ತಾಜಾ ಸುದ್ದಿ

ಸಂತ ಜೆರೊಸಾ ಶಾಲೆ ಘಟನೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿಗೆ ವಿದೇಶದಿಂದ ಕೊಲೆ ಬೆದರಿಕೆ ಕರೆ

ಮಂಗಳೂರು: ಸಂತ ಜೆರೊಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಧರ್ಮ ಅವಹೇಳನದ ಪಾಠ ಆರೋಪ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಿಕ್ಷಕಿಯನ್ನೇ ವಜಾಗೊಳಿಸಲಾಗಿದೆ. ತೊಕ್ಕೊಟ್ಟುವಿನ ಹೋಲಿ ಏಂಜಲ್ ಶಾಲೆಯಲ್ಲಿ  ಪ್ರಾಥಮಿಕ ತರಗತಿ ಶಿಕ್ಷಕಿಯಾಗಿರುವ ಕವಿತಾ ಅವರು ಮಗಳು ಸಂತ ಜೆರೊಸಾ ಶಾಲೆಯ ವಿದ್ಯಾರ್ಥಿನಿ. ಹೀಗಾಗಿ ಮಗಳ ಶಾಲೆಯಲ್ಲಿ ಕೇಳಿ ಬಂದ ಆರೋಪದ ಬಗ್ಗೆ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಈ ಬೆನ್ನಲ್ಲೇ ಇದೀಗ ಅವರಿಗೆ ಬೆದರಿಕೆ ಕರೆಗಳು ಆರಂಭವಾಗಿದೆ. ಜೊತೆಗೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲೆಯಿಂದಲೂ ಗೇಟ್ ಪಾಸ್ ನಿಡಲಾಗಿದೆ. ಘಟನೆಯ ದಿನ ಅಂದರೆ ಫೆ.10 ರಂದು ಶಿಕ್ಷಕಿ …

Read More »

ಮೂಡುಬಿದಿರೆ: ದನದ ಮಾಂಸ ಮಾರಾಟ – ಓರ್ವನ ಬಂಧನ

ಮೂಡುಬಿದಿರೆ: ಕೋಲ್ಡ್ ಸ್ಟೋರೇಜ್ ನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸಿದ್ಧಕಟ್ಟೆಯ ಸಂಘಬೆಟ್ಟು ನಿವಾಸಿ ಇಸ್ಮಾಯಿಲ್ ಬಂಧಿತ. ಈತ ಮೂಡುಬಿದಿರೆಯ ತಾಜ್ ಕೋಲ್ಡ್ ಸ್ಟೋರೇಜ್ ನಲ್ಲಿ ದನದ ಮಾಂಸವನ್ನು ಶೇಖರಿಸಿಟ್ಟು ಮಾರಾಟ ಮಾಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ದಾಳಿ ವೇಳೆ ಕೋಲ್ಡ್ ಸ್ಟೋರೆಜ್ ನಲ್ಲಿ 10 ಕೆ.ಜಿಯಷ್ಟು ದನದ ಮಾಂಸ ದೊರೆತಿದೆ. ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ …

Read More »

ಬೆಳ್ತಂಗಡಿ: ಆ್ಯಸಿಡ್ ದಾಳಿ ಪ್ರಕರಣ – 29 ವರ್ಷದ ಬಳಿಕ ಆರೋಪಿ ದೋಷಮುಕ್ತ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 1995ರಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿದೆ. 27 ಸಪ್ಟಂಬರ್ 1995 ರಂದು ಉಜಿರೆ ಗ್ರಾಮದ ನಿವಾಸಿ ಮಂಜುನಾಥ್ ಪ್ರಭು ಅವರ ಮಗ ಗಣೇಶ್ ಪ್ರಭು ಎಂಬುವವರ ಮಾಲಿಕತ್ವಕ್ಕೆ ಸೇರಿದ ಬಾಡಿಗೆ ಮನೆಯೊಂದರಲ್ಲಿ ಪ್ರಕರಣ ಆರೋಪಿ ಶಂಕರ ಗೌಡ ಯಾನೇ ವೀರಪ್ಪ ಗೌಡ ಬಾಡಿಗೆ ನೆಲೆಯಲ್ಲಿ ವಾಸ್ತವ್ಯ ಹೊಂದಿದ್ದು, ಆರೋಪಿತನ ಪತ್ನಿ ಗಣೇಶ್ ಪ್ರಭುವಿನ ಮನೆಯಲ್ಲಿ ಮನೆಗೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ನಂತರ ಆಕೆಯನ್ನು ಮನೆಕೆಲಸದಿಂದ ತೆಗೆದುಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಕೆಲಸದಿಂದ ಕಿತ್ತುಹಾಕಿದ ಪೂರ್ವದ್ವೇಷದ ಕಾರಣಕ್ಕಾಗಿ …

Read More »

ಮಲ್ಪೆ ಬೀಚ್‌: ಮುಳುಗುತ್ತಿದ್ದ ಇಬ್ಬರ ರಕ್ಷಣೆ

ಉಡುಪಿ:ಮಲ್ಪೆ ಸಮೀಪದ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ನೀರಿಗೆ ಇಳಿದು ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಮೀನುಗಾರಿಕಾ ದೋಣಿಯ ಸಿಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದವರೆನ್ನಲಾದ ಇಬ್ಬರು ಯುವಕರು ಮತ್ತು ಮೂವರು ಯುವತಿಯರು ಸೇರಿದಂತೆ ಒಟ್ಟು 5 ಮಂದಿ ನೀರಿಗೆ ಇಳಿದಿದ್ದು, ಇಬ್ಬರು ಯುವಕರು ನೀರಿನಲ್ಲಿ ಈಜಲು ಮುಂದಾಗಿದ್ದರು. ಈಜುತ್ತಾ ಮುಂದೆ ಹೋದ ಅವರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಇನ್ನು ಈ ಸಂದರ್ಭದಲ್ಲಿ ಅವರ ಬೊಬ್ಬೆ ಕೇಳಿ ಸ್ಥಳೀಯ ಸೀಬರ್ಡ್‌ ಮತ್ತು ಡೆಲ್ಟಾ ಬೋಟ್‌ ಹಾಗೂ …

Read More »

ಜೆರೋಸಾ ಶಾಲಾ ಪ್ರಕರಣ: ಹಿಂದೂ ಸಂಘಟನೆಯ ಪ್ರಮುಖರ ಮೇಲೆ FIR ಖಂಡಿಸಿ VHP ಪ್ರತಿಭಟನೆ

ಮಂಗಳೂರು ನಗರದ ಜೆರೋಸಾ ಸ್ಕೂಲ್ ವಿವಾದ ದಿನದಿಂದ ವಿಕೋಪಕ್ಕೆ ಹೋಗುತ್ತಿದ್ದು ಮಧ್ಯ ಪ್ರವೇಶ ಮಾಡಿದ್ದ ಬಿಜೆಪಿ ಶಾಸಕರು, ಹಿಂದೂ ಸಂಘಟನೆಯ ಪ್ರಮುಖರ ಮೇಲೆ ಜಿಲ್ಲಾಡಳಿತ FIR ದಾಖಲು ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಮಂಗಳೂರು ನಗರದಲ್ಲಿ ಡಿಡೀರ್ ರಸ್ತೆ ತಡೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಕೂಡಲೇ ಜಾಗೃತರಾದ ಪೊಲೀಸರು ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಜೆರೋಸಾ ಶಾಲೆಯ ಘಟನೆ ಹಿನ್ನೆಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ, ಭರತ್ ಶೆ್ಟ್ಟಿ, ವಿಹೆಚ್‌ಪಿ ಮುಖಂಡ ಶರಣ್ ಪಂಪ್ವೆಲ್, …

Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ- ಇಬ್ಬರು ಮೃತ್ಯು,,!

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಾಞಂಗಾಡ್‌ ನ ಪೆರಿಯದಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ತಾಯನ್ನೂರಿನ ರಾಜೇಶ್ (35) ಮತ್ತು ರಘುನಾಥ್ (52) ಎಂದು ಗುರುತಿಸಲಾಗಿದೆ. ರಾಹುಲ್ ಮತ್ತು ರಾಜೇಶ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೇಕಲ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಅಂಕೋಲಾ ನಾಡಿನ ಖ್ಯಾತ ಸಾಹಿತಿ, ಪ್ರಕಾಶಕ, ನಾಟಕಕಾರ ವಿಷ್ಣು ನಾಯ್ಕ ನಿಧನ

ಕಾರವಾರ : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಾಹಿತಿ, ಪ್ರಕಾಶಕ, ನಾಟಕಕಾರ ಅಂಕೋಲಾದ ವಿಷ್ಣು ನಾಯ್ಕ (79) ಶನಿವಾರ ನಿಧನ ಹೊಂದಿದರು. ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾರವಾರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಅಂಬಾರ ಕೊಡ್ಲದ ಅವರ ಪರಿಮಳದ ಮನೆಯಂಗಳ ದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಜನರು ಅಂತಿಮ ದರ್ಶನ ಪಡೆದರು.ಚುಟುಕು ಬ್ರಹ್ಮ ದಿನಕರ ದೇಸಾಯಿ ಗರಡಿಯಲ್ಲಿ ಪಳಗಿದ ವಿಷ್ಣು ನಾಯ್ಕ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು.ಸಾಹಿತ್ಯ ಕೃಷಿಗೆ ಸೀಮಿತವಾಗಿರದೇ ಸ್ವತಃ ನಾಟಕಗಳನ್ನು ಬರೆದು ಅಭಿನಯಿಸಿದ್ದರು. …

Read More »

ಹರೇಕಳದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ತೆರವಿಗೆ ನೋಟೀಸ್ – ತೆರವು ಮಾಡಲ್ಲ ಎಂದ ಡಿವೈಎಫ್ಐ

ಉಳ್ಳಾಲ : ಪಾವೂರು ಗ್ರಾಮದ ಹರೇಕಳದಲ್ಲಿರುವ ಡಿವೈಎಫ್ಐ ಕಚೇರಿ ಬಳಿ ಅಳವಡಿಸಿರುವ ಟಿಪ್ಪು ಸುಲ್ತಾನ್ ಕಟೌಟ್ ಅನ್ನು ತೆರವಿಗೆ ಕೊಣಾಜೆ ಠಾಣಾ ಪೊಲೀಸರು ಡಿವೈಎಫ್ಐಗೆ ನೋಟೀಸ್ ಜಾರಿಗೊಳಿಸಿದ್ದಾರೆ. ಡಿವೈಎಫ್ಐನಿಂದ ತೊಕ್ಕೊಟ್ಟಿನ ಯುನಿಟಿ ಗ್ರ್ಯಾಂಡ್ ನಲ್ಲಿ ನಡೆಯುವ 12ನೇ ರಾಜ್ಯ ಸಮ್ಮೇಳನದ ಅಂಗವಾಗಿ ಕಾರ್ಡ್ ಬೋರ್ಡ್ ನಿಂದ ನಿರ್ಮಿಸಲಾದ ಆರು ಅಡಿ ಉದ್ದದ ಟಿಪ್ಪುವಿನ ಕಟೌಟ್ ಅನ್ನು ಅಳವಡಿಸಲಾಗಿತ್ತು. ಆದರೆ, ಈ ಕಟೌಟ್ ಅಳವಡಿಸಲು ಅನುಮತಿ ಪಡೆದಿಲ್ಲವೆಂದು ಕೊಣಾಜೆ ಪೊಲೀಸರು ತೆರವು ಮಾಡಲು ನೋಟೀಸ್ ಜಾರಿಗೊಳಿಸಿದೆ. ಟಿಪ್ಪು ಸುಲ್ತಾನ್ ಕಟೌಟ್, ಬ್ಯಾನರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ …

Read More »

ಧರ್ಮಸ್ಥಳ: ಒಂದೇ ದಿನ 3 ಬೈಕ್ ಕಳವು

ಬೆಳ್ತಂಗಡಿ: ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಬೈಕ್‌ಗಳು ಕಳ್ಳತನವಾದ ಘಟನೆ ನಡೆದಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಫೆ. 14ರಂದು ರಾತ್ರಿಯ ವೇಳೆ ಮೂರೂ ಬೈಕ್‌ಗಳು ಕಳ್ಳತನವಾಗಿವೆ. ಧರ್ಮಸ್ಥಳ ಗ್ರಾಮದ ಮಲ್ಲರ್ಮ ಮಾಡಿ ನಿವಾಸಿ ಬೇಬಿ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್’ ಅನ್ನು ರಾತ್ರಿಯ ವೇಳೆ ಕಳ್ಳರು ಅಪಹರಿಸಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಧರ್ಮಸ್ಥಳ ಗ್ರಾಮದ ಗಡಿಯಲ್ಲಿರುವ ಕಲ್ಮಂಜ ಗ್ರಾಮದ ಮದ್ಮಲ್ ಕಟ್ಟೆ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದವರು ಮನೆಯ ಸಮೀಪ ಬೈಕ್ ಅನ್ನು …

Read More »

ಕುಂದಾಪುರ: ಭೀಕರ ಅಪಘಾತ – ಕೆನರಾ ಬ್ಯಾಂಕ್ ಮ್ಯಾನೇಜರ್ ಸಾವು !

ಕುಂದಾಪುರ: ಭೀಕರ ಅಪಘಾತ – ಕೆನರಾ ಬ್ಯಾಂಕ್ ಮ್ಯಾನೇಜರ್ ಸಾವು ! ಕುಂದಾಪುರ: ಬೈಕ್ ಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ,ಬ್ಯಾಂಕ್ ಮ್ಯಾನೇಜರಗ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೊಸಾಡು ಗ್ರಾಮದ ಅರಾಟೆ ಬಳಿ ಸಂಭವಿಸಿದೆ. ಮೃತರು ಮಹಾರಾಷ್ಟ್ರದ ನವಿ ಮುಂಬೈ ನಿವಾಸಿ ರಾಹುಲ್ ಬಾಲಕೃಷ್ಣ ರಂಕಂಬೆ ಎಂದು ಗುರುತಿಸಲಾಗಿದೆ. ಇವರು ಮರವಂತೆಯ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಮರವಂತೆಯ ಬ್ಯಾಂಕಿನಲ್ಲಿ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ಕುಂದಾಪುರದ ಮನೆ ಕಡೆಗೆ …

Read More »

You cannot copy content of this page.