ಪಿಯುಸಿ: ಕಾಶಿಪಟ್ಣ ದಾರುನ್ನೂರ್ ಸಂಸ್ಥೆಗೆ ಶೇ. 100 ಫಲಿತಾಂಶ

ಕಾಶಿಪಟ್ಣ, ಎ. 23: ಶಹೀದ್ ಸಿಎಂ ಅಬ್ದುಲ್ಲ ಮುಸ್ಲಿಯಾರ್ ಫೌಂಡೇಶನ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಸಂಸ್ಥೆಯ 2022-23ನೇ ಸಾಲಿನ ಪಿಯು ವಿದ್ಯಾರ್ಥಿಗಳು ಶೇ. 100 ಫಲಿತಾಂಶ ದಾಖಲಿಸಿದ್ದಾರೆ.
ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಸಂಸ್ಥೆಯ ಆಡಳಿತ ಸಮಿತಿ ಹಾಗೂ ಪ್ರಾಧ್ಯಾಪಕ ವೃಂದ ಅಭಿನಂದನೆಯನ್ನು ಸಲ್ಲಿಸಿದ್ದು, 3 ಡಿಸ್ಟಿಂಕ್ಷನ್ 12 ಪ್ರಥಮ ಶ್ರೇಣಿ ಹಾಗೂ 5 ದ್ವಿತೀಯ ಶ್ರೇಣಿಯೊಂದಿಗೆ ಅಭೂತಪೂರ್ವ ಸಾಧನೆಯ ನ್ನು ಪಡೆದಿದ್ದಾರೆ.
ಇದಲ್ಲದೆ ದಾರುಲ್ ಹುದಾ ವಿಶ್ವ ವಿದ್ಯಾಲಯದ ಸೀನಿಯರ್ ಸೆಕೆಂಡರಿ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಭಾರತದ ವಿವಿಧ ರಾಜ್ಯಗಳಿಂದ 32 ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಟಾಪ್-10 ಸ್ಥಾನದಲ್ಲಿ ದಾರುನ್ನೂರ್ ಸಂಸ್ಥೆಯ 3 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದು, ಇದು ದಾರುನ್ನೂರ್ ಸಂಸ್ಥೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಅಮೀನ್ ಹುದವಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Check Also

ಮಕ್ಕಳು ಓದಿದ್ದೆಲ್ಲವೂ ಮರೆತು ಬಿಡಲು ಈ ರೀತಿಯ ಅಭ್ಯಾಸವೇ ಕಾರಣ, ಹೆತ್ತವರೇ ಒಮ್ಮೆ ಗಮನಿಸಿ

ಈಗಿನ ಮಕ್ಕಳಿಗೆ ಪರೀಕ್ಷೆ ಎಂದರೆ ಅಗ್ನಿಪರೀಕ್ಷೆ. ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಮಕ್ಕಳ ಪರೀಕ್ಷೆ ತಯಾರಿಯು ಜೋರಾಗಿಯೇ ಇರುತ್ತದೆ. ಈ …

Leave a Reply

Your email address will not be published. Required fields are marked *

You cannot copy content of this page.