ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆಯಡಿ ರೈತರು ಹೊಸದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೃಷಿಕರು ಆರ್ಥಿಕ ಪ್ರೋತ್ಸಾಹಧನ ಪಡೆಯಬಹುದಾಗಿದೆ.
ಸದ್ಯ ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆಯಡಿ ರೈತರು ಹೊಸದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ
ಯೋಜನೆಯಡಿ ನೋಂದಣಿಯಾಗದ ಜಂಟಿ ಖಾತೆದಾರರು, ದಿನಾಂಕ 1-2-2019ರ ನಂತರ ಪೌತಿ ವರ್ಗಾವಣೆ ಕಾರಣಗಳಿಂದಾಗಿ ಖಾತೆ ವರ್ಗಾವಣೆಯಾಗದೇ ಇರುವ ಫಲಾನುಭವಿಗಳು ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹಾಗೂ ಒಂದೇ ಕುಟುಂಬದ ಅಂದರೆ ಗಂಡ-ಹೆಂಡತಿ ಹಾಗೂ ಭೂ-ಹಿಡುವಳಿ ಹೊಂದಿರುವ ವಯಸ್ಕ ಮಕ್ಕಳು ಈ ಯೋಜನೆಯಡಿ ಹೊಸದಾಗಿ ನೋಂದಾಯಿಸಿಕೊಳ್ಳಬಹುದಾಗಿದೆ
ಅರ್ಹ ಫಲಾನುಭವಿಗಳು ಅವಶ್ಯಕ ದಾಖಲಾತಿಗಳಾದ ಆಧಾರ್ ಕಾರ್ಡ್, ಪಹಣಿ, ಪಾಸ್ಬುಕ್ ಪ್ರತಿ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ
ಅಥವಾ ನಿಮ್ಮ ಸಮೀಪದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕುಗಳ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಲು ಕೋರಲಾಗಿದೆ