

ಉಡುಪಿ: ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಆಸ್ಪತ್ರೆಯ ಎದುರು ಒಳ ಚರಂಡಿ ಕುಸಿದ ಪರಿಣಾಮ ರಸ್ತೆಯೇ ಬಾಯ್ಬಿಟ್ಟಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.
ಉಡುಪಿಯ ಸಿಟಿ ಬಸ್ ನಿಲ್ದಾಣ ಸದಾ ವಾಹನಗಳ ಜನಜಂಗುಳಿಯಿಂದ ತುಂಬಿಕೊಂಡಿರುತ್ತದೆ. ಇಲ್ಲಿ ಘನ ವಾಹನಗಳ ಓಡಾಟ ಹೆಚ್ಚು ಇರುವ ಕಾರಣ ಒಳ ಚರಂಡಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ವಾರ ಸಣ್ಣ ಪ್ರಮಾಣದಲ್ಲಿ ರಸ್ತೆಯ ಇಂಟರ್ ಲಾಕ್ ಗಳು, ಒಳಚರಂಡಿ ಸೇರಿತ್ತು. ಆದ್ರೆ ಇದೀಗ ದೊಡ್ಡ ಪ್ರಮಾಣದಲ್ಲಿ ಇಂಟರ್ ಲಾಕ್ ಕುಸಿದಿದ್ದು ಒಳಚರಂಡಿ ಬಾಯ್ಬಿಟ್ಟಿದೆ. ದಿನದಿಂದ ದಿನಕ್ಕೆ ಬಾವಿಯಾಕಾರದಲ್ಲಿ ಹೊಂಡ ನಿರ್ಮಾಣ ಆಗುತ್ತಿದ್ದು ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಈ ಬಗ್ಗೆ ಉಡುಪಿ ನಗರಸಭೆ ಶೀಘ್ರವೇ ಎಚ್ಚೆತ್ತು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.