ಕಾರ್ಕಳ: ಕಳೆದ 2020 ಮಾರ್ಚ್ 16ರಂದು ಹೆಬ್ರಿಯ ದಿ. ಲಕ್ಷ್ಮಿ ಶೆಡ್ತಿ ಎಂಬವರ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತ ದಂಡ ವಿಧಿಸಿ ಕಾರ್ಕಳ ಎರಡನೇ ಹೆಚ್ಚುವರಿ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕಳೆದ 2020ರ ಮಾರ್ಚ್ 16ರಂದು ಹೆಬ್ರಿ ಗ್ರಾಮದ ಅಡಾಲ್‌ಬೆಟ್ಟು ಜಯಶಂಕರ ಎಂಬವರ ಸಹೋದರಿ ದಿ.ಲಕ್ಷ್ಮಿ ಶೆಡ್ತಿ ಎಂಬವರ ಮನೆಯ ಬೀಗ ಮುರಿದು ಕಪಾಟಿನಲ್ಲಿ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿ ಕೊನೆಗೆ ಅಡುಗೆ ಮನೆಯಲ್ಲಿದ್ದ ಸುಮಾರು 2000 ರೂ ಮೌಲ್ಯದ ರೆಗ್ಯುಲೇಟರ್ ಇರುವ ಎರಡು ಒಲೆಯ ಗ್ಯಾಸ್ ಸ್ಟವ್ ಅನ್ನು ಕಳವು ಮಾಡಿದ್ದರು. ಆರೋಪಿಗಳಾದ ರಾಜೇಶ್ ಹೆಗಡೆ ಮತ್ತು ರಾಜೇಶ್ ಪೂಜಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಹೆಬ್ರಿ ಠಾಣಾಧಿಕಾರಿ ಸುಮ ಬಿ ಅವರು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಕಾರ್ಕಳ 2ನೇ ಹೆಚ್ಚುವರಿ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಚೇತನ ಸಿ ಎಫ್ ಅವರು ಆರೋಪಿಗಳಿಗೆ 1 ವರ್ಷ ಸಾಧಾರಣ ಸಜೆ ಮತ್ತು ತಲಾ 2000 ತಂಡ, ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, ಕಳ್ಳತನ ಮಾಡಿರುವುದಕ್ಕೆ 1 ವರ್ಷ ಸಾಧಾರಣ ಸಜೆ ಮತ್ತು ತಲಾ 2000 ತಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, ವಿಧಿಸಿ ತೀರ್ಪು ನೀಡಿದ್ದಾರೆ.
ಕಾರ್ಕಳ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟ ಇನ್ನೊಂದು ಅಪಘಾತ ಪ್ರಕರಣದ ಆರೋಪಿಗೆ ನ್ಯಾಯಾಲಯ 6 ತಿಂಗಳ ಸಾಧಾರಣ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ .