Recent Posts

‘ಕಾಂತಾರ 2’ಗೆ ದೈವದ ಅನುಮತಿ ಕೇಳಿದ ರಿಷಬ್‌ ಶೆಟ್ಟಿ : ಎಚ್ಚರಿಕೆ ಕೊಟ್ಟ ದೈವ!

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಮ್ಸ್ ‘ಕಾಂತಾರ’ ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿದ್ದಾರೆ. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ ನಿರ್ಮಿಸಿದ ಸಿನಿಮಾ 400 ಕೋಟಿಗೂ ಹೆಚ್ಚು ಹಣವನ್ನು ಚಿತ್ರಮಂದಿರಗಳಿಂದಲೇ ಕಲೆಕ್ಷನ್ ಮಾಡಿದೆ! ಕರ್ನಾಟಕ ಮಾತ್ರವೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ‘ಕಾಂತಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ನಿರೀಕ್ಷೆಗಿಂತಲೂ ಬಹುದೊಡ್ಡಮಟ್ಟದ ಗೆಲುವನ್ನು ಸಿನಿಮಾ ಕಂಡಿದೆ. ಇದಕ್ಕೆ ಚಿತ್ರತಂಡದ ಶ್ರಮದ ಜೊತೆಗೆ ದೈವದ ಆಶೀರ್ವಾದವೂ ಕಾರಣ ಎನ್ನಲಾಗುತ್ತಿದೆ. ಇದೀಗ ‘ಕಾಂತಾರ 2’ ಸಿನಿಮಾದ ಮಾತುಕತೆ ಶುರುವಾಗಿದ್ದು, ‘ಕಾಂತಾರ 2’ ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ …

Read More »

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ನಾಲ್ವರ ಗುರುತು ಪತ್ತೆ..!

ಕಾಸರಗೋಡು: ಮಂಗಳೂರಿನಲ್ಲಿ ಕುಕ್ಕರ್‌ ಪ್ರಕರಣದ ಆರೋಪಿ ಶಾರೀಕ್‌ ಕೊಚ್ಚಿಯಲ್ಲಿ ವಿದೇಶಿಗ ಸಹಿತ ನಾಲ್ವರ ಸಂಪರ್ಕದಲ್ಲಿದ್ದನೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌.ಐ.ಎ.) ಅವರ ಗುರುತು ಪತ್ತೆಹಚ್ಚಿದ್ದು ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ. ಸ್ಫೋಟದ ಮುನ್ನ ಕೊಚ್ಚಿಗೆ ಹೋಗಿದ್ದು, ಅಲ್ಲಿ ವ್ಯವಹಾರ ನಡೆಸಿದವರ ಪೈಕಿ ನಾಲ್ವರ ಮಾಹಿತಿ ಲಭಿಸಿದೆ. ಇವರಲ್ಲಿ ಓರ್ವ ವಿದೇಶಿಗ, ಇಬ್ಬರು ಕೇರಳೀಯರು ಮತ್ತು ತಮಿಳುನಾಡು ನಿವಾಸಿಯಾಗಿದ್ದಾನೆ. ಇವರ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸ ಲಾಗಿದ್ದರೂ ಕರ್ನಾಟಕ ವಿಶೇಷ ತನಿಖಾ ತಂಡ ಈಗಲೂ ತನಿಖೆಯನ್ನು ಮುಂದುವರಿಸುತ್ತಿದೆ. ಕೇರಳದಲ್ಲಿ ನಡೆಸುತ್ತಿರುವ …

Read More »

BREAKING NEWS: ಕಾರ್ಕಳದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಬಸ್, ಕಾರು ಡಿಕ್ಕಿ- ಮೂವರು ಮೃತ್ಯು

ಕಾರ್ಕಳ: ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಬಜೆಗೋಲಿ ಸಮೀಪದ ನೆಲ್ಲಿಕಾರು ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ ಮೃತರನ್ನು ಆಂಧ್ರಪ್ರದೇಶ ಮೂಲದ ನಾಗರಾಜ್ (40), ಅವರ ಪತ್ನಿ ಪ್ರತ್ಯುಷಾ (32) ಹಾಗೂ ಎರಡು ವರ್ಷದ ಮಗು ಎಂದು ಗುರುತಿಸಲಾಗಿದೆ ಇವರು ತೀರ್ಥಕ್ಷೇತ್ರವಾದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದು ಪರಿಶೀಲ ನಡೆಸಿದ್ದಾರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Read More »

You cannot copy content of this page.