Recent Posts

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ 5 ವರ್ಷದ ಬಾಲಕ ಸಾವು

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿದ ಪರಿಣಾಮ 5 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ದೊಡ್ಡ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಗೌರಿ – ಯಶ್ವಂತ್ ದಂಪತಿಯ ಪುತ್ರ ರೋಹನ್ ಮೃತಪಟ್ಟ ಬಾಲಕನಾಗಿದ್ದು, ಈತ ಅಂಗನವಾಡಿ ಕೇಂದ್ರದಲ್ಲಿ ಆಟವಾಡುವಾಗ ಹಾವು ಕಚ್ಚಿದೆ. ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ಮಕ್ಕಳನ್ನು ಕರೆತರಲು ಮನೆಗಳಿಗೆ ಹೋಗಿದ್ದರು ಎನ್ನಲಾಗಿದೆ. ಹಾವು ಕಚ್ಚಿದ ಪರಿಣಾಮ ಬಾಲಕ ಪ್ರಜ್ಞೆ ತಪ್ಪಿದ್ದು, ಆತಂಕಗೊಂಡ ಬಾಲಕನ ತಂದೆ ಬೈಕಿನಲ್ಲಿ ಹೆತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಸಕಲೇಶಪುರಕ್ಕೆ …

Read More »

ಕೊರೊನಾ ಭೀತಿ ಹಿನ್ನೆಲೆ : ಇಂದು ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು : ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ಕಾರ್ಮೋಡ ಆವರಿಸಿದ್ದು, ಇದರಿಂದ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. ಈಗಾಗಲೇ ಸರ್ಕಾರ ಕೊರೊನಾ ಕಟ್ಟಿ ಹಾಕಲು ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಮಾರ್ಗಸೂಚಿ ಕೂಡ ಪ್ರಕಟವಾಗಿದ್ದು, ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಇಂದು ಮತ್ತೊಂದು ತುರ್ತು ಸಭೆ ನಡೆಸಲಿದೆ ಎಂದು ಸುವರ್ಣಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ. ಕೊರೊನಾ ನಿರ್ವಹಣೆ ಸಂಬಂಧ ಶನಿವಾರ ರಾಜ್ಯದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ ಸಭೆ …

Read More »

BREAKING NEWS : ಅಯ್ಯಪ್ಪನ ದರ್ಶನ ಪಡೆದು ವಾಪಸ್ಸಾಗುವಾಗ ಘೋರ ಅಪಘಾತ ; 40 ಅಡಿ ಕಂದಕಕ್ಕೆ ಕಾರು ಬಿದ್ದು, 8 ಭಕ್ತರು ಸಾವು

 ಕೇರಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಯ್ಯಪ್ಪ ಭಕ್ತರು ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಕಣಿವೆಗೆ ಪಲ್ಟಿಯಾಗಿದ್ದು, ಈ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಥೇಣಿ ಜಿಲ್ಲೆಯ ಕುಮುಲಿ ಪರ್ವತ ಕಣಿವೆಯಲ್ಲಿ ಘೋರ ಘಟನೆ ನಡೆದಿದ್ದು, 40 ಅಡಿ ಆಳದ ಗುಂಡಿಗೆ ಕಾರು ಉರುಳಿಬಿದ್ದ ಪರಿಣಾಮ 8 ಭಕ್ತರು ಸಾವನ್ನಪ್ಪಿದ್ದಾರೆ ಎಂದು ತೇನಿ ಜಿಲ್ಲಾಧಿಕಾರಿ ಕೆ.ವಿ.ಮುರಳೀಧರನ್ ತಿಳಿಸಿದ್ದಾರೆ.

Read More »

You cannot copy content of this page.