ಕಾರ್ಕಳ: ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರೆಬೈಲು ಎಂಬಲ್ಲಿ ರಬ್ಬರ್ ಸ್ಮೋಕ್ ಹೌಸ್ ಬೆಂಕಿ ಬಿದ್ದು ರಬ್ಬರ್ ಶೀಟ್ ಗಳಿಗೆ ಹಾನಿಯಾದ ಘಟನೆ ನಡೆದಿದೆ.
ರಬ್ಬರ್ ಶೀಟ್ ಮಾಡಲು ಹಾಕಿದ್ದ ಬೆಂಕಿ ಕಟ್ಟಡಕ್ಕೆ ತಗುಲಿ ಈ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ 50 ರಬ್ಬರ್ ಶೀಟ್, ಕಟ್ಟಡದ ಮೇಲ್ಬಾವಣಿಗೆ ಹಾಕಿದ್ದ ಶೀಟ್ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ. ಎಂ. ಸಂಜೀವ್, ಸಿಬ್ಬಂದಿ ಸುರೇಶ್, ಜಯ ಮೂಲ್ಯ ಕೇಶವ್, ಸುಜಯ್, ವಿನಾಯಕ್ ಪಾಲ್ಗೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.