Recent Posts

ಕಾರ್ಕಳ: ಮನನೊಂದು ಮೆಸ್ಕಾಂ ಉದ್ಯೋಗಿ ಆತ್ಮಹತ್ಯೆ..!

ಕಾರ್ಕಳ: ಅಣ್ಣನ ಸಾವಿನಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾದ ಕೇಪುಲ ಎಂಬಲ್ಲಿ ಸಂಭವಿಸಿದೆ. ನಿಶಾ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. ನಿಶಾ, ಮನೆ ಸಮೀಪದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ನಿಶಾ ಅಣ್ಣ ಆತ್ಮಹತ್ಯೆಗೆ ಶರಣಾಗಿದ್ದರು. ಇದೇ ನೋವಿನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ನಿಶಾ, ನಿಟ್ಟೆಯ ಮೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಉಡುಪಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಮುಹಮ್ಮದ್ ಗೌಸ್ ಅವರಿಗೆ ರಾಷ್ಟ್ರಪತಿ ಪದಕ ಪ್ರದಾನ

ಉಡುಪಿ: ಉಡುಪಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಮೀರ್ ಮುಹಮ್ಮದ್ ಗೌಸ್ 2021ನೇ ಸಾನಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ವನ್ನು ಸೋಮವಾರ ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಸ್ವೀಕರಿಸಿದರು. 1992ರಲ್ಲಿ ಅಗ್ನಿಶಾಮಕ ಇಲಾಖೆಗೆ ಸೇರ್ಪಡೆಗೊಂಡ ಇವರು, 30ವರ್ಷ ಗಳ ಸೇವಾ ಅವಧಿಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಪದೋನ್ನತಿ ಹೊಂದಿ ಪ್ರಸ್ತುತ ಸಹಾಯಕ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಸ್ವಾರ್ಥ ಸೇವೆಯ ಗೌರವಾರ್ಥವಾಗಿ ಇವರಿಗೆ ಇಲಾಖೆಯು 33 ಬಾರಿ ನಗದು ಬಹುಮಾನಗಳು, 2 ಉತ್ತಮ ಸೇವೆ ಪತ್ರಗಳನ್ನು ನೀಡಲಾಗಿದೆ. ಇವರಿಗೆ 2012ರಲ್ಲಿ ಮುಖ್ಯಮಂತ್ರಿಗಳ ಚಿನ್ನದ …

Read More »

ಉಡುಪಿ: ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ರೈಲ್ವೆ ಸಿಬಂದಿ

ಉಡುಪಿ: ರೈಲಿನಲ್ಲಿ ಇಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೇ ಸಿಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಅಭಿಮನ್ಯು ಎಂಬವರು ಮುಂಬೈಯಿಂದ ಮಂಗಳೂರಿಗೆ ತೆರಳಲು ಟಿಕೆಟ್ ಮಾಡಿದ್ದರು. ಆದರೆ ಅಚಾತುರ್ಯದಿಂದ ಅವರು ಪಟ್ನಾ ವಾಸ್ಕೋ ರೈಲನ್ನು ಹತ್ತಿದ್ದರು. ಈ ಬಗ್ಗೆ ಕೂಡಲೇ ಅರಿವಿಗೆ ಬಂದ ಕಾರಣ ಅವರು ರೈಲು ಹೊರಡಲು ವೇಳೆ ಇಳಿಯಲು ಯತ್ನಿಸಿದರು. ಇದರ ಪರಿಣಾಮ ಅವರು ಆಯತಪ್ಪಿ ಬಿದ್ದರೆನ್ನಲಾಗಿದೆ. ಕೂಡಲೇ ಅದೇ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮಡಗಾಂವ್ ಮಂಗಳೂರು ರೈಲಿನ ಟಿಟಿಇ ಉದಯ್ ಎಂ.ನಾಯ್ಕ ಆತನನ್ನು ರಕ್ಷಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದರು ಎಂದು ಕೊಂಕಣ ರೈಲ್ವೇಯ …

Read More »

You cannot copy content of this page.