Recent Posts

ಕೆನಡಾ ನಂಟು ಹೊಂದಿರುವ 43 ಕುಖ್ಯಾತ ಭಯೋತ್ಪಾದಕರ ಪಟ್ಟಿ ಬಿಡುಗಡೆ ಮಾಡಿದ NIA

ನವದೆಹಲಿ:ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯು(NIA) 43 ಕುಖ್ಯಾತ ಶಂಕಿತ ಭಯೋತ್ಪಾದಕರ ಚಿತ್ರಗಳನ್ನು ಸಾರ್ವಜನಿಕಗೊಳಿಸಿದೆ, ಅವರಲ್ಲಿ ಕೆಲವರು ಕೆನಡಾದಲ್ಲಿ ನೆಲೆಸಿದ್ದಾರೆ. ವಿವಿಧ ಕ್ರಿಮಿನಲ್ ಅಪರಾಧಗಳಲ್ಲಿ ತೊಡಗಿರುವ ಆರೋಪ ಹೊತ್ತಿರುವ ಈ ವ್ಯಕ್ತಿಗಳು ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಭಾವಿಸಲಾಗಿದೆ. ಕೆಲವು ಶಂಕಿತರ ಚಿತ್ರಗಳನ್ನು ಎನ್‌ಐಎ ಸಾರ್ವಜನಿಕಗೊಳಿಸಿದೆ. ದೇಶದಿಂದ ಪಲಾಯನಗೈದಿರುವ ಮತ್ತು ಖಲಿಸ್ತಾನಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾದ ಕೆಲವು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ಎನ್‌ಐಎ ಸಾರ್ವಜನಿಕಗೊಳಿಸಿದ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರಲ್ಲಿ ಅರ್ಶ್ ದಲ್ಲಾ, ಗೋಲ್ಡಿ ಬ್ರಾರ್, ಲಖ್ಬೀರ್ ಸಿಂಗ್ ಲಿಂಡಾ ಮುಂತಾದವರು ಸೇರಿದ್ದಾರೆ. ಪ್ರಸ್ತುತ ಕೆನಡಾದಲ್ಲಿ …

Read More »

ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನ ಬೈಲ್ ನಿಧನ

ಸಿದ್ದಾಪುರ: ಖ್ಯಾತ ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನ ಬೈಲ್ (57) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.ಯಕ್ಷಗಾನ ಭಾಗವರಲ್ಲದೆ ಕೃತಿ ರಚನಾಕಾರರೂ ಆಗಿದ್ದ ಅವರು ಹಲವು ಮೇಳಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಸಾಲಿಗ್ರಾಮ ಮೇಳ,ಸಿಗಂದೂರು ಮೇಳ ಹಾಗೂ ವಿವಿಧ ಬಯಲಾಟ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು.

Read More »

ಬಂಟ್ವಾಳ : ಮನೆಗೆ ಸಿಡಿಲು ಬಡಿದು ಅಪಾರ ನಷ್ಟ..!

ಬಂಟ್ವಾಳ : ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯೆಯ ಮನೆ ಮೇಲೆ ಸಿಡಿಲು ಬಡಿದ ಘಟನೆ ನಿನ್ನೆ ನಡೆದಿದೆ. ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಸತೀಶ್ ಶಂಭೂರ್ ಇವರ ಮನಗೆ ಸೋಮವಾರದಂದು ಸಿಡಿಲು ಬಡಿದು ಅಪಾರ ನಷ್ಟ ಸಂಭವಿಸಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು, ಪಿಡಿಓ. ಮಾಜಿ ಅಧ್ಯಕ್ಷೆ ಉಪಾಧ್ಯಕ್ಷರು ಪ್ರಮುಖರು ಮನೆಗೆ ಬೇಟಿ ನೀಡಿದ್ದಾರೆ

Read More »

You cannot copy content of this page.