ದೇಶ

LPG ಸಿಲಿಂಡರ್​ ಬೆಲೆಯಲ್ಲಿ ಭಾರೀ ಇಳಿಕೆ : ಮಹಿಳಾ ದಿನದಂದೆ ಮಾಹಿತಿ ಕೊಟ್ಟ ಪ್ರಧಾನಿ

ನವದೆಹಲಿ : ಮಹಿಳಾ ದಿನಾಚರಣೆ ಹಾಗೂ ಶಿವರಾತ್ರಿ ದಿನದಂದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದೆ. ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಬರೊಬ್ಬರಿ 100 ರೂಪಾಯಿಗಳನ್ನು ಕಡಿಮೆ ಮಾಡಲಾಗಿದೆ ಎಂದು ಸ್ವತಹ ಪ್ರಧಾನಿ ಮೋದಿಯವರು ಟ್ವಿಟ್ ಮಾಡಿದ್ದಾರೆ. ಎಲ್​​ಪಿಜಿ ಹೆಚ್ಚು ಹೆಚ್ಚಾಗಿ ಕೈಗೆಟುಕುವಂತೆ ಮಾಡುವ ಮೂಲಕ ಮಹಿಳೆಯರ ಯೋಗಕ್ಷೇಮ, ಕುಟುಂಬದ ಆರೋಗ್ಯಕರ ವಾತಾವರಣ ಕಾಪಾಡಲು ನಾವು ಮುಂದಾಗಿದ್ದೇವೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಸರಳವಾಗಿ ಬದುಕುವ ಖಾತ್ರಿಪಡಿಸುವುದು ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ಪ್ರಧಾನಿ ಮೋದಿ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

Read More »

ಒಂದನೇ ತರಗತಿಗೆ ದಾಖಲಾಗಲು 6ವರ್ಷ ಪೂರ್ತಿಗೊಳ್ಳುವುದು‌ ಕಡ್ಡಾಯ|

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ, 2009 ಕ್ಕೆ ಅನುಗುಣವಾಗಿ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸನ್ನು ಆರು ವರ್ಷಗಳಾಗಿ ನಿಗದಿಪಡಿಸುವಂತೆ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ನೀಡಿದೆ.ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಬರೆದ ಪತ್ರದಲ್ಲಿ, ಶಿಕ್ಷಣ ಸಚಿವಾಲಯದ (ಎಂಒಇ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2020 ರಲ್ಲಿ ಎನ್‌ಇಪಿ ಪ್ರಾರಂಭವಾದಾಗಿನಿಂದ ಹಲವಾರು ಬಾರಿ ಹೊರಡಿಸಿದ ನಿರ್ದೇಶನಗಳನ್ನು ಪುನರುಚ್ಚರಿಸಿದೆ. ಕಳೆದ ವರ್ಷವೂ ಇದೇ …

Read More »

ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ..!

ಕಾಸರಗೋಡು: ಒಂದೇ ಕುಟುಂಬದ ಮೂವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಞಿಂಗಾಡ್ ನಲ್ಲಿ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸೂರ್ಯ ಪ್ರಕಾಶ್ (55), ಪತ್ನಿ ಗೀತಾ (48) ಮತ್ತು ಸೂರ್ಯ ಪ್ರಕಾಶ್ ರವರ ತಾಯಿ ಲೀಲಾ (90) ಮೃತ ಪಟ್ಟವರು. ಸೂರ್ಯ ಪ್ರಕಾಶ್ ಕಾಞಿಂಗಾಡ್ ನಲ್ಲಿ ವಾಚ್ ವರ್ಕ್ಸ್ ಮಳಿಗೆ ನಡೆಸುತ್ತಿದ್ದರು. ರೈಲ್ವೆ ನಿಲ್ದಾಣ ಪರಿಸರದ ಅವಿಕ್ಕರೆಯಲ್ಲಿರುವ ವಸತಿ ಗೃಹದಲ್ಲಿ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸೂರ್ಯ ಪ್ರಕಾಶ್ ರವರ ಪುತ್ರ ಅಜಯ್ ಉದ್ಯೋಗ ನಿಮಿತ್ತ ಎರ್ನಾಕುಲಂಗೆ ತೆರಳಿದ್ದರು. …

Read More »

ಬಾಯ್​ಫ್ರೆಂಡ್​​ ಜೊತೆ ಮದ್ಯ ಸೇವಿಸಿದ ಯುವತಿ ಬೆಳಗ್ಗೆ ಏಳಲೇ ಇಲ್ಲ – ಆ ರಾತ್ರಿ ನಡೆದಿದ್ದಾದರೂ ಏನು?

ತಿರುವನಂತಪುರಂ: ತನ್ನ ಬಾಯ್​ಫ್ರೆಂಡ್​ ಜೊತೆ ರಾತ್ರಿ ಮದ್ಯ ಸೇವಿಸಿದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಈ ಪ್ರಕರಣದ ಸಂಬಂಧ ಯುವತಿಯ ಗೆಳೆಯನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನೀಲಗಿರಿ ಜಿಲ್ಲೆಯ ಊಟಿಯ ಪಿಂಕರ್ ಪೋಸ್ಟ್ ಮೂಲದ ರಿತಿ ಏಂಜೆಲ್ (19) ಮೃತ ಯುವತಿ. ಊಟಿಯ ಬಾಂಬೆ ಕ್ಯಾಸಲ್ ನಿವಾಸಿ ಆಕಾಶ್ (20) ಬಂಧಿತ ಯುವಕ. ಇವರಿಬ್ಬರು 10ನೇ ತರಗತಿಯಲ್ಲಿ ಒಟ್ಟಿಗೆ ಓದಿದ್ದರಿಂದ ಪರಿಚಯವಾಗಿ ಪ್ರೀತಿಯಲ್ಲಿದ್ದರು. ರಿತಿ ಏಂಜೆಲ್ ಕೊಯಮತ್ತೂರಿನ ಖಾಸಗಿ ನರ್ಸಿಂಗ್ ಕಾಲೇಜಿಗೆ ಮತ್ತು ಆಕಾಶ್ ನೀಲಗಿರಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿಗೆ …

Read More »

Good News : ಕನ್ನಡದಲ್ಲೇ ಕೇಂದ್ರ ಸಶಸ್ತ್ರ ಮೀಸಲು ಪಡೆ ಪರೀಕ್ಷೆಗೆ ಅವಕಾಶ; ಗೃಹ ಸಚಿವಾಲಯದಿಂದ ಅಧಿಕೃತ ಘೋಷಣೆ

ನವದೆಹಲಿ : ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್ ಒಳಗೊಂಡ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿ ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಆಯೋಜಿಸಲಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಹೊರತಾಗಿ ಈ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಫೆ.10ರಿಂದಲೇ ಪರೀಕ್ಷೆ ಆರಂಭವಾಗಿವೆ. ಮಾ.7ರವರೆಗೆ ದೇಶವ್ಯಾಪಿ 128 ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 48 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರಾದೇಶಿಕ ಭಾಷೆಗಳಲ್ಲೂ ನೇಮಕಾತಿ ಪರೀಕ್ಷೆ ನಡೆಸುವ ಸಂಬಂಧ 2023ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂ ಡಿತ್ತು. ಆ …

Read More »

ಸೇನೆ ಸೇರಬಯಸುವವರಿಗೆ ಗುಡ್ ನ್ಯೂಸ್ : ‘ಅಗ್ನಿವೀರ್’ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ 2024 ರ ಅಧಿಸೂಚನೆಯನ್ನು (ಫೆಬ್ರವರಿ 8) ಇಂದು ಬಿಡುಗಡೆ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಗ್ನಿವೀರ್ 2024 ಅಧಿಸೂಚನೆ ಪಿಡಿಎಫ್ ಅನ್ನು joinindianarmy.nic.in ಅಧಿಕೃತ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಬಹುದು.   ಅಗ್ನಿವೀರ್ – ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್ ಅಥವಾ ಸ್ಟೋರ್ ಕೀಪರ್ ಮತ್ತು ಟ್ರೇಡ್ಸ್ಮನ್ (10 ಅಥವಾ 8 ನೇ ತರಗತಿ) ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುತ್ತದೆ. ಭಾರತೀಯ ಸೇನೆಯ ಅಗ್ನಿವೀರ್ ಅಪ್ಲಿಕೇಶನ್ ವಿಂಡೋ ಫೆಬ್ರವರಿ 8 ರಿಂದ ಮಾರ್ಚ್ 21, 2024 ರವರೆಗೆ …

Read More »

Job Alert: ‘ಭಾರತೀಯ ಸೇನೆ’ ಸೇರೋ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: ‘381 ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ಸೇನೆಯಲ್ಲಿ ಖಾಲಿ ಇರುವಂತ 381 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಮೂಲಕ ಭಾರತೀಯ ಸೇನೆ ಸೇರೋ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಹೌದು ಭಾರತೀಯ ಸೇನೆಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ರಾಷ್ಟ್ರ ಸೇವೆಗೆ ಸಿದ್ಧವಿರುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ತಿಳಿಸಿದೆ. ವಯೋಮಿತಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಟ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಟೆಕ್ ಮತ್ತು ನಾನ್ ಟೆಕ್ …

Read More »

ಹಿಂದೂಗಳನ್ನು ನಾಯಿಗಳಿಗೆ ಹೋಲಿಸಿದ್ದ ಮುಸ್ಲಿಂ ಬೋಧಕ ಅಝಾರಿ ಬಂಧನ

ಮುಂಬೈ : ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಮುಂಬೈನಲ್ಲಿ ಇಸ್ಲಾಮಿಕ್‌ ಬೋಧಕ ಮುಫ್ತಿ ಸಲ್ಮಾನ್‌ ಅಝಾರಿ ಎಂಬುವರನ್ನು ಬಂಧಿಸಿದ್ದಾರೆ. ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂಗಳನ್ನು ನಾಯಿಗೆ ಹೋಲಿಸಿದ ಬಳಿಕ ವಿವಾದ ಉಂಟಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್‌ ಅಧಿಕಾರಿಗಳು ಮುಫ್ತಿ ಸಲ್ಮಾನ್‌ ಅಝಾರಿ ಅವರನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ಭಾನುವಾರ ಗುಜರಾತ್‌ ಎಟಿಎಸ್‌ ಅಧಿಕಾರಿಗಳು ಮುಫ್ತಿ ಸಲ್ಮಾನ್‌ ಅಝಾರಿಯನ್ನು ಬಂಧಿಸಿ, ಘಟ್ಕೋಪರ್‌ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಗುಜರಾತ್‌ನಲ್ಲಿ ಕೆಲ ದಿನಗಳ ಹಿಂದೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಅಝಾರಿ, …

Read More »

ನಾನು ಸತ್ತಿಲ್ಲ..! ಜೀವಂತವಾಗಿದ್ದೇನೆ ಬಾಲಿವುಡ್ ನಟಿ ಪೂನಂ ಪಾಂಡೆ ಸ್ಪಷ್ಟನೆ

ಬಾಲಿವುಡ್‌ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅವರ ಅಭಿಮಾನಿಗಳ ಶಾಕ್ ಕೊಟ್ಟಿದ್ದಂತೂ ನಿಜ. ಆದರೆ ನಟಿಯ ಸತ್ತಿಲ್ಲ, ಬದುಕಿದ್ದಾಳೆ. ಹೌದು. ಈ ವಿಚಾರವನ್ನು ಸ್ವತಃ ಪೂನಂ ಪಾಂಡೆ ಹೇಳಿಕೊಂಡಿದ್ದಾರೆ. ತಾನು ಅಭಿಮಾನಿಗಳಿ ಶಾಕ್ ಕೊಡಲು ಹೀಗೆ ಮಾಡಿದೆ ನನ್ನನ್ನು ಕ್ಷಮಿಸಿ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕ್ಷಮೆ ಕೇಳಿದ್ದಾಳೆ. ವಿಡಿಯೋದಲ್ಲಿ ನಟಿ ಹೇಳಿದ್ದೇನು?: ‘ಕ್ಷಮಿಸಿ, ನನ್ನ ಸಾವಿನಿಂದ ಬೇಸರದಲ್ಲಿದ್ದವರಿಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಹಾಗೆ ಮಾಡಿದ್ದು ನಿಮಗೆಲ್ಲರಿಗೂ ಶಾಕ್ ಕೊಡುವುದಕ್ಕೆ ಮಾತ್ರ. ನಾನು ನನ್ನ ಸಾವನ್ನು ನಾನು …

Read More »

ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ..!

 ರೂಪದರ್ಶಿ ಮತ್ತು ನಟಿ ಪೂನಂ ಪಾಂಡೆ ಫೆಬ್ರವರಿ 1 ರಂದು ಗರ್ಭಕಂಠದ ಕ್ಯಾನ್ಸರ್ನೊಂದಿಗೆ ಹೋರಾಡಿದ ನಂತರ ನಿಧನರಾದರು ಎಂದು ಅವರ ತಂಡ ಶುಕ್ರವಾರ ಬೆಳಿಗ್ಗೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಪೂನಂ ಗುರುವಾರ ರಾತ್ರಿ ನಿಧನರಾದರು ಎಂದು ಅವರ ತಂಡ ಫ್ರೀ ಪ್ರೆಸ್ ಜರ್ನಲ್ ಗೆ ತಿಳಿಸಿದೆ. ಅವರು ಕೊನೆಯುಸಿರೆಳೆದಾಗ ಅವರು ತಮ್ಮ ಹುಟ್ಟೂರು ಕಾನ್ಪುರದಲ್ಲಿದ್ದರು. ಅವರ ಅಂತ್ಯಕ್ರಿಯೆಯ ವಿವರಗಳನ್ನು ನಿರೀಕ್ಷಿಸಲಾಗಿದೆ. “ಈ ಬೆಳಿಗ್ಗೆ ನಮಗೆ ಕಠಿಣವಾಗಿದೆ. ಗರ್ಭಕಂಠದ ಕ್ಯಾನ್ಸರ್ನಿಂದ ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ತುಂಬಾ ದುಃಖವಾಗಿದೆ. ಅವಳೊಂದಿಗೆ ಸಂಪರ್ಕಕ್ಕೆ …

Read More »

You cannot copy content of this page.