ಬ್ರಾಹ್ಮಣರಿಗೆ ಬ್ರಾಹ್ಮಣ್ಯವೇ ಶಕ್ತಿ ದೇವತಾರಾಧನೆ ಮಾಡುತ್ತಾ ಎಲ್ಲರಿಗೂ ಸುಖವನ್ನು ಹಾಗೂ ಒಳ್ಳೆಯದನ್ನು ಬಯಸುವನೇ ಬ್ರಾಹ್ಮಣನಾಗಿದ್ದು ಅನಾದಿ ಕಾಲದಿಂದಲೂ ಯಾವುದೇ ಮೀಸಲಾತಿಯ ಬಗ್ಗೆ ತಲೆಕೆಡಿಸಿಕೊಳ್ಳದೆ,ಯಾವುದೇ ನಿಂದನೆ ಅಪಹಾಸ್ಯಕ್ಕೆ ಕುಗ್ಗದೆ ತನ್ನ ಧೀಶಕ್ತಿಯೊಂದಿಗೆ ಬದುಕುತ್ತಿರುವ ಬ್ರಾಹ್ಮಣರು ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಸಂಘಟಿತರಾಗಬೇಕು ಎಂದು ಹಿರಿಯ ವೈದ್ಯ ಡಾ.ಹರಿಪ್ರಸಾದ್ ಐತಾಳ್ ಅಭಿಪ್ರಾಯ ಪಟ್ಟರು.ಬ್ರಾಹ್ಮಣ ಮಹಾ ಸಭಾ ಕೊಡವೂರು ಆಯೋಜಿಸಿದ್ದ ಹಿರಿಯ ದಂಪತಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪತ್ನಿ ವಿಜಯಾರವರೊಂದಿಗೆ ಮೂಡಬೆಟ್ಟುವಿನಲ್ಲಿ ಗೃಹ ಸನ್ಮಾನ ಸ್ವೀಕರಿಸಿದ ಅವರು ಬ್ರಾಹ್ಮಣ ಮಹಾ ಸಭಾ ಕೊಡವೂರು ತನ್ನ ಸಮುದಾಯಕ್ಕೆ ಹಾಗು ಸಮಾಜಕ್ಕೆ ನಡೆಸಿಕೊಂಡು ಬರುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ ಸ್ವಾಗತಿಸಿ ದರು.ಲಕ್ಷ್ಮೀ ನಾರಾಯಣ ಭಟ್ ಹಾಗು ರಮಾ ಲಕ್ಷ್ಮೀನಾರಾಯಣ ದಂಪತಿಗಳು ಹಿರಿಯ ದಂಪತಿಗಳಿಗೆ ಶಾಲು ,ಸೀರೆ,ಫಲ ಪುಷ್ಪ ನೀಡಿ ಸನ್ಮಾನಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ಸನ್ಮಾನ ಪತ್ರ ವಾಚಿಸಿ ಧನ್ಯವಾದವಿತ್ತರು. ಮಂಜುನಾಥ ಭಟ್,ಶ್ರೀಶ ಭಟ್, ಚಂದ್ರಶೇಖರ ರಾವ್ ,ಶ್ರೀನಿವಾಸ ಬಾಯರಿ, ಅನಂತ ಪದ್ಮನಾಭ ಭಟ್, ಮುರಳೀಧರ್ ಭಟ್ ನಾಗರಾಜ್, ಶುಭಾ ಉಪಸ್ಥಿತರಿದ್ದರು