ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ವಾಸುದೇವ ಆಸ್ರಣ್ಣ ಅವರ ಮನೆ ದರೋಡೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಎಕ್ಕಾರು ನಿವಾಸಿ ಸುಧೀರ್ ಭಟ್ ಮದ್ಯಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
2016ರ ಅಕ್ಟೋಬರ್ 4ರಂದು ಮಧ್ಯರಾತ್ರಿಯ ಸಮಯ ಗಿಡಿಗೆರೆಯಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅಸ್ರಣ್ಣರ ಮನೆಗೆ ನುಗ್ಗಿದ್ದ ಸುಮಾರು ಎಂಟು ಮಂದಿ ದರೋಡೆಕೋರರ ತಂಡ ಮಾರಾಕಾಸ್ರ್ರಗಳನ್ನು ತೋರಿಸಿ ಮನೆಮನೆಯಲ್ಲಿದ್ದವರನ್ನು ಬೆದರಿಸಿ ನಗ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಹಲವು ಆರೋಪಿಗಳಲ್ಲಿ ಸುಧೀರ್ ಭಟ್ ಕೂಡ ಒಬ್ಬನಾಗಿದ್ದ. ಇದೀಗ ಇವರು ಮಧ್ಯಪ್ರದೇಶದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.