Recent Posts

ಮಂಗಳೂರು: ಬೃಹತ್ ಸಮುದಾಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ಲಯನ್ ಅನಿಲ್ ದಾಸ್

ಮಂಗಳೂರು: ಲಯನ್ಸ್ ಕ್ಲಬ್ ಮಂಗಳಾದೇವಿ ಹಾಗೂ ಯಂಗ್ಸ್ ಫ್ರೆಂಡ್ಸ್ ಯುವಕ ಮಂಡಲ ಯುವತಿ ಮಂಡಲ ಪಣಂಬೂರು ಹಿಂದ್ ಕುಸ್ಟ್ ನಿವಾರಣ ಸಂಸ್ಥೆ ಮತ್ತು ಯುವ ವಾಹಿನಿ ಸಂಸ್ಥೆ ಸಹಬಾಗಿತ್ವದಲ್ಲಿ  ಎ. ಜೆ.ಆಸ್ಪತ್ರೆ ವೈದ್ಯಧಿಕಾರಿಗಳ ಸಹಯೋಗದಲ್ಲಿ ಬೃಹತ್  ಸಮುದಾಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಲಯನ್ ಅನಿಲ್ ದಾಸ್ ದೀಪ ಬೆಳಗಿಸಿ ಉದ್ಘಾಟಿಸಿದರು. ಹಾಗು ಲಯನ್ಸ್ ಕಾರ್ಯದರ್ಶಿ ಮಲ್ಲಿಕಾ ಆಳ್ವಾ,  ರಾಮ್ ಮೋಹನ್ ಆಳ್ವಾ, Dr ಕಾರ್ತಿಕ್,  ಯುವ ವಾಹಿನಿ ಅಧ್ಯಕ್ಷೆ ಸರಸ್ವತಿ., ನರೇಶ್ ಶಶಿಹಿತ್ಲ್,  ನವೀನ್, ಸುಬ್ರಮಣ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Read More »

ಲಯನ್ಸ್ ಕ್ಲಬ್ ಮಂಗಳಾದೇವಿ ವತಿಯಿಂದ ರಸ್ತೆ ಸುರಕ್ಷೆ ಬಗ್ಗೆ ಸಮಗ್ರ ಮಾಹಿತಿ ಶಿಬಿರ

ಮಂಗಳೂರು: ನಗರದ ಕಿಟಲ್ ಮೆಮೊರಿಯಲ್ ಸ್ಕೂಲ್ ನಲ್ಲಿ ಲಯನ್ಸ್ ಕ್ಲಬ್ ಮಂಗಳಾದೇವಿ ಆಯೋಜನೆಯಲ್ಲಿ ರಸ್ತೆ ಸುರಕ್ಷೆ ಬಗ್ಗೆ ಪ್ರೊಜೆಕ್ಟರ್ ಮೂಲಕ ಸಮಗ್ರ ಮಾಹಿತಿಯನ್ನು ನಿವೃತ್ತ ಸೈನಿಕ ಹಿರಿಯರಾದ ಭುಜಂಗ ಶೆಟ್ಟಿಯವರು ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್, ಕಾರ್ಯದರ್ಶಿ ಮಲ್ಲಿಕಾ ಆಳ್ವಾ,  ರಾಮ್ ಮೋಹನ್ ಆಳ್ವಾ,  ಮತ್ತು ಸಮಾಜ ಸೇವಕ ರಾದ ಕೆ. ಜೀ. ಭಟ್,  ಮತ್ತು ಶಾಲಾ ಮುಕ್ಯೋಪಾಧ್ಯಾಯರು,  ಹಾಗೂ ಕಾಲೇಜ್ ಪ್ರಿನ್ಸಿಪಾಲ್ ವಿಠ್ಠಲ್ ಕುಲಾಲ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Read More »

ಇವನದ್ದು ಹೊಟ್ಟೆನಾ ಅಥವಾ ಹುಂಡಿನಾ? ; 187 ನಾಣ್ಯಗಳನ್ನು ನುಂಗಿದ ಭೂಪ..!

ಬಾಗಲಕೋಟೆ : ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ (by accident) ಚಿಕ್ಕ ಮಕ್ಕಳು ನಾಣ್ಯ ನುಂಗಿದ್ದು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಬರೋಬ್ಬರಿ 187 ನಾಣ್ಯಗಳನ್ನು ನುಂಗಿ ಅಚ್ಚರಿ ಎಂಬಂತೆ ಸಾವಿನ ದವಡೆಯಿಂದ ಪಾರಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಸಂತೆ ಕೆಲ್ಲೂರ ಗ್ರಾಮದ ದ್ಯಾಮಪ್ಪ ಹರಿಜನ (54) ಎಂಬುವವರು 5 ರೂಪಾಯಿ ಮುಖಬೆಲೆಯ 56 ನಾಣ್ಯ, 2 ರೂಪಾಯಿ ಮೌಲ್ಯದ 51 ನಾಣ್ಯ ಮತ್ತು 1 ರೂಪಾಯಿ ಮುಖಬೆಲೆಯ 80 ನಾಣ್ಯ ಸೇರಿ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು. ಆ ನಾಣ್ಯಗಳ ತೂಕ …

Read More »

You cannot copy content of this page.