ಬೆಕ್ಕಿನ ಮರಿ ಅಂದುಕೊಂಡು ಚಿರತೆ ಮರಿಗಳನ್ನು ಮನೆಗೆ ಕರೆತಂದ ಮಕ್ಕಳು, ಬಳಿಕ ಏನಾಯ್ತು ಗೊತ್ತಾ..?

ನವದೆಹಲಿ : ಮಕ್ಕಳು ತಮ್ಮ ಪೋಷಕರೊಂದಿಗೆ ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಗದ್ದೆಯಲ್ಲಿದ್ದ ಎರಡು ಚಿರತೆ ಮರಿಗಳನ್ನು ಬೆಕ್ಕಿನ ಮರಿ ಎಂದು ಮನೆಗೆ ತೆಗೆದುಕೊಂಡು ಬಂದ ಙಟನೆ ದೆಹಲಿಯ ಗುರಗ್ರಾಮದಲ್ಲಿ ನಡೆದಿದೆ.

ಗುರುಗ್ರಾಮ್‌ನಿಂದ 56 ಕಿಲೋಮೀಟರ್ ದೂರದಲ್ಲಿರುವ ನುಹ್‌ನ ಕೋಟ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ತಮ್ಮ ಪಾಲಕರೊಂದಿಗೆ ದನ ಮೇಯಿಸಲು ಹೋಗಿದ್ದು, ಸಣ್ಣ ಮರಿಗಳನ್ನು ಆಟವಾಡುತ್ತಿರುವುದನ್ನು ಕಂಡು ಬೆಕ್ಕಿನ ಮರಿಗಳು ಎಂದು ಮನೆಗೆ ಕರೆತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಗುರುವಾರ ರಾತ್ರಿ ಮಕ್ಕಳು ಚಿರತೆ ಮರಿಗಳೊಂದಿಗೆ ಮನೆಯಲ್ಲಿ ಆಟವಾಡುತ್ತಿರುವುದು ಕಂಡುಬಂದಿದೆ, ಅವರು ಅದನ್ನು ಬೆಕ್ಕಿನ ಮರಿ ಎಂದು ತಪ್ಪಾಗಿ ಭಾವಿಸಿದ್ದಾರೆ. ಕೊನೆಗೆ ಚಿರತೆ ಮರಿ ಎಂದು ಗೊತ್ತಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಮರಿಯನ್ನು ರಕ್ಷಿಸಿದ್ದಾರೆ. ಮರಿಗಳಿಗೆ ಕೇವಲ ನಾಲ್ಕು ದಿನಗಳಷ್ಟೇ ಆಗಿದ್ದು, ಇನ್ನೂ ಸರಿಯಾಗ ಕಣ್ಣನ್ನು ಬಿಟ್ಟಿಲ್ಲ ಎಂದು ತಿಳಿದು ಬಂದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಮರಿಗಳನ್ನು ತಾಯಿಯ ಹತ್ತಿರ ಸೇರಿಸುವಲ್ಲಿ ಸಫಲರಾಗಿದ್ದಾರೆ ಎಂದು ವರದಿಯಾಗಿದೆ.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.