ಉಡುಪಿ: ದುಷ್ಕರ್ಮಿಗಳು ಉಡುಪಿ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಹಾಗೂ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಅವರ ಫೋಟೊ ಬಳಸಿ ಕೊಂಡು ವಾಟ್ಸಾಪ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
8810107494 ನಂಬರ್ ನಿಂದ ಎಸ್ಪಿ ಹಾಗೂ ಡಿಸಿ ಅವರೇ ಮೆಸೇಜ್ ಕಳುಹಿಸುವ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದು, ಎಸ್‌ಬಿಐ ಬ್ಯಾಂಕ್ ಖಾತೆಗೆ ಹಣ ಕಳುಹಿಸುವಂತೆ ತಿಳಿಸಿದೆ. ಈ ನಂಬರ್ ಮಧ್ಯಪ್ರದೇಶದ ಲೊಕೇಶನ್ ತೋರಿಸುತ್ತಿದೆ.
ಈ ಮೊಬೈಲ್ ನಂಬರ್ ನಿಂದ ಯಾವುದೇ ಸಂದೇಶ ಬಂದರೂ ಹಣ ಹಾಕಬಾರದು. ಈ ಬಗ್ಗೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪ್ರಕಟನೆ ತಿಳಿಸಿದೆ.