

ಬೆಳಗಾವಿ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡೋದಕ್ಕೆ ವಿಧಾನಸಭೆಯ ಸದನಕ್ಕೆ ತೆರಳಿದ್ದಂತ ಮೂಡುಗೆರೆ ಶಾಸಕಿ ನಯನಾ ಮೋಟಮ್ಮ ಮಹಾ ಯಡವಟ್ಟು ಮಾಡಿದ್ದಾರೆ. ಅದೇ ಮುಖ್ಯಮಂತ್ರಿಗಾಗಿ ಇರುವಂತ ಆಸನದಲ್ಲಿ ಕುಳಿತಿದ್ದು ಆಗಿದೆ.
ಹೌದು ಅಚಾನಕ್ಕಾಗಿ ಸಿಎಂ ಆಸನದ ಮೇಲೆ ಕುಳಿತು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಹಾ ಯಡವಟ್ಟು ಮಾಡಿದ್ದಾರೆ.
ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಗಾಗಿ ತೆರಳಿದ್ದಾಗ ಈ ಯಡವಟ್ಟು ನಡೆದಿದೆ.
ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಮಾತನಾಡುತ್ತಿದ್ದ ವೇಳೆಯಲ್ಲಿ ಅಚಾನಕ್ ಆಗಿ ಸಿಎಂ ಆಸನದ ಮೇಲೆ ಕುಳಿತುಕೊಂಡಿದ್ದಾರೆ. ಕೂಡಲೇ ಇದನ್ನ ಗಮನಿಸಿದಂತ ಡಿಸಿಎಂ ಡಿಕೆ ಶಿವಕುಮಾರ್ ನಯನಾ ಮೋಟಮ್ಮ ಅವರನ್ನು ಕೂರದಂತೆ ಕೈಹಿಡಿದು ಸೂಚಿಸಿದ್ದಾರೆ.
ಇದಷ್ಟೇ ಅಲ್ಲದೇ ಸಿಎಂ ಆಸನದ ಅದು, ಅದರಲ್ಲಿ ಕೂರಬಾರದು. ಇಲ್ಲಿಂದ ತೆರಳುವಂತೆ ಶಾಸಕಿ ನಯನಾ ಮೋಟಮ್ಮಗೆ ಡಿಸಿಎಂ ಡಿಕೆಶಿ ಸೂಚಿಸಿದ್ದಾರೆ. ಕೂಡಲೇ ಅವರ ಸೂಚನೆಯಂತೆ ಸದನದಿಂದ ಹೊರ ನಡೆದಿದ್ದಾರೆ.