ ದರ ಏರಿಕೆ ಶಾಕ್| ಯೂನಿಟ್ ಗೆ 1.38 ರೂ ಹೆಚ್ಚಳಕ್ಕೆ ಪ್ರಸ್ತಾವನೆ

ಹೊಸ ವರ್ಷದ ಆರಂಭದಲ್ಲೇ ಮೆಸ್ಕಾಂ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆಯ ಶಾಕ್‌ ನೀಡಿದೆ. ಪ್ರತಿ ಯೂನಿಟ್ ಗೆ 1.38 ರೂ. ಗಳಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಮೆಸ್ಕಾಂ ಈಗಾಗಲೇ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ನೀಡಿದೆ. ಮೆಸ್ಕಾಂ ತನ್ನ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆಯ ಶಾಕ್‌ ನೀಡುತ್ತಿದ್ದು, 2023-24ನೇ ಸಾಲಿಗೆ ಘಟಕದ ಬೆಲೆಯನ್ನು 1.38 ರೂ.ಗಳಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದಿಟ್ಟಿದೆ. ಮೆಸ್ಕಾಂ ಪ್ರಕಾರ ಪ್ರತಿ ಘಟಕಕ್ಕೆ 9.93 ರೂ. ದರವಿದ್ದು, ಸದ್ಯ ಪ್ರತಿ ಯೂನಿಟ್‌ಗೆ 7.95 ರೂ.ಗಳನ್ನು ಗ್ರಾಹಕರಿಗೆ ವಿಧಿಸುತ್ತಿದೆ. …

Read More »

ಕುಂದಾಪುರ: ಕಾರು ಢಿಕ್ಕಿ – ದಂಪತಿ ಮೃತ್ಯು

ಕುಂದಾಪುರ: ಕುಂದಾಪುರದ ವಿನಾಯಕ ಚಿತ್ರ‌ಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಢಿಕ್ಕಿಯಾಗಿ ವೃದ್ಧ ದಂಪತಿ ಸಾವನ್ನಪ್ಪಿರುವ ಘಟ‌ನೆ ನಡೆದಿದೆ. ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿಗಳಾದ ಮಹಾಬಲ ಶೆಟ್ಟಿ (68) ಹಾಗೂ ಅವರ ಪತ್ನಿ ಸರೋಜಾ ಶೆಡ್ತಿ (60) ಸಾವನ್ನಪ್ಪಿದ ದಂಪತಿ. ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಕಾರು ಸಂಚರಿಸುತ್ತಿತ್ತು ಎನ್ನಲಾಗಿದ್ದು, ಕುಂದಾಪುರದ ಇವರ ಸಂಬಂಧಿಕರ ಮನೆಗೆ ಹೋಗಿ ವಾಪಸು ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಇನ್ನು ಘಟನೆಯಿಂದ ಮಹಾಬಲ ಶೆಟ್ಟಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಸರೋಜಾ …

Read More »

ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ನೋಂದಾಯಿಸಿಕೊಳ್ಳಲು ಈಗಲೂ ಇದೆ ಅವಕಾಶ!

ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆಯಡಿ ರೈತರು ಹೊಸದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ. ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೃಷಿಕರು ಆರ್ಥಿಕ ಪ್ರೋತ್ಸಾಹಧನ ಪಡೆಯಬಹುದಾಗಿದೆ. ಸದ್ಯ ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆಯಡಿ ರೈತರು ಹೊಸದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ ಯೋಜನೆಯಡಿ ನೋಂದಣಿಯಾಗದ ಜಂಟಿ ಖಾತೆದಾರರು, ದಿನಾಂಕ 1-2-2019ರ ನಂತರ ಪೌತಿ ವರ್ಗಾವಣೆ …

Read More »

ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತಸಾಗರ; ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

ವಿಜಯಪುರ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಗೆ ಗಣ್ಯರು ಮತ್ತು ಭಕ್ತರು ಸಂತಾಪ ಸೂಚಿಸಿದ್ದಾರೆ. ಸದ್ಯ ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುಖ್ಯದ್ವಾರದ ಮೂಲಕ ಆಗಮಿಸಿ 2ನೇ ಗೇಟ್‌ನಲ್ಲಿ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗಣ್ಯರು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾಗರೋಪಾದಿಯಲ್ಲಿ …

Read More »

ಹೆಂಡತಿ ಜೊತೆ ಜಗಳ: ಕೋಪದಲ್ಲಿ ತನ್ನ ಮಗುವನ್ನೇ ನೆಲಕ್ಕೆಸೆದ ಗಂಡ

ಮುಂಬೈ: ತನ್ನ ಪತ್ನಿಯೊಂದಿಗೆ ಜಗಳವಾಡಿ, ಕೋಪದ ಭರದಲ್ಲಿ ಪತಿಯೊಬ್ಬ ತನ್ನ ನವಜಾತ ಶಿಶುವನ್ನು ಆಸ್ಪತ್ರೆಯ ನೆಲಕ್ಕೆ ಕೆಳಗೆ ಎಸೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನಾಗ್ಪುರ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಅಮರಾವತಿ ಮೂಲದ ವ್ಯಕ್ತಿಯು 2020ರಲ್ಲಿ ಮದುವೆಯಾಗಿದ್ದ. ಅಂದಿನಿಂದ ಆತ ಪತ್ನಿಯ ಚಾರಿತ್ರ್ಯದ ಮೇಲೆ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದ. ಆದರೆ ಡಿ. 30ರಂದು ಆಕೆ ಮಗುವಿಗೆ ಜನ್ಮ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗ ಬಂದಿದ್ದ ವ್ಯಕ್ತಿಯು ಅಲ್ಲಿಯೂ ಜಗಳವಾಡಿದ್ದಾನೆ. ನಂತರ ಕೋಪದ ಭರದಲ್ಲಿ ನವಜಾತ ಶಿಶುವನ್ನು ನೆಲಕ್ಕೆ …

Read More »

ಕಂಬಳದ ಕೆರೆಯಲ್ಲಿ ಬಿದ್ದರೂ ಹಠ ಬಿಡದೆ ಗೆದ್ದ ಚಿನ್ನ ಗೆದ್ದ ವಂದಿತ್ ಶೆಟ್ಟಿ- ಶಹಬ್ಬಾಸ್ ಎಂದ ತುಳುನಾಡ ಜನ

ದ.ಕ ಜಿಲ್ಲೆಯ ಮೂಲ್ಕಿ ಸೀಮೆ ಅರಸು ಜೋಡುಕರೆ ಕಂಬಳದಲ್ಲಿ ಕಂಬಳ ಓಟಗಾರ ಕಂಬಳದ ಕೆರೆಯಲ್ಲಿ ಬಿದ್ದರೂ ಕೋಣದ ಹಗ್ಗ ಬಿಡದೆ ಪ್ರಥಮ ಸ್ಥಾನ ಪಡೆಯವಲ್ಲಿ ಯಶಸ್ವಿಯಾಗಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓಟಗಾರ ವಂದಿತ್ ಶೆಟ್ಟಿ ಸಾಧನೆಗೆ ಎಲ್ಲೆಡೆ ಅಭಿನಂದನೆ ಕೇಳಿಬರುತ್ತಿದೆ. ಹಗ್ಗ ಹಿರಿಯ ವಿಭಾಗದ ಫೈನಲ್ ಹಣಾಹಣಿಯಲ್ಲಿ ನಂದಳಿಕೆ ಕೋಣವನ್ನು ಓಡಿಸಿದ ಬಂಬ್ರಾಣಬೈಲು ವಂದಿತ್ ಶೆಟ್ಟಿಯವರೇ ಈ ಸಾಧನೆ ಮೆರೆದ ತುಳುವ ಕುವರ. ನಿನ್ನೆ(ಜ.1) ನಡೆದ ಮೂಲ್ಕಿ ಸೀಮೆ ಅರಸು ಜೋಡುಕೆರೆ ಕಂಬಳದಲ್ಲಿ ಈ ಘಟನೆ ನಡೆದಿದ್ದು, ಹಗ್ಗ …

Read More »

You cannot copy content of this page.