ದೇಶ

BREAKING : ಕಾಂಗ್ರೆಸ್ ಗೆ ಮಾಜಿ ಸಿಎಂ ‘ಜಗದೀಶ್ ಶೆಟ್ಟರ್’ ಗುಡ್ ಬೈ : ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ನವದೆಹಲಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಭೂಪೇಂದ್ರ ಯಾದವ್ ಸಮಕ್ಷಮದಲ್ಲಿ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇತ್ತ ಕಾಂಗ್ರೆಸ್‌ಗೆ ಕೈ ಕೊಡುವುದಿಲ್ಲ ಎಂದು ಪ್ರಮಾಣ ಮಾಡಿ ಕಾಂಗ್ರೆಸ್‌ ಸೇರಿದ ಇದೇ ಶೆಟ್ಟರ್ ಇ ಮೇಲ್‌ ಮೂಲಕ ಕಾಂಗ್ರೆಸ್‌ MLC ಸ್ಥಾನಕ್ಕೆ ರಾಜೀನಾಮೆ ಕೊಟ್ಟು ‘ಕೈ’ ತೊರೆದಿದ್ದಾರೆ. ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿರುವ …

Read More »

ಮುಂಬೈ: ದಯಾ ನಾಯಕ್ ನೇತೃತ್ವದ ತಂಡದಿಂದ ಭೂಗತ ಪಾತಕಿ ದಾವೂದ್ ಸಹಚರನ ಪಿಸ್ತೂಲ್ ಸಹಿತ ಬಂಧನ

ಮುಂಬೈ: ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಬಾಂದ್ರಾ  ಕ್ರೈಮ್ ಬ್ರಾಂಚ್ ತಂಡದ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ತಂಡ ಕುಖ್ಯಾತ ಭೂಗತ ಪಾತಕಿ ದಾವೂದ್ ನ ಸಹಚರನನ್ನು ಪಿಸ್ತೂಲ್ ಸಹಿತ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ ದಾವೂದ್ ಸಹಚರ ಸಚಿನ್ ಗಜಾನನ ಶೇಟೆ ಎಂದು ಗುರುತಿಸಲಾಗಿದೆ. ಆತನ ಬಳಿ ಇದ್ದ ಪಿಸ್ತೂಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕ್ರೈಮ್ ಬಾಂಚ್ ಪೊಲೀಸ್ ಅಧಿಕಾರಿ ದಯಾ ನಾಯಕ್ ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ವಿವರ: ದಾವೂದ್ ಗ್ಯಾಂಗ್‌ನ ಓರ್ವ ಸದಸ್ಯ, ಬೇಕಾಗಿದ್ದ ಮತ್ತು ಪೆರೋಲ್‌ನಿಂದ …

Read More »

ಸನಾತನ ಯಾತ್ರೆ ಮೇಲೆ ದುಷ್ಕರ್ಮಿಗಳ ದಾಳಿ; ಧ್ವಜ ಹರಿದು ಗಲಾಟೆ

ಮುಂಬೈ: ಸನಾತನ ಯಾತ್ರೆ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಧಾರ್ಮಿಕ ದ್ವಜವನ್ನು ಹರಿದು ಹಾಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮ ಭಕ್ತರು ಸನಾತನ ಮೆರವಣಿಗೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಮುಂಬೈನ ಭಾಯಂದರ್ ನಲ್ಲಿ ನಡೆಯುತ್ತಿದ್ದ ಸನಾತನ ಧರ್ಮ ಯಾತ್ರೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸನಾತನ ಧರ್ಮ ಯಾತ್ರೆ ಆರಂಭವಾಗುತ್ತಿದ್ದಂತೆ ಗಲಾಟೆ ನಡೆದಿದೆ. ರಾಮ ಭಕ್ತರು ತಮ್ಮ ತಮ್ಮ ಕಾರಿನಲ್ಲಿ ರಾಮ ಹಾಗೂ ಹನುಮನ ಧ್ವಜಗಳೊಂದಿಗೆ ಸಾಗುತ್ತಿದ್ದ ವೇಳೆ ಜೈ …

Read More »

BREAKING: ‘ರಾಮಮಂದಿರ’, ‘ರಾಮಲಲ್ಲಮೂರ್ತಿ’ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ, 5 ಶತಮಾನಗಳ ‘ಕಾಯುವಿಕೆ ಅಂತ್ಯ’

ಅಯ್ಯೋಧೆ: ಕೆಲ ನಿಮಿಶಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ, ರಾಮಲಲ್ಲಮೂರ್ತಿಯನ್ನು ಲೋಕಾರ್ಪಣೆ ಮಾಡಿದ್ದು, ಈ ಮೂಲಕ ಐದು ಶತಮಾನಗಳ ಕಾಯುವಿಕೆ ಅಂತ್ಯವಾಗಿದೆ. ರಾಮ್ ಲಲ್ಲಾ ವಿಗ್ರಹ ಪ್ರತಿಷ್ಠಾಪನಾ ಆಚರಣೆಗಾಗಿ ಪ್ರಧಾನಿ ಮೋದಿ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದರು. ದೇವಲಾಯದ ಅವರಣದಲ್ಲಿ ನೇರವೇರಿದ ಆಚರಣೆಗಳಲ್ಲಿ ಅವರು ಭಾಗವಹಿಸಿದರು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ …

Read More »

ಅಯೋಧ್ಯೆ ರಾಮಮಂದಿರದಲ್ಲಿಂದು ‘ಪ್ರಾಣ ಪ್ರತಿಷ್ಠೆ’: ದೇಶಾದ್ಯಂತ ಸಂಭ್ರಮಾಚರಣೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಅಯೋಧ್ಯೆಯಲ್ಲಿ ರಾಮಲಲ್ಲಾ ಪಟ್ಟಾಭಿಷೇಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ(ಪಿಎಂಒ) ಪ್ರಕಟಿಸಿದೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಒಂದು ಐತಿಹಾಸಿಕ ಘಟನೆಯಾಗಿದ್ದು, ಇದು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪಂಥಗಳ ಪ್ರತಿನಿಧಿಗಳು ಮತ್ತು ವಿವಿಧ ಹಿನ್ನೆಲೆಯ ಜನರ ಸೆಳೆದಿದೆ. ಇಡೀ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುವುದು. ವಿಶೇಷ ಪೂಜೆ, ಭಜನೆ, ಮಂತ್ರ ಪಠಣ, ಪ್ರಸಾದ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ಭಾರತೀಯರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.‌ ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಶ್ರೀ ರಾಮ ಜನ್ಮಭೂಮಿ ಮಂದಿರವು …

Read More »

ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೊ

ಬೆಂಗಳೂರು: ಬಾಹ್ಯಾಕಾಶದಲ್ಲಿ ಉಪಗ್ರಹದಿಂದ ಸೆರೆ ಹಿಡಿಯಲಾಗಿರುವ ಅಯೋಧ್ಯೆ ರಾಮ ಮಂದಿರದ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆಗೊಳಿಸಿದೆ. ಹೈದರಾಬಾದ್‍ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಕೇಂದ್ರವು ಈ ಚಿತ್ರವನ್ನು ಹಂಚಿಕೊಂಡಿದ್ದು, ಡಿಸೆಂಬರ್ 16ರಂದು ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರವನ್ನು ತೆಗೆಯಲಾಗಿತ್ತು ಎನ್ನಲಾಗಿದೆ. ಜನವರಿ 22ರ ನಾಳೆ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ.

Read More »

ವೈರಲ್ ಆಗಿರುವ ಈ ʻರಾಮಲಲ್ಲಾʼ ವಿಗ್ರಹ ನಿಜವಲ್ಲ : ತನಿಖೆಗೆ ಅಯೋಧ್ಯೆ ಅರ್ಚಕರ ಆಗ್ರಹ

ರಾಮಮಂದಿರ ಗರ್ಭಗುಡಿಯಲ್ಲಿನ ರಾಮಲಲ್ಲಾ ವಿಗ್ರಹದ ಫೋಟೋ ನಿಜವಲ್ಲ. ಅಯೋಧ್ಯೆ ರಾಮ್ ಲಲ್ಲಾ ವಿಗ್ರಹದ ಚಿತ್ರಗಳು ಹೇಗೆ ಸೋರಿಕೆಯಾದವು ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಒತ್ತಾಯಿಸಿದ್ದಾರೆ. ಪ್ರಾಣ ಪ್ರತಿಷ್ಠಾ ಪೂರ್ಣಗೊಳ್ಳುವ ಮೊದಲು ಭಗವಾನ್ ರಾಮನ ವಿಗ್ರಹದ ಕಣ್ಣುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಭಗವಾನ್ ರಾಮನ ಕಣ್ಣುಗಳನ್ನು ನೋಡಬಹುದಾದ ವಿಗ್ರಹವು ನಿಜವಾದ ವಿಗ್ರಹವಲ್ಲ. ಕಣ್ಣುಗಳನ್ನು ಯಾರು ಬಹಿರಂಗಪಡಿಸಿದರು ಮತ್ತು ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆಗುತ್ತಿವೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು” ಎಂದು ದಾಸ್ …

Read More »

‘ರಾಮ ಮಂದಿರ’ದ ಬಗ್ಗೆ ಟೀಕಿಸುತ್ತಿದ್ದಾಗಲೇ ಕುಸಿದ ಬೃಹತ್ ವೇದಿಕೆ : ಹಲವು ಮುಖಂಡರಿಗೆ ಗಾಯ

ಬಿಹಾರದ ದಿಹುರಿ ಗ್ರಾಮದಲ್ಲಿ ಅಯೋಧ್ಯೆಯ ರಾಮ ದೇವಾಲಯದ ‘ಪ್ರಾಣ್ ಪ್ರತಿಷ್ಠೆ’ಯನ್ನು ಸ್ಪೀಕರ್ ಒಬ್ಬರು ಟೀಕಿಸಲು ಪ್ರಾರಂಭಿಸಿದಾಗಲೇ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯು ಶುಕ್ರವಾರ ಇದ್ದಕ್ಕಿದ್ದಂತೆ ಕುಸಿದುಬಿದ್ದು ಹಲವರು ಗಾಯಗೊಂಡ ಘಟನೆ ನಡೆದಿದೆ.   ಗಯಾದಲ್ಲಿ ಪಸ್ಮಾಂಡ ದರ್ಶಿತ್ ಮಹಾಸಂಗನದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡರು ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಕ್ವಾಮ್ ಅನ್ಸಾರಿ ಅವರ 51ನೇ ಪುಣ್ಯಸ್ಮರಣೆಯನ್ನೂ ಆಚರಿಸಿದರು. ಮಹಾಸಂಗನ ಕಾರ್ಯಕ್ರಮಕ್ಕೆ ಸಂಘಟಕರು ದೊಡ್ಡ ವೇದಿಕೆ ಸಜ್ಜುಗೊಳಿಸಿದ್ದರು. ಸಭೆಯಲ್ಲಿ ಮಾಜಿ ಸಂಸದ ಅಲಿ ಅನ್ವರ್ ಕೂಡ ಒಬ್ಬರು. ಆರಂಭದಲ್ಲಿ, ಕಾರ್ಯಕ್ರಮವು ಸುಗಮವಾಗಿ ನಡೆಯುತ್ತಿತ್ತು, ಆದರೆ, …

Read More »

ಅಯೋಧ್ಯಾ ರಾಮಮಂದಿರ ಉದ್ಘಾಟನೆ ಹೆಸರಿನಲ್ಲಿ ನಿಮ್ಮ ಮೊಬೈಲ್‌ಗೆ ಈ ಸಂದೇಶ ಬಂದ್ರೆ ಹುಷಾರ್..! click👉

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗಿವೆ ಮತ್ತು ಪರಿಸ್ಥಿತಿಯ ಲಾಭವನ್ನು ಪಡೆಯಲು, ಹ್ಯಾಕರ್ಗಳು ಬಲೆಗಳನ್ನು ಹಾಕಲು ಪ್ರಾರಂಭಿಸಿದ್ದಾರೆ. ರಾಮ ಮಂದಿರದಲ್ಲಿ ಉಚಿತ ವಿಐಪಿ ಪ್ರವೇಶದ ಭರವಸೆ ನೀಡಿ ವಂಚಕರು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಹಲವಾರು ಬಳಕೆದಾರರು ವರದಿ ಮಾಡಿದ್ದಾರೆ. ಹಲವು ಮಾಧ್ಯಮಗಳ ವರದಿಯ ಪ್ರಕಾರ, ಜನವರಿ 22 ರಂದು ರಾಮ ಮಂದಿರಕ್ಕೆ ವಿಐಪಿ ಪ್ರವೇಶವನ್ನು ನೀಡುವ ನಕಲಿ ವಾಟ್ಸಾಪ್ ಸಂದೇಶವು ಬಳಕೆದಾರರಿಗೆ ಎಪಿಕೆ ಫೈಲ್ ಅನ್ನು ಡೌನ್ಲೋಡ್ ಮಾಡಲು ಕೇಳುತ್ತದೆ, ಅದು ಸಾಧನದಲ್ಲಿ ಸ್ಪೈವೇರ್ ಅಥವಾ …

Read More »

ಗಾಳಿಪಟ ಹಾರಿಸುವಾಗ ವಿದ್ಯುತ್ ಸ್ಪರ್ಶಿಸಿ 11 ವರ್ಷದ ಬಾಲಕ ಸಾವು

ಅಪಾರ್ಟ್ಮೆಂಟ್ನ ಟೆರೇಸ್ನಿಂದ ಗಾಳಿಪಟ ಹಾರಿಸುವಾಗ ಲೈವ್ ವೈರ್ ಸ್ಪರ್ಶಿಸಿ 11 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಹೈದರಾಬಾದ್ನ ಅಟ್ಟಾಪುರದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಮೃತ ಬಾಲಕ ಎಂ.ತನಿಷ್ಕ್ ತನ್ನ ಸ್ನೇಹಿತನೊಂದಿಗೆ ಇದ್ದಿದ್ದರೆ, ಆತನ ಅಣ್ಣ ಎಂ.ಮೋಹಿತ್ (14) ಅಟ್ಟಾಪುರದ ಲಕ್ಷ್ಮಿ ವಾಣಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯ ಟೆರೇಸ್ನಲ್ಲಿ ಮತ್ತೊಂದು ಗಾಳಿಪಟ ಹಾರಿಸುತ್ತಿದ್ದ ಎನ್ನಲಾಗಿದೆ.   ತನಿಷ್ಕ್ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ಗಮನಿಸಿದ ಇತರರು ಅವನ ಹೆತ್ತವರಿಗೆ ಮಾಹಿತಿ ನೀಡಿದರು. ಟೆರೇಸ್ ನಲ್ಲಿರುವ ಎಸಿ ಹೊರಾಂಗಣ ಘಟಕದಿಂದ ಲೈವ್ ವೈರ್ ಸಂಪರ್ಕಕ್ಕೆ …

Read More »

You cannot copy content of this page.